DASARA NEWS, 8 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ವಿವರ ಇಲ್ಲಿದೆ.
♦ ಕಲಾ ದಸರಾ | ಸಮಯ : ಬೆಳಗ್ಗೆ 10ಕ್ಕೆ | ಸ್ಥಳ : ಶಿವಪ್ಪನಾಯಕ ಅರಮನೆ | ಚಿತ್ರಕಲಾ ಪ್ರರ್ಶನಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಚಾಲನೆ | ಛಾಯಾಚಿತ್ರ ಪ್ರದರ್ಶನಕ್ಕೆ ಡಿ.ಸಿ.ಎಫ್ ಪ್ರಸನ್ನ ಕೃಷ್ಣ ಪಟೇಗಾರ್ ಅವರಿಂದ ಚಾಲನೆ
♦ ಪೌರ ಕಾರ್ಮಿಕ ದಸರಾ | ಸಮಯ : ಬೆಳಗ್ಗೆ 11ಕ್ಕೆ | ಸ್ಥಳ : ಕುವೆಂಪು ರಂಗಮಂದಿರ | ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್. ಜಾನಪದ ನೃತ್ಯ ಹಾಗೂ ಗೀತೆ, ಸೂಪರ್ ಮಿನಿಟ್ ಆಟಗಳು, ನೃತ್ಯ, ಹಾಡು, ಸಾಂಪ್ರದಾಯಕ ಉಡುಗೆ ಸ್ಪರ್ಧೆ, ನಾಟಕ ಪ್ರದರ್ಶನ ಕಾರ್ಯಕ್ರಮ ಇರಲಿದೆ.
♦ ಕಲಾ ಜಾಥಾ | ಸಮಯ : ಸಂಜೆ 4ಕ್ಕೆ | ಸ್ಥಳ : ಶಿವಪ್ಪನಾಯಕ ವೃತ್ತ | ವಿವಿಧ ಕಲಾ ತಂಡಗಳು ಜಾಥಾದಲ್ಲಿ ಭಾಗವಹಿಸಲಿವೆ.
♦ ಆಹಾರ ಮೇಳ | ಸಮಯ : ಸಂಜೆ 6ಕ್ಕೆ | ಸ್ಥಳ : ಫ್ರೀಡಂ ಪಾರ್ಕ್ | ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಂದ ಚಾಲನೆ
♦ ಪೌರಾಣಿಕ ನಾಟಕ ಪ್ರದರ್ಶನ | ಸಮಯ : ಸಂಜೆ 7 ರಿಂದ | ಸ್ಥಳ : ಕುವೆಂಪು ರಂಗಮಂದಿರ | ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ನಿಕಟಪೂರ್ವ ಅಧ್ಯಕ್ಷ ಕೊಟ್ರಪ್ಪ ಜಿ.ಹಿರೇಮಾಗಡಿ ಅವರಿಂದ ಉದ್ಘಾಟನೆ. ಮಹಿಷಾಸುರ ಮರ್ದಿನಿ ನಾಟಕ ಪ್ರದರ್ಶನ
ಇದನ್ನೂ ಓದಿ » ಅಡಿಕೆ ಧಾರಣೆ | 4 ಅಕ್ಟೋಬರ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200