ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 21 JUNE 2021
ಕರೋನ ಪ್ರಮಾಣ ತಗ್ಗಿರುವುದರಿಂದ ಶಿವಮೊಗ್ಗದಲ್ಲಿ ಲಾಕ್ ಡೌನ್ ಸ್ವಲ್ಪ ಸಡಿಲಗೊಳಿಸಲಾಗಿದೆ. ಶಿವಮೊಗ್ಗ ಸಿಟಿಯಲ್ಲಿ ವಾಹನ ಸಂಚಾರ ಆರಂಭವಾಗಿದೆ. ಅಂಗಡಿಗಳು ಓಪನ್ ಆಗಿವೆ.
ಸಿಟಿಯಲ್ಲಿ ಎಲ್ಲೆಲ್ಲಿ ಹೇಗಿದೆ ಸ್ಥಿತಿ?
ಶಿವಮೊಗ್ಗದ ಪ್ರಮುಖ ವಾಣಿಜ್ಯ ಕೇಂದ್ರ ಗಾಂಧಿ ಬಜಾರ್ನಲ್ಲಿ ವ್ಯಾಪಾರ ವಾಹಿವಾಟು ಆರಂಭವಾಗಿದೆ. ದಿನಸಿ, ಪಾತ್ರೆ ಅಂಗಡಿಗಳು, ಗಿರವಿ ವ್ಯವಹಾರ ಶುರುವಾಗಿದೆ. ಮದ್ಯಾಹ್ನ 12 ಗಂಟೆವರೆಗೆ ಇಲ್ಲಿ ಅವಕಾಶ ನೀಡಲಾಗಿದೆ.
ಚೈತನ್ಯ ಪಡೆದ ಬಿ.ಹೆಚ್.ರಸ್ತೆ
ಇನ್ನು ಬಿ.ಹೆಚ್.ರಸ್ತೆ ಪುನಃ ಜೀವ ಕಳೆ ಪಡೆದುಕೊಂಡಿದೆ. ಇಲ್ಲಿರುವ ಕೆಲವು ಅಂಗಡಿಗಳ ಬಾಗಿಲು ತೆಗೆಯಲಾಗಿದೆ. ವಾಹನ ಸಂಚಾರವು ಸುಗಮಗೊಂಡಿದೆ. ಶಿವಪ್ಪನಾಯಕ ಹೂವಿನ ಮಾರುಟ್ಟೆ ಪಕ್ಕದ ರಸ್ತೆಯಲ್ಲಿ ಹೂವಿನ ಮಾರಾಟವು ಆರಂಭವಾಗಿದೆ.
ನೆಹರೂ ರೋಡ್ ಟ್ರಾಫಿಕ್ ಜಾಮ್
ಲಾಕ್ ಡೌನ್ನಿಂದಾಗಿ ಕಳೆಗುಂದಿದ್ದ ನೆಹರೂ ರಸ್ತೆಯಲ್ಲೂ ಅಂಗಡಿ ಮುಂಗಟ್ಟು ಓಪನ್ ಆಗಿವೆ. ಒನ್ ವೇ ಸಂಚಾರವಿದ್ದ ನೆಹರೂ ರಸ್ತೆಯಲ್ಲಿ ಇವತ್ತಿನಿಂದ ಟೂ ವೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೂ ಕೆಲವರು ಒನ್ ವೇ ಸಂಚಾರ ಮಾಡಿದ್ದರಿಂದ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ದುರ್ಗಿಗುಡಿಯಲ್ಲಿ ಜನ, ವಾಹನ
ದುರ್ಗಿಗುಡಿಯೂ ಜನ, ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಎಲ್ಎಲ್ಆರ್ ರಸ್ತೆ, ನಂಜಪ್ಪ ಆಸ್ಪತ್ರೆ ಪಕ್ಕದ ರಸ್ತೆ, ಕುವೆಂಪು ರಸ್ತೆಯಲ್ಲೂ ಅಂಗಡಿಗಳ ಬಾಗಿಲು ತೆಗೆಯಲಾಗಿದೆ. ಜೈಲ್ ರಸ್ತೆಯಲ್ಲೂ ವಾಹನ, ಜನ ಸಂಚಾರ ಹಿಂದಿನ ಸ್ಥಿತಿಗೆ ಮರಳಿದೆ.
ವಿನೋಬನಗರ, ಚೌಕಿಯಲ್ಲೂ ವಹಿವಾಟು ಶುರು
ಲಾಕ್ ಡೌನ್ನಿಂದಾಗಿ ವಿನೋಬನಗರ, ಪೊಲೀಸ್ ಚೌಕಿ, 100 ಅಡಿ ರಸ್ತೆಯಲ್ಲಿ ಜನ, ವಾಹನ ಸಂಚಾರ ತಗ್ಗಿತ್ತು. ಇವತ್ತು ರಿಲೀಫ್ ಸಿಗುತ್ತಿದ್ದಂತೆ ಜನರು ಅಗತ್ಯ ವಸ್ತು ಖರೀದಿ ಸೇರಿದಂತೆ ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಹೋಲ್ ಸೇಲ್ ಖರೀದಿಗಷ್ಟೆ ಅವಕಾಶವಿದ್ದರೂ, ಕೆಲವರು ಮನೆಗಾಗಿ ತರಕಾರಿ ಖರೀದಿಗೆ ಬಂದಿದ್ದರು.
ವಿದ್ಯಾನಗರ, ಗೋಪಾಳ, ಎನ್.ಟಿ.ರಸ್ತೆ, ಓ.ಟಿ.ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಜಿಲ್ಲಾಡಳಿತ ಸೂಚಿಸಿರುವ ಅಂಗಡಿಗಳ ಬಾಗಿಲು ತೆಗೆಯಲಾಗಿದೆ. ಬಟ್ಟೆ ಮತ್ತು ಚಿನ್ನಾಭರಣ ಮಳಿಗೆಗಳಿಗೆ ನಿರ್ಬಂಧ ವಿಧಿಸಿರುವುದರಿಂದ ಇವೆರಡು ವ್ಯಾಪಾರ ಇಲ್ಲವಾಗಿದೆ. ಉಳಿದಂತೆ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422