ರಾಗಿಗುಡ್ಡದಲ್ಲಿ 17 ಗಣಪತಿಗಳ ಅದ್ಧೂರಿ ಮೆರವಣಿಗೆ, ಎಲ್ಲೆಲ್ಲೂ ಬಿಗಿ ಬಂದೋಬಸ್ತ್‌, ಹೇಗಿದೆ ರಾಜಬೀದಿ ಉತ್ಸವ?

ಶಿವಮೊಗ್ಗ: ರಾಗಿಗುಡ್ಡದಲ್ಲಿ ಇವತ್ತು 17 ಗಣಪತಿಗಳ ಸಾಮೂಹಿಕ ವಿಸರ್ಜನೆ (Procession) ಮಾಡಲಾಗುತ್ತಿದೆ. ಇದಕ್ಕೂ ಮೊದಲು ವಿವಿಧ ರಸ್ತೆಗಳಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯುತ್ತಿದೆ. ಈ ಹಿನ್ನೆಲೆ ರಾಗಿಗುಡ್ಡದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ರಾಗಿಗುಡ್ಡ – ಶಾಂತಿನಗರ ಬಡಾವಣೆಯ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ 17 ಗಣಪತಿಗಳನ್ನು ಇವತ್ತು ವಿಸರ್ಜನೆ ಮಾಡಲಾಗುತ್ತಿದೆ. ಪ್ರತಿ ರಸ್ತೆಯಿಂದ ಗಣಪತಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ವಿಸರ್ಜಿಸಲಾಗುತ್ತದೆ.

ಮೆರವಣಿಗೆಯಲ್ಲಿ ವಿವಿಧ ವಾದ್ಯಗಳು, ಡೊಳ್ಳಿನ ಶಬ್ದಕ್ಕೆ ಯುವಕರು ಡಾನ್ಸ್‌ ಮಾಡುತ್ತಿದ್ದಾರೆ. ರಾಗಿಗುಡ್ಡ ಸೇರಿದಂತೆ ಸುತ್ತಮುತ್ತಲ ಬಡಾವಣೆಯ ನಿವಾಸಿಗಳೂ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

r1

ಎಲ್ಲೆಲ್ಲು ಬಗಿ ಬಂದೋಬಸ್ತ್‌

ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಸ್ಥಳೀಯರು ಪೊಲೀಸರು, ಆರ್‌ಎಎಫ್‌ ತುಕಡಿ, ಕೆಎಸ್‌ಆರ್‌ಪಿ, ಡಿಎಆರ್‌ ಸೇರಿದಂತೆ ದೊಡ್ಡ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ರಾಗಿಗುಡ್ಡದಲ್ಲಿರುವ ಮಸೀದಿ ಮುಂಭಾಗ ಭಾರಿ ಬಂದೊಬಸ್ತ್‌ ಕೈಗೊಳ್ಳಲಾಗಿದೆ.

Ragigudda ganesha Procession
ರಾಗುಗಿಡ್ಡ ಮುಖ್ಯರಸ್ತೆಯಲ್ಲಿ ಗಣಪತಿ ಮೂರ್ತಿಗಳ ಮೆರವಣಿಗೆ
Ragigudda ganesha Procession
ರಾಗಿಗುಡ್ಡದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌

ಇದನ್ನೂ ಓದಿ » ನವಿಲು, ಹುಲಿ ದತ್ತು ಪಡೆದ ಶಿವಮೊಗ್ಗದ ಕಾಲೇಜು, ಎಷ್ಟು ಅವಧಿಗೆ?

Ragigudda ganesha Procession

Ragigudda-Ganesha-Procession

Leave a Comment