ಶಿವಮೊಗ್ಗ ದಸರಾ ಮೆರವಣಿಗೆಗೆ ಅದ್ಧೂರಿ ಚಾಲನೆ, ಅಂಬಾರಿ ಹೊತ್ತು ಸಾಗರನ ರಾಜಗಾಂಭೀರ್ಯ ನಡೆ

DASARA NEWS, 12 OCTOBER 2024 : ಶಿವಮೊಗ್ಗ ದಸರಾದ ಜಂಬೂ ಸವಾರಿಗೆ ಚಾಲನೆ ಸಿಕ್ಕಿದೆ. ಸಕ್ರೆಬೈಲು ಬಿಡಾರದ ಸಾಗರ ಆನೆ ಅಂಬಾರಿ (ambari) ಹೊತ್ತು ರಾಜ ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಿದೆ.

ನಂದಿ ಧ್ವಜಕ್ಕೆ ಪೂಜೆ

ಶಿವಪ್ಪನಾಯಕ ಅರಮನೆ ಮುಂಭಾಗ ಸಚಿವ ಮಧು ಬಂಗಾರಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭ ಶಾಸಕರಾದ ಎಸ್‌.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್‌, ಬಲ್ಕಿಷ್‌ ಬಾನು, ಡಾ. ಧನಂಜಯ ಸರ್ಜಿ ಸೇರಿದಂತೆ ಹಲವರು ಇದ್ದರು.

121024 Shimoga Dasara Ambari Procession begins

ನಾಡ ದೇವಿಗೆ ಪುಷ್ಪಾರ್ಚನೆ

ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಚಿವ ಮಧು ಬಂಗಾರಪ್ಪ, ಅನಿತಾ ಮಧು ಬಂಗಾರಪ್ಪ , ಶಾಸಕರು, ಸೂಡ ಅಧ್ಯಕ್ಷ ಹೆಚ್.ಎಸ್.ಸುಂದರೇಶ್‌ ಸೇರಿದಂತೆ ಹಲವರು ಪುಷ್ಪಾರ್ಚನೆ ಮಾಡಿದರು. ಬಳಿಕ ಜಂಬೂ ಸವಾರಿ ಮೆರವಣಿಗೆ ಆರಂಭವಾಯಿತು.

a4

a3

a2

Shimoga Dasara Ambari Procession

ಇದನ್ನೂ ಓದಿ » ಶಿವಮೊಗ್ಗ ದಸರಾ, ಎಲ್ಲರಿಗು ಗೊತ್ತಿರಬೇಕಾದ 5 ವಿಷಯಗಳಿವು

121024 Shimoga Dasara Ambari Procession begins

Leave a Comment