ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 22 ಅಕ್ಟೋಬರ್ 2019
ಮುಕ್ತ ವ್ಯಾಪಾರ ಒಪ್ಪಂದದ ವ್ಯಾಪ್ತಿಯಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನೀತಿ ಆಯೋಗದ ವರದಿಯಂತೆ ಹಾಲಿನ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದ್ದು, ಡೇರಿ ಉತ್ಪನ್ನ ರಫ್ತು ಮಾಡುವ ಅವಕಾಶ ಹೊಂದಿದೆ. ಇಂತಹ ಸಂದರ್ಭದಲ್ಲಿ ಮುಕ್ತ ವ್ಯಾಪಾರ ಒಪ್ಪಂದ (ರೀಜನಲ್ ಕಾಂಪ್ರಹೆನ್ಸಿವ್ ಎಕಾನಾಮಿಕ್ ಪಾರ್ಟನರ್ಶಿಪ್-RCEP) ಅಡಿ ಡೇರಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡುವುದರಿಂದ ದೇಶದ ಹಾಲು ಉತ್ಪಾದಕರು ಮತ್ತು ಡೇರಿ ಕ್ಷೇತ್ರಕ್ಕೆ ತೀವ್ರ ತೊಂದರೆಯಾಗಲಿದೆ.
ಭಾರತದಲ್ಲಿ ಹೈನುಗಾರಿಕೆಯಿಂದ ಕೂಲಿಕಾರರು, ರೈತರು, ಮಹಿಳೆಯರು ಜೀವನ ನಡೆಸುತ್ತಿದ್ದಾರೆ. ಆದರೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಯುರೋಪ್ ದೇಶಗಳಲ್ಲಿ ತಾಂತ್ರಿಕತೆಯಿಂದ ಹೈನು ಉತ್ಪಾದನಾ ವೆಚ್ಚ ಕಡಿಮೆ ಇರುತ್ತದೆ. ಈ ಉತ್ಪನ್ನಗಳು ಭಾರತಕ್ಕೆ ಆಮದಾದಲ್ಲಿ ದೇಶೀ ಹೈನುಗಾರಿಕೆ ಕ್ಷೇತ್ರಕ್ಕೆ ಅಪಾರ ಹಾನಿಯಾಗುತ್ತದೆ. ಗ್ರಾಮೀಣ ಭಾಗದ ಹೈನುಗಾರರು ಉತ್ಪಾದಿಸಿದ ಹಾಲಿಗೆ ಗುಣಮಟ್ಟ ಆಧಾರಿತ ಮತ್ತು ಯೋಗ್ಯ ದರದಲ್ಲಿ ವರ್ಷವಿಡಿ ಮಾರುಕಟ್ಟೆ ಲಭ್ಯವಿದೆ. ಗ್ರಾಹಕ ಡೇರಿ ಉತ್ಪನ್ನಗಳಿಗೆ ನೀಡುವ ಶೇ.75ರಷ್ಟು ಮೊತ್ತ ಉತ್ಪಾದಕರಿಗೆ ಸೇರುತ್ತಿದೆ. ಆದರೆ ಬೇರೆ ದೇಶಗಳಲ್ಲಿ ಈ ಪ್ರಮಾಣ ಶೇ.30 ರಿಂದ 35ರಷ್ಟು ಇದೆ.
ಮೇಕ್ ಇನ್ ಇಂಡಿಯಾ ಸಾಕಾರವಾಗಲು ಅತಿದೊಡ್ಡ ದೇಶೀ ಮಾರುಕಟ್ಟೆಯನ್ನು ವಿದೇಶೀಯರಿಗೆ ತೆರೆದಿಡುವ ಬದಲು ಸ್ಥಳೀಯ ಹೈನುಗಾರರಿಗೆ ಉತ್ತೇಜನ ನೀಡಿ ಅವರ ಉದ್ಯೋಗ ಸ್ವಾವಲಂಬನೆಗೆ ಇಂಬು ಕೊಡಬೇಕಿದೆ. ಕೃಷಿ ನಂತರ ಹೈನುಗಾರಿಕೆ ಅತಿದೊಡ್ಡ ಉದ್ಯೋಗವಾಗಿದ್ದು ಈ ಕ್ಷೇತ್ರಕ್ಕೆ ಹಾನಿಯಾಗದಂತೆ ಸೂಕ್ತ ಎಚ್ಚರ ವಹಿಸಬೇಕು. ಡೇರಿ ಉತ್ಪನ್ನಗಳನ್ನು ಮುಕ್ತ ವ್ಯಾಪಾರ ಒಪ್ಪಂದದಿಂದ ಹೊರಗಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಶಿಮುಲ್ ಅಧ್ಯಕ್ಷ ಡಿ.ಆನಂದ್, ಪ್ರೊ. ಬಿ.ಎಂ.ಕುಮಾರ ಸ್ವಾಮಿ, ಹೆಚ್.ಬಿ.ದಿನೇಶ್, ತಾರಾನಾಥ್ ಮತ್ತು ಹಾಲು ಉತ್ಪಾದಕ ಸಂಘಟನೆಗಳ ಪ್ರಮುಖರು ಇದ್ದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422