ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 26 ಅಕ್ಟೋಬರ್ 2020
ಕೋವಿಡ್ ಆತಂಕ, ಮಳೆ ಅಡ್ಡಿಯ ನಡೆವೆಯು ಶಿವಮೊಗ್ಗದಲ್ಲಿ ವಿಜಯದಶಮಿ ಮೆರವಣಿಗೆ ವೈಭವದಿಂದ ನಡೆಯಿತು. ತಹಶೀಲ್ದಾರ್ ನಾಗರಾಜ್ ಅವರು ಅಂಬು ಹೊಡೆಯುವ ಮೂಲಕ ನಾಡಹಬ್ಬ ಸಂಪನ್ನಗೊಂಡಿದೆ.
ಶಿವಮೊಗ್ಗದ ಹಳೆ ಜೈಲು ಆವರಣದಲ್ಲಿ ನಿರ್ಮಿಸಲಾಗಿದ್ದ ಬನ್ನಿ ಮಂಟಪದಲ್ಲಿ ತಹಶೀಲ್ದಾರ್ ನಾಗರಾಜ್ ಅವರು ಬನ್ನಿ ಕಡಿಯುವ ಸಂಪ್ರದಾಯ ನೆರವೇರಿಸಿದರು. ಒಂದೆ ಸರಿ ಬನ್ನಿ ಕತ್ತರಿಸಬೇಕು ಅನ್ನುವುದು ಸಂಪ್ರದಾಯ. ಆದರೆ ಈ ಬಾರಿ ಹಾಗಾಗಲಿಲ್ಲ. ಈ ವೇಳೆ ಬಾಳೆ ಕಂದಿನಲ್ಲೆ ಖಡ್ಗ ಸಿಕ್ಕಿಬಿದ್ದು ಕೆಲಕ್ಷಣ ಗೊಂದಲಕ್ಕೀಡಾದರು. ಅರ್ಚಕರ ನೆರವಿನಿಂದ ಬಾಳೆಕಂದು ತುಂಡಾಯಿತು.
VIDEO REPORT
ರಾವಣ ದಹನ, ಶಿಳ್ಳೆ, ಚಪ್ಪಾಳೆ
ಇತ್ತ ಬನ್ನಿ ಕಡಿಯುತ್ತಿದ್ದಂತೆ ರಾವಣ ದಹನವಾಯಿತು. ಬೃಹತ್ ರಾವಣನ ಮೂರ್ತಿಯನ್ನು ದಹಿಸಲಾಯಿತು. ಪಟಾಕಿಗಳನ್ನು ಸಿಡಿಸಲಾಯಿತು. ಈ ವೇಳೆ ಜನರು ಶಿಳ್ಳೆ, ಚಪ್ಪಾಳೆ, ಘೋಷಣೆ ಕೂಗಿದರು. ಭಾರಿ ಮಳೆಯಿಂದಾಗಿ ರಾವಣನ ಮೂರ್ತಿ ನೆಂದು ಹೋಗಿದ್ದರಿಂದ ರಾವಣ ದಹನ ಪೂರ್ಣಗೊಳ್ಳಲಿಲ್ಲ.
ನಿರೀಕ್ಷೆಗೂ ಮೀರಿ ಜನ
ಕೋವಿಡ್ ಹಿನ್ನೆಲೆಯಲ್ಲಿ ಬನ್ನಿ ಮಂಟಪದ ಬಳಿಗೆ ಹೆಚ್ಚು ಜನರು ಬರುವುದ ಬೇಡ ಎಂದು ಮಹಾನಗರ ಪಾಲಿಕೆ ಮನವಿ ಮಾಡಿತ್ತು. ನೂರಿನ್ನೂರು ಮಂದಿಯಷ್ಟೆ ಸೇರಬೇಕು ಎಂದು ಸೂಚಿಸಿತ್ತು. ಆದರೆ ನಿರೀಕ್ಷೆಗೂ ಮೀರಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಬನ್ನಿ ಮಂಟಪದ ಬಳಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422