ಶಿವಮೊಗ್ಗ ದಸರಾದಲ್ಲಿ ಇವತ್ತು ಏನೆಲ್ಲ ಕಾರ್ಯಕ್ರಮವಿದೆ? ಇಲ್ಲಿದೆ ಲಿಸ್ಟ್‌

DASARA NEWS, 8 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ವಿವರ ಇಲ್ಲಿದೆ. (ಈ ಸುದ್ದಿಯನ್ನು ಇನ್ನು 67 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

♦ ಕಲಾ ದಸರಾ | ಸಮಯ : ಬೆಳಗ್ಗೆ 10ಕ್ಕೆ | ಸ್ಥಳ : ಶಿವಪ್ಪನಾಯಕ ಅರಮನೆ | ಚಿತ್ರಕಲಾ ಪ್ರರ್ಶನಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಚಾಲನೆ | ಛಾಯಾಚಿತ್ರ ಪ್ರದರ್ಶನಕ್ಕೆ ಡಿ.ಸಿ.ಎಫ್‌ ಪ್ರಸನ್ನ ಕೃಷ್ಣ ಪಟೇಗಾರ್‌ ಅವರಿಂದ ಚಾಲನೆ

♦ ಪೌರ ಕಾರ್ಮಿಕ ದಸರಾ | ಸಮಯ : ಬೆಳಗ್ಗೆ 11ಕ್ಕೆ | ಸ್ಥಳ : ಕುವೆಂಪು ರಂಗಮಂದಿರ | ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಸಂಘದ ಅಧ್ಯಕ್ಷ ಎ.ಅಮೃತ್‌ ರಾಜ್.‌ ಜಾನಪದ ನೃತ್ಯ ಹಾಗೂ ಗೀತೆ, ಸೂಪರ್‌ ಮಿನಿಟ್‌ ಆಟಗಳು, ನೃತ್ಯ, ಹಾಡು, ಸಾಂಪ್ರದಾಯಕ ಉಡುಗೆ ಸ್ಪರ್ಧೆ, ನಾಟಕ ಪ್ರದರ್ಶನ ಕಾರ್ಯಕ್ರಮ ಇರಲಿದೆ.

♦ ಕಲಾ ಜಾಥಾ | ಸಮಯ : ಸಂಜೆ 4ಕ್ಕೆ | ಸ್ಥಳ : ಶಿವಪ್ಪನಾಯಕ ವೃತ್ತ | ವಿವಿಧ ಕಲಾ ತಂಡಗಳು ಜಾಥಾದಲ್ಲಿ ಭಾಗವಹಿಸಲಿವೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

♦ ಆಹಾರ ಮೇಳ | ಸಮಯ : ಸಂಜೆ 6ಕ್ಕೆ | ಸ್ಥಳ : ಫ್ರೀಡಂ ಪಾರ್ಕ್‌ | ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅವರಿಂದ ಚಾಲನೆ

♦ ಪೌರಾಣಿಕ ನಾಟಕ ಪ್ರದರ್ಶನ | ಸಮಯ : ಸಂಜೆ 7 ರಿಂದ | ಸ್ಥಳ : ಕುವೆಂಪು ರಂಗಮಂದಿರ | ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ನಿಕಟಪೂರ್ವ ಅಧ್ಯಕ್ಷ ಕೊಟ್ರಪ್ಪ ಜಿ.ಹಿರೇಮಾಗಡಿ ಅವರಿಂದ ಉದ್ಘಾಟನೆ. ಮಹಿಷಾಸುರ ಮರ್ದಿನಿ ನಾಟಕ ಪ್ರದರ್ಶನ

ಇದನ್ನೂ ಓದಿ » ಅಡಿಕೆ ಧಾರಣೆ | 4 ಅಕ್ಟೋಬರ್ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment