ಶಿವಮೊಗ್ಗ LIVE
ಶಿವಮೊಗ್ಗ: ನೂತನ ವರ್ಷದ ಸ್ವಾಗತಕ್ಕೆ (New Year 2026) ಶಿವಮೊಗ್ಗ ನಗರ ಸಜ್ಜಾಗುತ್ತಿದೆ. ವಿವಿಧೆಡೆ ಪಾರ್ಟಿಗಳನ್ನು ಆಯೋಜಿಸಲಾಗಿದ್ದು ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.
2026ರನ್ನು ಅದ್ಧೂರಿಯಾಗಿ ಸ್ವಾಗತಿಸಲು ಶಿವಮೊಗ್ಗದಲ್ಲಿ ಸಿದ್ಧತೆ ಜೋರಾಗಿದೆ. ನಗರದ ಎಲ್ಲ ಕ್ಲಬ್‌ಗಳು, ಪಾರ್ಟಿ ಹಾಲ್‌ಗಳು ಅಲಂಕೃತವಾಗಿ ರೆಡಿಯಾಗಿವೆ. ಸಂಜೆಯಾಗುತ್ತಲೆ ಪಾರ್ಟಿಗಳು ಆರಂಭವಾಗಲಿವೆ.
ಎಲ್ಲೆಲ್ಲಿ ಹೇಗಿದೆ ಸಿದ್ಧತೆ?
ಶಿವಮೊಗ್ಗದಲ್ಲಿ ಇಂದು ಸಂಜೆ 7 ಗಂಟೆಯಿಂದಲೇ ಪಾರ್ಟಿಗಳು ಆರಂಭವಾಗಲಿವೆ. ಕಿಮ್ಮನೆ ಗಾಲ್ಫ್ ರೆಸಾರ್ಟ್, ಮಂಡಿ ಮರ್ಚೆಂಟ್ಸ್ ಕ್ಲಬ್, ಕಂಟ್ರಿ ಕ್ಲಬ್, ರಾಯಲ್ ಆರ್ಕಿಡ್ ಹೊಟೇಲ್ ಸೇರಿದಂತೆ ಎಲ್ಲ ಕ್ಲಬ್‌ಗಳಲ್ಲು ಮ್ಯೂಸಿಕಲ್ ನೈಟ್ಸ್ ಮತ್ತು ಪಾರ್ಟಿ ನಡೆಯಲಿದೆ. ಇದಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿದೆ. ಬಗೆಬಗೆಯ ಖಾದ್ಯಗಳು ರೆಡೆಯಾಗುತ್ತಿವೆ. ಈ ಬಾರಿ ವಿವಿಧ ಕ್ಲಬ್‌ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಿನಿಮಾ, ಧಾರವಾಹಿ, ರಿಯಾಲಿಟಿ ಶೋಗಳ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.


ಸುರಕ್ಷತೆಗೆ ಹೆಚ್ಚಿನ ಒತ್ತು
ಕ್ಲಬ್‌ಗಳಲ್ಲಿ ಪಾರ್ಟಿ ವೇಳೆ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಆಯೋಜಕರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆ ಎಲ್ಲೆಡೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಮದ್ಯ, ನಾನ್ ವೆಜ್‌ಗೆ ಡಿಮಾಂಡ್
ಹೊಸ ವರ್ಷಾಚರಣೆ ಸಂದರ್ಭ ಮದ್ಯಕ್ಕೆ ಬೇಡಿಕೆ ಹೆಚ್ಚು. ಇದೇ ಕಾರಣಕ್ಕೆ ಮದ್ಯದ ಅಂಗಡಿಗಳಲ್ಲಿ ಸ್ಟಾಕ್ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಶಿವಮೊಗ್ಗದ ಕೆಲವು ಮದ್ಯದ ಅಂಗಡಿಗಳಲ್ಲಿ ಆಫರ್‌ಗಳನ್ನು ನೀಡಲಾಗುತ್ತಿದೆ. ಇನ್ನು, ಚಿಕನ್, ಮಟನ್ ಸ್ಟಾಲ್‌ಗಳಲ್ಲಿ ಮುಂಚಿತವಾಗಿಯೇ ಆರ್ಡರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೇಕ್‌ಗಳಿಗೆ ಡಿಮಾಂಡ್
ಕಳೆದ ವರ್ಷದಂತೆಯೇ ಈ ಬಾರಿಯು ವಿಧವಿಧದ ಕೇಕ್‌ಗೆ ಡಿಮಾಂಡ್ ಹೆಚ್ಚಾಗಿದೆ. ಶಿವಮೊಗ್ಗದ ಬಹುತೇಕ ಬೇಕರಿಗಳಲ್ಲಿ ಕೇಕ್‌ಗೆ ಗ್ರಾಹಕರು ಆರ್ಡರ್ ಮಾಡಿದ್ದಾರೆ. ಸಣ್ಣ ಗಾತ್ರದ ಕೇಕ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪೇಸ್ಟರಿ ಕೇಕ್‌ಗಳು ಸದ್ಯಕ್ಕೆ ಫಾಸ್ಟ್ ಮೂವಿಂಗ್ ಎಂದು ಬೇಕರಿ ಮಾಲೀಕರುಗಳು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಭದ್ರತೆ ಹೆಚ್ಚಳ
ಸಂಭ್ರಮಾಚರಣೆ ವೇಳೆ ಅಹಿತಕರ ಘಟನೆ ತಡೆಯಲು ಪೊಲೀಸ್ ಇಲಾಖೆ ಭದ್ರತೆ ಹೆಚ್ಚಳ ಮಾಡಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ‘ತಡರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ನೀಡಲಾಗಿದೆ. ನಗರದಾದ್ಯಂತ ಸಿಸಿ ಕ್ಯಾಮೆರಾಗಳ ಕಣ್ಗಾವಲು ಇರಲಿದ್ದು, SAF, KSRP ಹಾಗೂ DAR ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆʼ ಎಂದು ತಿಳಿಸಿದರು.

ಕಾರ್ಯಕ್ರಮ ಆಯೋಜಕರು ನಿಗದಿತ ಸ್ಥಳಾವಕಾಶಕ್ಕೆ ಅನುಗುಣವಾಗಿ ಮಾತ್ರ ಜನರಿಗೆ ಅವಕಾಶ ನೀಡಬೇಕು. ಕಾಲ್ತುಳಿತ ಅಥವಾ ಅಗ್ನಿ ಅವಘಡಗಳಾದಲ್ಲಿ ಆಯೋಜಕರನ್ನೇ ಹೊಣೆ ಮಾಡಲಾಗುವುದು. ಮಾದಕ ವಸ್ತುಗಳ ಬಳಕೆ ವಿರುದ್ಧ ಕಳೆದ 10 ದಿನಗಳಿಂದಲೇ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ. ಕುಡಿದು ವಾಹನ ಚಾಲನೆ, ವೀಲಿಂಗ್ ಹಾಗೂ ತ್ರಿಬಲ್ ರೈಡಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ » ಗಿಫ್ಟ್ ಆಸೆಗೆ ತಾಯಿ, ಮಗಳು ಕಳೆದುಕೊಂಡರು ಲಕ್ಷ ಲಕ್ಷ ಹಣ, ಏನಿದು ಪ್ರಕರಣ?
ನೂತನ ವರ್ಷದ ಸ್ವಾಗತಕ್ಕೆ ಸದ್ಯ ಶಿವಮೊಗ್ಗ ಸಂಪೂರ್ಣ ಸಜ್ಜಾಗಿದೆ. ಸಂಜೆ 7 ಗಂಟೆಯಿಂದಲೇ ಸಂಭ್ರಮಾಚರಣೆ ಆರಂಭವಾಗಲಿದೆ.
New Year 2026
LATEST NEWS
- ಶಿವಮೊಗ್ಗದಿಂದ ಮತ್ತಷ್ಟು ಊರುಗಳಿಗೆ ರೈಲು, ಸಂಸದ ರಾಘವೇಂದ್ರ ಹೇಳಿಕೆ, ಇಲ್ಲಿದೆ ಪಾಯಿಂಟ್ಸ್

- ತೀರ್ಥಹಳ್ಳಿ ಅಪಘಾತ, ಸಾವಿನ ಸಂಖ್ಯೆ ಹೆಚ್ಚಳ, ಆಗಿದ್ದೇನು? ಇಲ್ಲಿದೆ ಫುಲ್ ಡಿಟೇಲ್ಸ್

- ಮತ್ತೆ ಏರಿತು ಅಡಿಕೆ ರೇಟ್, ಒಂದು ಲಕ್ಷದ ಸಹಿಕ್ಕೆ ಧಾರಣೆ | 14 ಜನವರಿ 2026 | ಇವತ್ತಿನ ಅಡಿಕ ಧಾರಣೆ

- ಶಿವಮೊಗ್ಗ ಕೇಂದ್ರ ಕಾರಾಗೃಹದ ಕೈದಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವು, ಆಗಿದ್ದೇನು?

- ಶಾಲೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡ ಶಿಕ್ಷಕ

About The Editor
ನಿತಿನ್ ಆರ್.ಕೈದೊಟ್ಲು






