ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 28 ಡಿಸೆಂಬರ್ 2019
ಶಿವಮೊಗ್ಗದಲ್ಲಿ ಫುಡ್ ಪಾರ್ಕ್ ಆಗಬೇಕು. ಐ.ಟಿ.ಪಾರ್ಕ್ ಪೂರ್ಣಗೊಳ್ಳಬೇಕು. ಸರಕು ಸಾಗಣೆ ಲಾರಿಗಳಿಗೆ ಟರ್ಮಿನಲ್ ನಿರ್ಮಿಸಬೇಕು ಅಂತಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಚೇಂಬರ್ ಆಫ್ ಕಾರ್ಮರ್ಸ್ ರಾಜ್ಯಾಧ್ಯಕ್ಷ ಸಿ.ಆರ್.ಜನಾರ್ಧನ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಕೈಗಾರಿಕಾ ವಲಯದ ಬೆಳವಣಿಗೆಗೆ ಪೂರಕವಾಗಿ ಹಲವು ಪ್ರಮುಖ ಕಾರ್ಯಗಳಾಗಬೇಕಿದೆ ಎಂದರು.
ಕೌಶಲ್ಯ ಕೇಂದ್ರ, ಫುಡ್ ಪಾರ್ಕ್, ಟ್ರಕ್ ಟರ್ಮಿನಲ್
ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಶಿವಮೊಗ್ಗದಲ್ಲಿ ಕೌಶಲ್ಯ ಕೇಂದ್ರ ಸ್ಥಾಪಿಸಲು ಯೋಜಿಸಲಾಗಿದೆ. ಐದು ಕೋಟಿ ರೂ ವೆಚ್ಚದ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಜಾಗ ಮಂಜೂರಾತಿ, ಸರ್ಕಾರದಿಂದ ನೆರವು ಬೇಕು. ವರ್ತಕರು ಒಮ್ಮೆ ಮಾತ್ರ ಪರವಾನಗಿ ಪಡೆಯುವ ವ್ಯವಸ್ಥೆ ಮಾಡಬೇಕು. ಸೋಗಾನೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಫುಡ್ ಪಾರ್ಕನ್ನು ಫುಡ್ ಕರ್ನಾಟಕ ಲಿಮಿಟೆಡ್ ಮೂಲಕ ಜಾರಿಗೊಳಿಸಬೇಕು ಎಂದರು.
ಮಾಚೇನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಐ.ಟಿ.ಪಾರ್ಕ್ ಕಟ್ಟಡದ ಶೇ.50ರಷ್ಟು ನಿರ್ಮಾಣವಾಗಬೇಕಿದೆ. ಅದನ್ನು ಶೀಘ್ರ ಪೂರ್ಣಗೊಳಿಸಬೇಕು. ನಗರಕ್ಕೆ ಬರುವ ಸರಕು ಸಾಗಣೆ ಟ್ರಕ್’ಗಳಿಗೆ ಟ್ರಕ್ ಟರ್ಮಿನಲ್ ಸ್ಥಾಪಿಸಬೇಕು. ಶಿವಮೊಗ್ಗದಲ್ಲಿ ಟಿಂಬರ್ ಯಾರ್ಡ್ ನಿರ್ಮಿಸಬೇಕು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಬೇಕು. ಇ-ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇನ್ನು, ಏಪ್ರಿಲ್ 22 ರಿಂದ 26ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ FKCCI ಆಗ್ರೋ ಫುಡ್ ಟೆಕ್ ಎಕ್ಸ್’ಪೋ 2020 ನಡೆಯಲಿದೆ. ಕೃಷಿ, ತೋಟಗಾರಿಕೆ, ಆಹಾರ ಸಂಸ್ಕರಣೆ, ಪಶುಸಂಗೋಪನೆ ಸಂಬಂಧಿತ ಚಟುವಟಿಕೆಗಳ ಕುರಿತು ಎಕ್ಸ್’ಪೋದಲ್ಲಿ ಪ್ರದರ್ಶನ ಇರಲಿದೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಶಂಕ್ರಪ್ಪ, ರುದ್ರೇಶ್, ವಿಜಯ್ ಕುಮಾರ್, ಬಿ.ಆರ್.ಸಂತೋಷ್, ಗೋಪಿನಾಥ್, ಭಾರದ್ವಜ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422