ಶಿವಮೊಗ್ಗದಲ್ಲಿ ಅಲಂಕಾರ್ ಸ್ಕೂಲ್ ಆಫ್ ಮ್ಯೂಸಿಕ್
SHIVAMOGGA LIVE NEWS | 14 JANUARY 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ಗುರುಕೃಪಾ ಸಂಗೀತ ವಿದ್ಯಾಲಯವು ನಗರದಲ್ಲಿ ನೂತನವಾಗಿ ಅಲಂಕಾರ್ ಸ್ಕೂಲ್ ಆಫ್ ಮ್ಯೂಸಿಕ್ ಎಂಬ ಸಂಗೀತ ಶಾಲೆಯನ್ನು ಆರಂಭಿಸಿದೆ. ಹಿಂದೂಸ್ತಾನಿ ಯುವ ಗಾಯಕ ಸಹೋದರರಾದ ನೌಶಾದ್ ಹರ್ಲಾಪುರ್, ನಿಶಾದ್ ಹರ್ಲಾಪುರ್, ಸಿದ್ದೇಶ್ ಬಡಿಗೇರ್ ಹಾಗೂ ವಿನಾಯಕ್ ಸಾಗರ್ ನೇತೃತ್ವದಲ್ಲಿ ಆರಂಭವಾಗಿರುವ ಈ ಶಾಲೆಯಲ್ಲಿ ಆಸಕ್ತರು ಸಂಗೀತ ಕಲಿಯಬಹುದು. ಹಿಂದೂಸ್ತಾನಿ ಸಂಗೀತ, ಭಕ್ತಿ ಸಂಗೀತ, ಸುಗಮ ಸಂಗೀತ, ತಬಲಾ, ಹಾರ್ಮೊನಿಯಮ್, ಕೀ ಬೋರ್ಡ್ ತರಬೇತಿ ನೀಡಲಾಗುವುದು. ಆಸಕ್ತರು ಅಲಂಕಾರ್ ಸ್ಕೂಲ್ ಆಫ್ ಮ್ಯೂಸಿಕ್, ಎ ಬ್ಲಾಕ್, 1ನೇ ಮುಖ್ಯರಸ್ತೆ, 5ನೇ ತಿರುವು, ಶರಾವತಿ ನಗರ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಂದಿನ ಸುದ್ದಿ ಓದಲು ಕೆಳಗಿರುವ NEXT ಒತ್ತಿ