ಶಿವಮೊಗ್ಗ ದಸರಾ, ಸೆ.24ಕ್ಕೆ ಏನೇನಿರುತ್ತೆ? ನಾಳೆ ಯಾವೆಲ್ಲ ಸಿನಿಮಾ ಸ್ಟಾರ್‌ಗಳು ಬರ್ತಿದ್ದಾರೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ದಸರಾ ಸುದ್ದಿ: ಕಳೆದ ಎರಡು ದಿನದಿಂದ ಶಿವಮೊಗ್ಗದಲ್ಲಿ ನವರಾತ್ರಿ ಉತ್ಸವ ಕಳೆಗಟ್ಟುತ್ತಿದೆ. ವಿವಿಧೆಡೆ ದಸರಾ (Dasara Events) ಕಾರ್ಯಕ್ರಮಗಳು ನಡೆಯುತ್ತಿವೆ. ಸೆ.24ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸಿನಿಮಾ ನಟ, ನಟಿಯರು ಭಾವಹಿಸಲಿದ್ದಾರೆ.

ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಇರಲಿದೆ?

 » ಪರಿಸರ ದಸರಾ – ಬೆಳಗ್ಗೆ 7ಕ್ಕೆ

ಸ್ಥಳ: ಶಿವಮೊಗ್ಗ ಪಾಲಿಕೆಯಿಂದ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನವರೆಗೆ

ಸೈಕಲ್‌ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಧಾರವಾಡ ಐಐಟಿಯ ಪ್ರಾಧ್ಯಾಪಕ ಮತ್ತು ಪರಿಸರವಾದಿ ಡಾ.ಶ್ರೀಪತಿ ಎಲ್‌.ಕೆ. ಅವರಿಂದ ಚಾಲನೆ. ಪರಿಸರ ಅಧಿಕಾರಿ ಶಿಲ್ಪಾ.ಕೆ, ಪರಿಸರವಾದಿ ಮತ್ತು ಉಪನ್ಯಾಸಕ ಪರಿಸರ ನಾಗರಾಜ್‌ ಉಪಸ್ಥಿತಿ.

 » ಚಲನಚಿತ್ರ ದಸರಾ – ಬೆಳಗ್ಗೆ 9.30ಕ್ಕೆ

ಸ್ಥಳ: ಡಾ. ಅಂಬೇಡ್ಕರ್‌ ಭವನ

ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ, ನಟ ಶರಣ್‌, ನಟಿ ಕಾರುಣ್ಯರಾಮ್‌ ಉಪಸ್ಥಿತಿ

 » ರಂಗದಸರಾ  – ಬೆಳಗ್ಗೆ 10.30ಕ್ಕೆ

ಸ್ಥಳ: ಸುವರ್ಣ ಸಾಂಸ್ಕೃತಿಕ ಭವನ

ಉಡುಪಿಯ ರಂಗ ನಿರ್ದೇಶಕ ಗಣೇಶ್‌ ಮಂದಾರ್ಥಿ ಅವರಿಂದ ಉದ್ಘಾಟನೆ

 » ಸಿನಿಮಾ ಪ್ರದರ್ಶನ – ಬೆಳಗ್ಗೆ 10.30ಕ್ಕೆ

ಸ್ಥಳ: ಮಲ್ಲಿಕಾರ್ಜುನ ಚಿತ್ರಮಂದಿರ

 » ಚಲನಚಿತ್ರ ರಸಗ್ರಹಣ ಕಾರ್ಯಾಗಾರ  – ಬೆಳಗ್ಗೆ 11.30ಕ್ಕೆ

ಸ್ಥಳ: ಡಾ. ಅಂಬೇಡ್ಕರ್‌ ಭವನ

ನಿರ್ದೇಶಕ ಸಾಯಿ ಅವರಿಂದ ಚಾಲನೆ

 » ನಾಟಕ ಪ್ರದರ್ಶನ  – ಬೆಳಗ್ಗೆ 11.30ರಿಂದ

ಸ್ಥಳ: ಸುವರ್ಣ ಸಂಸ್ಕೃತಿ ಭವನ

ಬೆಳಗ್ಗೆ 11.30ಕ್ಕೆ – ಬಾರಮ್ಮ ಭಾಗೀರಥಿ – ನಿರ್ದೇಶನ: ಮಾನಸ ಸಂತೋಷ್‌

ಮಧ್ಯಾಹ್ನ 12.45ಕ್ಕೆ – ದತ್ತೋಪಂತನ ಪತ್ತೇದಾರಿ – ನಿರ್ದೇಶನ: ವಿಜಯ್‌ ನೀನಾಸಂ

ಮಧ್ಯಾಹ್ನ 2.30ಕ್ಕೆ – ಎದೆಯ ಹಣತೆ – ನಿರ್ದೇಶನ: ಮಹದೇವನ್.ಪಿ

 » ನೃತ್ಯ ಕಾರ್ಯಕ್ರಮ  – ಸಂಜೆ 4.30 ರಿಂದ 

ಸ್ಥಳ: ಕುವೆಂಪು ರಂಗಮಂದಿರ

ಶಿವಮೊಗ್ಗ ನಗರದ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ‍ಸ್ಥಳಿಯ ಕಲಾ ತಂಡಗಳಿಂದ ನೃತ್ಯ ಕಾರ್ಯಕ್ರಮ, ಬಹುಮಾನ ವಿತರಣೆ. ನಟಿ, ನಿರ್ದೇಶಕಿ ರೂಪ ಅಯ್ಯರ್‌ ಅವರಿಂದ ಚಾಲನೆ.

JNNCE-Admission-Advt-scaled

ಇದನ್ನೂ ಓದಿ » ಹಸಿರುಮಕ್ಕಿ ಲಾಂಚ್‌ ಬಳಿ ಟಾಟಾ ಏಸ್‌ ಪಲ್ಟಿ, ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮಣಿಪಾಲಕ್ಕೆ ದಾಖಲು, ಹೇಗಾಯ್ತು ಘಟನೆ?

Shivamogga Dasara Events

Leave a Comment