DASARA NEWS, 12 OCTOBER 2024 : ಶಿವಮೊಗ್ಗ ದಸರಾದಲ್ಲಿ ಇವತ್ತು ಜಂಬೂ ಸವಾರಿ ನಡೆಯಲಿದೆ. ನಾಡದೇವಿ ಚಾಮುಂಡೇಶ್ವರಿಯ ವಿಗ್ರಹ ಇರುವ ಬೆಳ್ಳಿ ಮಂಟಪವನ್ನು ಹೊತ್ತು ಸಾಗರ ಆನೆ ಹೆಜ್ಜೆ ಹಾಕಲಿದೆ. ಅದ್ಧೂರಿ ಮೆರವಣಿಗೆ ಕಣ್ತುಂಬಿಕೊಳ್ಳಲು ಶಿವಮೊಗ್ಗ ಸೇರಿದಂತೆ ಹೊರ ಊರುಗಳಿಂದ ಜನ ಸೇರಲಿದ್ದಾರೆ.
ಮೈಸೂರಿನ ನಂತರ ಶಿವಮೊಗ್ಗ ದಸರಾ ಅತಿ ಹೆಚ್ಚು ವಿಜೃಂಭಣೆಯಿಂದ ನಡೆಯುತ್ತದೆ. ಅಲ್ಲದೆ ನಾಡಿನಾದ್ಯಂತ ಖ್ಯಾತಿ ಗಳಿಸಿದೆ.
ಗೊತ್ತಿರಬೇಕಾದ 5 ಪ್ರಮುಖಾಂಶಗಳು

1980ರ ದಶಕಕ್ಕು ಮೊದಲು ನಾಡಹಬ್ಬ ದಸರಾ ಅಚರಣೆ ಮನೆಗಳು, ದೇವಸ್ಥಾನಗಳಿಗೆ ಸೀಮಿತವಾಗಿತ್ತು. ಮನೆಗಳಲ್ಲಿ ಹಬ್ಬ ಆಚರಿಸಿ, ಪ್ರಮುಖ ದೇಗುಲಗಳಲ್ಲಿ ಅಂಬು ಕಡಿದು ನವರಾತ್ರಿ ಆಚರಣೆ ಮಾಡಲಾಗುತ್ತಿತ್ತು.


ಪುಟ್ಟಪ್ಪ ಅವರು ಶಿವಮೊಗ್ಗ ನಗರಸಭೆ ಅಧ್ಯಕ್ಷರಾದಾಗ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಆ ಹಣದಲ್ಲಿ ಸಾರ್ವಜನಿಕ ದಸರಾ ಆಚರಣೆ ಮಾಡಲಾಗುತ್ತಿತ್ತು. ಹಿರಿಯ ಪತ್ರಕರ್ತ ನಾಗೇಂದ್ರ ರಾವ್ ಅವರು ನಗರಸಭೆ ಅಧ್ಯಕ್ಷರಾದಾಗ ಸೈನ್ಸ್ ಮೈದಾನದಿಂದ ಮೆರವಣಿಗೆ ನಡೆಸುವ ಪದ್ಧತಿ ಆರಂಭವಾಯಿತು.


ಸಿದ್ದರಾಮಣ್ಣ ಅವರು ನಗರಸಭೆ ಅಧ್ಯಕ್ಷರಾಗಿದ್ದ ಸಂದರ್ಭ ಶಿವಪ್ಪನಾಯಕ ಅರಮನೆ ಕೇಂದ್ರಿತವಾಗಿ ಮೂರು ದಿನ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ಬಳಿಕ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ದಸರಾ ಮೆರವಣಿಗೆ ನಡೆಸಲಾಯಿತು. ಈಚೆಗೆ ಹತ್ತು ದಿನದ ದಸರಾ ಆಚರಣೆ ಆರಂಭವಾಯಿತು. ಆನೆಗಳ ಮೇಲೆ ಅಂಬಾರಿ ಹೊರಿಸುವ ಕಾರ್ಯವು ಶುರುವಾಯಿತು.


ಶಿವಮೊಗ್ಗದ ಮಾರ್ನಮಿ ಬೈಲಿನಲ್ಲಿ ಮೊದಲು ವಿಜಯದಶಮಿ ಆಚರಿಸಲಾಗುತ್ತಿತ್ತು. ಆ ಬಳಿಕ ನಗರಸಭೆ ಆವರಣಕ್ಕೆ ಶಿಫ್ಟ್ ಆಯಿತು. ಅಲ್ಲಿ ಅಂಬು ಕಡಿಯಲಾಗುತ್ತಿತ್ತು. ಹೆಚ್ಚು ಜನ ಸೇರುವುದರಿಂದ ನೆಹರೂ ಕ್ರೀಡಾಂಗಣಕ್ಕೆ ವರ್ಗಾಯಿಸಲಾಯಿತು. ಸಿಂಥಟಿಕ್ ಟ್ರ್ಯಾಕ್ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳ ಹಿನ್ನೆಲೆ ನೆಹರೂ ಕ್ರೀಡಾಂಗಣದಿಂದ ಕುವೆಂಪು ರಂಗಮಂದಿರದ ಹಿಂಭಾಗದ ಎನ್‌ಇಎಸ್ ಮೈದಾನಕ್ಕೆ ಅಂಬು ಕಡಿಯುವ ಕಾರ್ಯಕ್ರಮ ವರ್ಗವಾಯಿತು. ಈಗ ಫ್ರೀಡಂ ಪಾರ್ಕ್‌ನಲ್ಲಿ (ಅಲ್ಲಮ ಪ್ರಭು ಮೈದಾನ) ಅಂಬು ಕಡಿಯುವ ಕಾರ್ಯಕ್ರಮ ನಡೆಯುತ್ತಿದೆ.


ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಮೊದಲು ದೇವತೆಗಳಷ್ಟೆ ಭಾಗವಹಿಸುತ್ತಿದ್ದವು. ಆನಂತರ ದೇವಾನುದೇವತೆಗಳು ಭಾಗವಹಿಸುತ್ತಿವೆ. ಈಚೆಗೆ 150ಕ್ಕಿಂತಲೂ ಹೆಚ್ಚು ದೇವಾನುದೇವತೆಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.
ಇದನ್ನೂ ಓದಿ » ಶಿವಮೊಗ್ಗ ಜಂಬೂ ಸವಾರಿಗೆ ಕ್ಷಣಗಣನೆ, ಆನೆಗಳು ರೆಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
shivamoggalive@gmail.com
» Whatsapp Number
7411700200
