ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಫೆಬ್ರವರಿ 2022
ಶಿವಮೊಗ್ಗದ ತುಂಗಾ ನದಿ ಹೊಸ ಸೇತುವೆ ಮೇಲೆ ಡಾಂಬರೀಕರಣ ಮಾಡಲು ಕೊನೆಗೂ ಅಧಿಕಾರಿಗಳು ನಿರ್ಧರಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ಸಾಲು ಸಾಲು ವರದಿ ಬಳಿಕ ಲೋಕೋಪಯೋಗಿ ಇಲಾಖೆ ಗುಂಡಿ ಮುಕ್ತ ಮಾಡಿ, ಸಂಪೂರ್ಣ ಡಾಂಬರೀಕರಣ ಮಾಡಲು ಹೊರಟಿದೆ.
ತುಂಗಾ ನದಿ ಹೊಸ ಸೇತುವೆ ಮೇಲೆ ಫೆ.19 ಮತ್ತು 20ರಂದು ರಾತ್ರಿ ಡಾಂಬರೀಕರಣ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
ಯಾವುದು ಪರ್ಯಾಯ ಮಾರ್ಗ?
ರಾತ್ರಿ ವೇಳೆ ಡಾಂಬಾರೀಕರಣ ಕಾಮಗಾರಿ ನಡೆಯುವ ಸಂದರ್ಭ ವಾಹನ ಸವಾರರಿಗೆ ತೊಂದರೆ ಆಗಬಾರದು ಎಂದು ಜಿಲ್ಲಾಧಿಕಾರಿ ಅವರು ಪರ್ಯಾಯ ಮಾರ್ಗ ಸೂಚಿಸಿದ್ದಾರೆ.
» ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ಬೈಕು, ಆಟೋ ಮತ್ತು ಇತರೆ ಲಘು ವಾಹನಗಳು ತುಂಗಾ ನದಿ ಹಳೆ ಸೇತವೆ ಉಪಯೋಗಿಸಿಕೊಳ್ಳಬಹುದು.
» ಶಿವಮೊಗ್ಗ ನಗರಕ್ಕೆ ಪ್ರವೇಶಿಸುವ ಭಾರಿ ವಾಹನಗಳು ವಿದ್ಯಾನಗರ, ಎಂ.ಆರ್.ಎಸ್ ಸರ್ಕಲ್ ಮೂಲಕ ಸಂಚರಿಸಬಹುದು.
» ಹೊನ್ನಾಳಿ ಕಡೆಯಿಂದ ಶಿವಮೊಗ್ಗ ನಗರವನ್ನು ಪ್ರವೇಶಿಸುವ ಎಲ್ಲಾ ಭಾರಿ ವಾಹನಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆಇಬಿ ಸರ್ಕಲ್, ರೈಲ್ವೆ ಸ್ಟೇಷನ್, ಉಷಾ ನರ್ಸಿಂಗ್ ಹೋಂ, 100 ಅಡಿ ರಸ್ತೆ ಮೂಲಕ ಸಂಚರಿಸಬೇಕು.
» ಶಿವಮೊಗ್ಗ ನಗರದಿಂದ ಹೊರಗೆ ಹೋಗುವ ಎಲ್ಲಾ ಬಗೆಯ ವಾಹನಗಳು ಅಶೋಕ ಸರ್ಕಲ್, ಎನ್.ಟಿ.ರಸ್ತೆ, ಸಂದೇಶ ಮೋಟರ್ಸ್ ಸರ್ಕಲ್, ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಅದೇಶದಲ್ಲಿ ಸೂಚಿಸಿದ್ದಾರೆ.
ಶಿವಮೊಗ್ಗ ಲೈವ್’ನಲ್ಲಿ ಸಾಲು ಸಾಲು ವರದಿ
ತುಂಗಾ ನದಿ ಹೊಸ ಸೇತುವೆ ಮೇಲಿನ ಯಮಸ್ವರೂಪಿ ಗುಂಡಿಗಳ ಕುರಿತು ಶಿವಮೊಗ್ಗ ಲೈವ್.ಕಾಂ ಸಾಲು ಸಾಲು ವರದಿ ಪ್ರಕಟಿಸಿತ್ತು. ಗುಂಡಿಗಳ ಕಾರಣಕ್ಕೆ ಸಾವು, ನೋವು ಸಂಭವಿಸಿದ ಕುರಿತು ವರದಿಯಲ್ಲಿ ತಿಳಿಸಿದ್ದೆವು. ಸಂಸದ ರಾಘವೇಂದ್ರ ಅವರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆಗೆ ಬಂದ ಸಂದರ್ಭ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಈ ಕುರಿತು ವರದಿ ಪ್ರಕಟವಾಗಿತ್ತು. ಅಧಿಕಾರಿಗಳ ನಡೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ | ಸಂಸದರ ಭೇಟಿಗೂ ಮುಂಚೆ ತುಂಗಾ ನದಿ ಹೊಸ ಸೇತುವೆ ಮೇಲಿನ ಗುಂಡಿಗಳು ಮಾಯ
ಇದನ್ನೂ ಓದಿ | ತುಂಗಾ ನದಿ ಸೇತುವೆ ಮೇಲೆ ಇನ್ನೆಷ್ಟು ಜನರ ಬಲಿಗಾಗಿ ಕಾಯುತ್ತಿದ್ದಾರೆ ಅಧಿಕಾರಿಗಳು? | ದೂರು ದುಮ್ಮಾನ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422