ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2020
ಹಾಫ್ ಡೇ ಲಾಕ್ ಡೌನ್‍ಗೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಾಹನ ಮತ್ತು ಜನ ಸಂಚಾರ ಕಡಿಮೆಯಾದರೂ, ಸಂಪೂರ್ಣ ತಗ್ಗಿರಲಿಲ್ಲ.
ಎಲ್ಲೆಲ್ಲಿ ಹೇಗೆತ್ತು ವಾತಾವರಣ?
ಅಶೋಕ ಸರ್ಕಲ್ | ವಾಹನ ಸಂಚಾರ ತಗ್ಗಿತ್ತು. ಬಿ.ಹೆಚ್.ರಸ್ತೆ ಕಡೆಯಿಂದ ವಾಹನಗಳ ಸಂಚಾರ ನಿಯಂತ್ರಿಸಲು ಬ್ಯಾರಿಕೇಡ್ ಹಾಕಲಾಗಿತ್ತು. ಆದರೂ ವಾಹನಗಳು ಸಂಚರಿಸುತ್ತಿದ್ದವು. ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವಿತ್ತು.
ಬಿ.ಹೆಚ್.ರಸ್ತೆ | ಅಶೋಕ ಸರ್ಕಲ್ ಮತ್ತು ಅಮೀರ್ ಅಹಮದ್ ಸರ್ಕಲ್‍ನಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಇದರಿಂದ ವಾಹನ ಸಂಚಾರ ಕಡಿಮೆಯಿತ್ತು. ಆದರೆ ಸವರ್‍ಲೈನ್ ರಸ್ತೆಯ ಕಡೆಯಿಂದ ವಾಹನಗಳು ಬರುತ್ತಿದ್ದವು.
ಅಮೀರ್ ಅಹಮದ್ ಸರ್ಕಲ್ | ಸರ್ಕಲ್‍ನಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಇದರಿಂದ ಇಲ್ಲಿ ವಾಹನ ಸಂಚಾರ ಕಡಿಮೆಯಾಗಿತ್ತು. ಮತ್ತೊಂದೆಡೆ ಗಾಂಧಿ ಬಜಾರ್ ಸಂಪೂರ್ಣ ಬಂದ್ ಆಗಿದ್ದರಿಂದ ಜನರ ಸಂಚಾರವಿರಲಿಲ್ಲ.
ನೆಹರೂ ರಸ್ತೆ, ಗೋಪಿ ಸರ್ಕಲ್ | ನೆಹರೂ ರೋಡ್‍ನಲ್ಲಿ ವಾಹನಗಳು ವಿರಳವಾಗಿದ್ದವು. ಗೋಪಿ ಸರ್ಕಲ್‍ನಿಂದ ಈ ನೆಹರೂ ರೋಡ್‍ಗೆ ಬರುವ ಎರಡು ಮಾರ್ಗದಲ್ಲೂ ಬ್ಯಾರಿಕೇಡ್ ಹಾಕಲಾಗಿತ್ತು. ಉಳಿದಂತೆ ದುರ್ಗಿಗುಡಿ, ಬಾಲರಾಜ್ ಅರಸ್ ರಸ್ತೆ ಕಡೆಯಿಂದ ಗೋಪಿ ಸರ್ಕಲ್‍ಗೆ ವಾಹನಗಳು ಬರುತ್ತಿದ್ದವು.
ದುರ್ಗಿಗುಡಿ, ಜೈಲ್ ರೋಡ್ | ಇವೆರಡು ರಸ್ತೆಯಲ್ಲಿ ಬಹುತೇಕ ಅಂಗಡಿಗಳ ಬಾಗಿಲು ಬಂದ್ ಮಾಡಲಾಗಿತ್ತು. ಆದರೆ ವಾಹನ ಸಂಚಾರ ಮಾತ್ರ ತಗ್ಗಿರಲಿಲ್ಲ. ಜೈಲ್ ಸರ್ಕಲ್‍ನಲ್ಲೂ ವಾಹನಗಳು ಓಡಾಡುತ್ತಿದ್ದವು. ದಾವಣಗೆರೆ, ಹೊನ್ನಾಳಿ ಕಡೆಗೆ ಹೋಗುವ ಕೆಎಸ್‍ಆರ್‍ಟಿಸಿ ಬಸ್‍ಗಳು ಕುವೆಂಪು ರಸ್ತೆ ಮೂಲಕ ಇದೇ ಸರ್ಕಲ್ ಹಾದು ಹೋಗುತ್ತಿದ್ದವು.
ನೂರು ಅಡಿ ರಸ್ತೆ | ಈ ರಸ್ತೆಯ ಎರಡು ಬದಿಯಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಆದರೆ ವಾಹನಗಳು, ಜನ ಸಂಚಾರವಿತ್ತು. ವಿವಿಧ ಕಾಮಗಾರಿಯ ಕೆಲಸಗಳು ನಡೆಯುತ್ತಿದ್ದು. ಈ ರಸ್ತೆಯಲ್ಲಿರುವ ಪೆಟ್ರೊಲ್ ಬಂಕ್ ಸೇವೆಯು ಇತ್ತು.
ವಿನೋಬನಗರ | ಅಂಗಡಿಗಳು ಬಂದ್. ಹಲವು ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರವಿರಲಿಲ್ಲ.
ಸವಳಂಗ ರಸ್ತೆ | ರಸ್ತೆಯಲ್ಲಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿದ್ದರು. ಆದರೂ ವಾಹನ ಸಂಚಾರವಿತ್ತು.
ಏನೆಲ್ಲ ಇತ್ತು? ಏನಿರಲಿಲ್ಲ?
ಶಿವಮೊಗ್ಗ ನಗರದಾದ್ಯಂತ ಎಟಿಎಂ ಕೇಂದ್ರ, ಆಸ್ಪತ್ರೆ, ಮೆಡಿಕಲ್ ಶಾಪ್‍ಗಳ ಬಾಗಿಲು ತೆಗೆಯಲಾಗಿತ್ತು. ಉಳಿದೆಲ್ಲ ಅಂಗಡಿಗಳು ಬಂದ್ ಆಗಿವೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422