SHIVAMOGGA LIVE NEWS, 9 FEBRUARY 2025
ಶಿವಮೊಗ್ಗ : ತರಬೇತಿ ವೇಳೆ ಪ್ಯಾರಾಚೂಟ್ ತೆರೆಯದೆ ಆಗಸದಿಂದ ಕೆಳಗೆ ಬಿದ್ದು ಹುತಾತ್ಮರಾದ ವಾಯುಪಡೆ (airforce) ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ಪಾರ್ಥೀವ ಶರೀರ ಶಿವಮೊಗ್ಗ ತಲುಪಿದೆ. ಹೊಳೆ ಬಸ್ ನಿಲ್ದಾಣದ ಬಳಿ ಬೆಕ್ಕಿನ ಕಲ್ಮಠದ ಬಳಿ ಜನಪ್ರತಿನಿಧಿಗಳು, ಶಿವಮೊಗ್ಗದ ನಾಗರಿಕರು ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ ಸೇರಿದಂತೆ ಹಲವರು ಅಗಲಿದ ಯೋಧನಿಗೆ ನಮನ ಸಲ್ಲಿಸಿದರು.
ಸಮವಸ್ತ್ರ ಹಿಡಿದು ಕಣ್ಣೀರಾದ ಪತ್ನಿ
ಶಿವಮೊಗ್ಗದಲ್ಲಿ ಅಂತಿಮ ನಮನ ಸಲ್ಲಿಸುವ ಸಂದರ್ಭ ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ಪತ್ನಿ ಕಲ್ಪಿತಾ ಸಾಕಿಯ ಇದ್ದರು. ಪತಿಯ ಪಾರ್ಥೀವ ಶರೀರದ ಮುಂದೆ ಅವರ ಸಮವಸ್ತ್ರ ಹಿಡಿದು ಉಮ್ಮಳಿಸಿ ಬಂದ ದುಃಖ ತಡೆಯಲಾಗದೆ ಕಣ್ಣೀರಾದರು. ಇದು ಸುತ್ತಲು ಇದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.
ಹೊಸನಗರದತ್ತ ಪಾರ್ಥೀವ ಶರೀರ
ವಾರಂಟ್ ಆಫೀಸರ್ ಜಿ.ಎಸ್.ಮಂಜುನಾಥ್ ಅವರ ಪಾರ್ಥೀವ ಶರೀರವನ್ನು ಸೇನಾ ವಾಹನದಲ್ಲಿ ತರಲಾಗಿದೆ. ವಾಯುಪಡೆಯ ಅಧಿಕಾರಿಗಳು, ಜಿ.ಎಸ್.ಮಂಜುನಾಥ್ ಅವರ ಕುಟುಂಬ ಸದಸ್ಯರು ಜೊತೆಗಿದ್ದರು.
ಪಾರ್ಥೀವ ಶರೀರವನ್ನು ಹೊತ್ತ ವಾಹನ ಈಗ ಹೊಸನಗರದತ್ತ ತೆರಳಿತು. ಬಿಜೆಪಿ ಕಾರ್ಯಕರ್ತರು, ಶಿವಮೊಗ್ಗದ ನಾಗರಿಕರು, ಮಾಜಿ ಸೈನಿಕರು, ಸಂಸದ ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಸೇನಾ ವಾಹನದ ಜೊತೆಗೆ ಬೈಕ್ ಜಾಥಾದಲ್ಲಿ ನಡೆಸಿದರು.
ಇದನ್ನೂ ಓದಿ » ವಾಯುಪಡೆ ಅಧಿಕಾರಿ ಮಂಜುನಾಥ್ ಸಾವು, ಹೊಸನಗರದಲ್ಲಿ ನಾಳೆ ಮೆರವಣಿಗೆ, ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200