ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ವಿಮಾನ ನಿಲ್ದಾಣ ಕುರಿತು ಹಾಡು ರೆಡಿ
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
SHIMOGA : ನಗರದ ಗಾಯಕರ ತಂಡ ಶಿವಮೊಗ್ಗ ವಿಮಾನ ನಿಲ್ದಾಣದ (Airport) ಮತ್ತು ವಿಮಾನಯಾನ ಸೇವೆ ಆರಂಭದ ಕುರಿತು ಕುರಿತು ಸಾಂಗ್ ರೆಡಿ ಮಾಡಿ, ಯು ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಫ್ಲೈ ಶಿವಮೊಗ್ಗ ಥೀಮ್‌ನೊಂದಿಗೆ ಹಾಡು ರಚಿಸಲಾಗಿದೆ. ಪೃಥ್ವಿ ಗೌಡ ಲಿರಿಕ್ಸ್ ಬರೆದಿದ್ದು, ಪಾರ್ಥ ಚಿರಂತನ್ ಮ್ಯೂಸಿಕ್‌ನಲ್ಲಿ ಹಾಡು ಮೂಡಿ ಬಂದಿದೆ. ಪೃಥ್ವಿ ಗೌಡ, ಪಾರ್ಥ ಚಿರಂತನ್ ಮತ್ತು ಸಂಜನಾ ಎಸ್.ಕುಮಾರ್ ಅವರು ಹಾಡಿಗೆ ಧ್ವನಿಗೂಡಿಸಿದ್ದಾರೆ. ಹಾಡಿನ ವಿಡಿಯೋ ಇಲ್ಲಿದೆ.
ರಾತ್ರೋರಾತ್ರಿ ಎತ್ತುಗಳು ನಾಪತ್ತೆ
SHIKARIPURA : ಮನೆ ಸಮೀಪ ಕಟ್ಟಿದ್ದ ಎರಡು ಎತ್ತುಗಳನ್ನು ಕಳ್ಳತನ ಮಾಡಲಾಗಿದೆ. ಶಿಕಾರಿಪುರ ತಾಲೂಕು ಹೊಸಮುಗುಳುಗೆರೆ ಗ್ರಾಮದ ಭರ್ಮಪ್ಪ ಕಾಶನ್ನನವರ್ ಅವರಿಗೆ ಸೇರಿದ ಎತ್ತುಗಳು ನಾಪತ್ತೆಯಾಗಿವೆ. ಮನೆ ಸಮೀಪದ ಬೀರಲಿಂಗೇಶ್ವರ ದೇವಸ್ಥಾನದ ಊಟದ ಹಾಲ್ ಪಕ್ಕದಲ್ಲಿ ಕಾಂಕ್ರಿಟ್ ರಸ್ತೆ ಬದಿಯಲ್ಲಿ ಕಟ್ಟಿ ಹಾಕಲಾಗಿತ್ತು. ರಾತ್ರಿ ಮೇವು ಹಾಕಿ ಭರ್ಮಪ್ಪ ಅವರು ಮನೆಗೆ ಬಂದಿದ್ದರು. ಬೆಳಗಿನ ಜಾವ ಬಂದು ನೋಡಿದಾಗ ಎತ್ತುಗಳು ನಾಪತ್ತೆಯಾಗಿದ್ದವು. ಎಲ್ಲಡೆ ಹುಡಕಾಡಿದರು ಎತ್ತುಗಳು ಸಿಗದ ಹಿನ್ನೆಲೆ ಠಾಣೆಗೆ ದೂರು ನೀಡಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಭದ್ರಾವತಿಯ ಇಬ್ಬರು ಶಿಕ್ಷಕರು ಅಮಾನತು, ಕಾರಣವೇನು?
ತೋಟದಲ್ಲಿ ಮೋಟರ್ ಕಳ್ಳತನ
BHADRAVATHI : ಪಂಪ್ ಹೌಸ್‌ನ ಗೋಡೆ ಒಡೆದು ಮೋಟರ್ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಅರಳಿಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಸತೀಶ್ ಕುಮಾರ್ ಎಂಬುವವರ ತೋಟದಲ್ಲಿನ ಪಂಪ್ ಹೌಸ್ ಗೋಡೆ ಒಡೆದು, ಕಬ್ಬಿಣದ ಬಾಗಲಿನ ಇಂಟರ್ ಲಾಕ್ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಪಂಪ್ ಹೌಸ್‌ನಲ್ಲಿದ್ದ 15 ಹೆಚ್.ಪಿ. ಕರೆಂಟ್ ಮೋಟರ್, ಒಂದು ಸ್ಟಾಟರ್ ಬಾಕ್ಸ್, 2 ಕಬ್ಬಿಣ ಹಾರೆಗಳನ್ನು ಕಳ್ಳತನ ಮಾಡಲಾಗಿದೆ. ಇವುಗಳ ಅಂದಾಜು ಮೌಲ್ಯ 60 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.