ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 27 ಸೆಪ್ಟೆಂಬರ್ 2019
ಮಹಾನಗರ ಪಾಲಿಕೆ ವತಿಯಿಂದ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 29ರಿಂದ ನವರಾತ್ರಿ ಉತ್ಸವ ನಡೆಯಲಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪಾಲಿಕೆ ಮೇಯರ್ ಲತಾ ಗಣೇಶ್, ಪಾರಂಪರಿಕ ದಸರಾ ಆಚರಣೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗುತ್ತದೆ ಎಂದರು.
ದಸರಾ ಉದ್ಘಾಟನೆಗೆ ಬರ್ತಿದ್ದಾರೆ ಪ್ರಸಿದ್ಧ ಕವಿ
ಸೆಪ್ಟೆಂಬರ್ 29ರಂದು ಶಿವಮೊಗ್ಗದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಾಡದೇವಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಕವಿ ಬಿ.ಆರ್.ಲಕ್ಷ್ಮಣರಾವ್ ಅವರು ಈ ಬಾರಿಯ ಶಿವಮೊಗ್ಗ ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ಉಪಮೇಯರ್ ಚನ್ನಬಸಪ್ಪ ಅವರು ತಿಳಿಸಿದರು.
ಮೈಸೂರು ದಸರಾ ಮಾದರಿಯಲ್ಲೇ ಶಿವಮೊಗ್ಗದಲ್ಲು ದಸರಾ ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕವಾಗಿ 14 ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ನಾಡದೇವಿ ಅದ್ಧೂರಿ ಮೆರವಣಿಗೆಗೆ ಮೂರು ಆನೆ
ನವರಾತ್ರಿ ಹಬ್ಬದ ಕೊನೆಯ ದಿನ ಬನ್ನಿ ಮುಡಿಯುವ ಉತ್ಸವ ನಡೆಯಲಿದೆ. ಸೆ.8ರಂದು ಮಧ್ಯಾಹ್ನ ಶಿವಪ್ಪನಾಯಕ ಅರಮನೆ ಆವರಣದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಆ ಬಳಿಕ ನಾಡದೇವಿ ಚಾಮುಂಡೇಶ್ವರಿಯ ಅದ್ಧೂರಿ ಮೆರವಣಿಗೆ ನಡೆಯಲಿದೆ. ‘ಮೆರವಣಿಗೆ ದಿನ ಸಕ್ರೆಬೈಲು ಆನೆ ಬಿಡಾರದ ಮೂರು ಆನೆಗಳು ಭಾಗವಹಿಸಲಿವೆ. ಸಾಗರ, ಗಂಗೆ ಮತ್ತು ಭಾನುಮತಿ ಆನೆಗಳು ಜಂಬು ಸವಾರಿಯಲ್ಲಿ ಪಾಲ್ಗೊಳ್ಳಲಿವೆ. ಅಕ್ಟೋಬರ್ 1ರಿಂದ ಶಿವಮೊಗ್ಗ ನಗರದಲ್ಲಿ ಜಂಬೂ ಸವಾರಿ ತಾಲೀಮು ನಡೆಯಲಿದೆ’ ಎಂದು ಉಪಮೇಯರ್ ಚನ್ನಬಸಪ್ಪ ತಿಳಿಸಿದರು.
ಶಿವಮೊಗ್ಗದ ಹಳೆ ಜೈಲು ಆವರಣದಲ್ಲಿ ಬನ್ನಿ ಮುಡಿಯುವ ಉತ್ಸವ ನಡೆಯಲಿದೆ. ಸಂಜೆ 6.15ಕ್ಕೆ ತಹಶೀಲ್ದಾರ್ ಗಿರೀಶ್ ಅವರು ಬನ್ನಿ ಮುಡಿಯುವ ಉತ್ಸವ ನಡೆಸಲಿದ್ದಾರೆ.
ಪಾಲಿಕೆ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ ಸೇರಿದಂತೆ ಕಾರ್ಪೊರೇಟರ್’ಗಳು, ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422