ಶಿವಮೊಗ್ಗದಲ್ಲಿ ಬೃಹತ್‌ ಸ್ವದೇಶಿ ಮೇಳ, ಮಳಿಗೆಗೆ ಬುಕ್ಕಿಂಗ್‌ ಆರಂಭ, ಯಾವಾಗ ನಡೆಯುತ್ತೆ ಮೇಳ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 15 NOVEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಜಿಲ್ಲಾ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ಡಿಸೆಂಬರ್‌ 6 ರಿಂದ 10 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಸ್ವದೇಶಿ ಮೇಳ (Swadesi Mela) ಆಯೋಜನೆಗೊಂಡಿದೆ. ಈಗಾಗಲೇ ಮಳಿಗೆ ಹಾಕಲು ಬುಕ್ಕಿಂಗ್‌ ಆರಂಭಗೊಂಡಿದೆ.

ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ 250ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿವೆ. 1 ಲಕ್ಷಕ್ಕೂ ಹೆಚ್ಚು ವಿವಿಧ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ರೀತಿಯ ತರಬೇತಿಗಳು, ದೇಶೀಯ ಕ್ರೀಡೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Swadeshi Mela in Shimoga

ಈ ಮೇಳದಲ್ಲಿ ಕೇಂದ್ರದ ಮಂತ್ರಿಗಳು, ರಾಜ್ಯದ ಪ್ರಮುಖ ಸ್ವಾಮೀಜಿಗಳು ಹಾಗೂ ರಾಜ್ಯದ ಮತ್ತು ಜಿಲ್ಲೆಯ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಮಳಿಗೆ ಹಾಕಲು ಆಸಕ್ತರು ಈ ಕೆಳಗಿನ ದೂರವಾಣಿ (ಅರವಿಂದ-9148524854)ಯನ್ನು ಸಂಪರ್ಕಿಸಲು ಕೋರುವಂತೆ ಸ್ವದೇಶಿ ಮೇಳದ ಸಂಯೋಜಕರಾದ ಡಾ ಧನಂಜಯ ಸರ್ಜಿ, ಸಂಚಾಲಕರಾದ ಡಿ. ಎಸ್‌. ಅರುಣ್‌  ಹಾಗೂ ಸಂಘಟಕರಾದ ಹರ್ಷ ಬಿ. ಕಾಮತ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ವಾಟ್ಸಪ್‌‌ನಲ್ಲಿ ಡೇಟ್ ವೈರಲ್, ದೇಗುಲ ಸಮಿತಿ ಹೇಳಿದ್ದೆ ಬೇರೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment