ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 30 SEPTEMBER 2024 : ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ (Election) 15 ಮಂದಿ ಗೆಲುವು ಸಾಧಿಸಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿ ಕಾರ್ಯನಿರ್ವಹಿಸಲಿದೆ.
ಸಂಘದ ಆವರಣದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ಮತದಾನ ಮುಗಿದ ನಂತರ ಮತಗಳ ಎಣಿಕೆ ನಡೆಸಿದ ಚುನಾವಣೆ ಅಧಿಕಾರಿ ಎಂ.ಸಿ ಮಂಜುನಾಥ ಅವರು ಚುನಾಯಿತರಾದವರ ಹೆಸರುಗಳನ್ನು ಘೋಷಣೆ ಮಾಡಿದರು.
ಯಾರೆಲ್ಲ ಆಯ್ಕೆಯಾಗಿದ್ದಾರೆ? ಎಷ್ಟು ಮತ ಪಡೆದಿದ್ದಾರೆ?
ಗೀತಾಜಂಲಿ ಪ್ರಸನ್ನಕುಮಾರ್ (175 ಮತಗಳು), ನಾಗಮಣಿ ಎಸ್. (168), ಹೆಚ್.ಡಿ.ಮೋಹನಶಾಸ್ತ್ರಿ(167), ಪ್ರೊ.ಆಶಾಲತಾ ಎಂ. (157), ಗುರುದತ್ತ ಕೆ.ಎನ್. (155), ಪ್ರೊ.ಹೆಚ್.ಆರ್ ಶಂಕರ ನಾರಾಯಣಶಾಸ್ತ್ರಿ (155), ವಿನಯ್ ವೈ.ಎಸ್ (152), ಚೇತನ್ ಕೆ.ಎಸ್ (145), ಶೃಂಗೇರಿ ಎಚ್.ಎಸ್.ನಾಗರಾಜ (138), ವಾಗೇಶ್ ಎಸ್.ಎಸ್ (133), ನಾಗರಾಜ ಎಸ್.ಎನ್ (130), ಚಂದ್ರಶೇಖರ್.ಜಿ (126), ಬಸವರಾಜಪ್ಪ ಎಂ (98), ಪರಶುರಾಮಪ್ಪ ಎ (94), ಹಾಲಸ್ವಾಮಿ ಆರ್.ಎಸ್ (87) ಅವರು ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿಗೆ ಸ್ಪರ್ಧೆ ಮಾಡಿದ್ದ ಮೇರಿ ಇ.ಸಿ. (ಉಷಾ ನಾಗರಾಜ) ಮತ್ತು ಹಾಲಸ್ವಾಮಿ ಆರ್.ಎಸ್. ಅವರು ತಲಾ 87 ಮತ ಪಡೆದಿದ್ದರು. ಸಂಘದ ನಿಯಮದ ಪ್ರಕಾರ ಇಬ್ಬರ ಹೆಸರುಗಳನ್ನು ಚೀಟಿಯಲ್ಲಿ ಬರೆದು ಡಬ್ಬಿಯಲ್ಲಿ ಹಾಕಿ ತಟಸ್ಥ ವ್ಯಕ್ತಿಯಿಂದ ಚೀಟಿ ಎತ್ತಿಸಲಾಯಿತು. ಲಾಟರಿಯ ಅದೃಷ್ಟ ಹಾಲಸ್ವಾಮಿ ಅವರಿಗೆ ಖುಲಾಯಿಸಿತು.» ಸಮಾನ ಮತ, ಲಾಟರಿಯಲ್ಲಿ ಆಯ್ಕೆ
ಇದನ್ನೂ ಓದಿ » WEATHER REPORT – ಮಲೆನಾಡಿನಲ್ಲಿ ಮೈ ಕೊರೆಯುವ ಚಳಿ ಬದಲು ಹೆಚ್ಚಿದ ಧಗೆ
LATEST NEWS
- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

About The Editor
ನಿತಿನ್ ಆರ್.ಕೈದೊಟ್ಲು





