SHIMOGA : ಮಾತನಾಡುವುದೆ ಸಾಧನೆಯಲ್ಲ. ಕಾರ್ಯಸಾಧನೆ ಮಾತನಾಡಬೇಕು. ಉದ್ಯಮಿ ಡಿ.ಟಿ.ಪರಮೇಶ್ ಅವರ ಕಾರ್ಯ ಸಾಧನೆ ಅನುಕರಣೀಯ ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಎಂದರು.
ಶಂಕರಮಠ ರಸ್ತೆಯ ಶೃತಿ ಮೋಟರ್ಸ್ ಶೋ ರೂಂನಲ್ಲಿ (Show Room) ಡಿ.ಟಿ.ಪರಮೇಶ್ ಅವರ ಸವಿನೆನಪು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾವಿರಾರು ಕುಟುಂಬಕ್ಕೆ ಈ ಸಂಸ್ಥೆ ಜೀವನಾಧಾರವಾಗಿದೆ. ಪರಮೇಶ್ ಅವರ ಪ್ರೀತಿಯ ಮಾತು, ಸಂಸ್ಕಾರವನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಶ್ರೀಗಳು ಸಲಹೆ ನೀಡಿದರು.
ಶಿವಮೊಗ್ಗ ಕೃಷಿ ಆಧಾರಿತ ಜಿಲ್ಲೆ. 1980ರ ದಶಕದಿಂದ ಈಚೆಗೆ ಇಲ್ಲಿ ಕೈಗಾರಿಕೆ ಕ್ಷೇತ್ರ ವಿಸ್ತಾರಗೊಂಡಿತು. ಈ ಕ್ಷೇತ್ರದ ಅಭಿವೃದ್ಧಿಗೆ ಡಿ.ಟಿ.ಪರಮೇಶ್ ಅವರ ಕೊಡುಗೆ ದೊಡ್ಡದು. ನೇರ ನುಡಿ, ಚುಟುವಟಿಕೆಯಿಂದ ಇದ್ದರು. ಜೊತೆಗಾರರನ್ನು ಗೌರವದಿಂದ ಕಾಣುತ್ತಿದ್ದರು.ಡಿ.ಎಸ್. ಅರುಣ್, ವಿಧಾನ ಪರಿಷತ್ ಸದಸ್ಯ
ಹಾಸನದಿಂದ ಶಿವಮೊಗ್ಗಕ್ಕೆ ಆಗಮಿಸಿದ ಡಿ.ಟಿ.ಪರಮೇಶ್ ಅವರು ಇಲ್ಲಿಯ ಜನರ ಮನೋಭಾವಕ್ಕೆ ತಕ್ಕ ಹಾಗೆ ಸ್ಪಂದಿಸಿದ್ದಾರೆ. ಇದೇ ಕಾರಣಕ್ಕೆ ಇವತ್ತು ಮನೆ ಮನೆಗೆ ಮಾರುತಿ ಕಾರುಗಳು ತಲುಪಿವೆ. 25ನೇ ವರ್ಷಿಕೋತ್ಸವದ ಸಂದರ್ಭ ಡಿ.ಟಿ.ಪರಮೇಶ್ ಅವರನ್ನು ಕಳೆದುಕೊಂಡಿದ್ದು ನೋವಿನ ಸಂಗತಿ.ಕೆ.ಟಿ.ಗಂಗಾಧರ್, ರೈತ ನಾಯಕ
ಪರಮೇಶ್ ಅವರದ್ದು ಗಂಭೀರ ದೃಷ್ಟಿ. ತಂದೆಯ ರೀತಿ ಸ್ಪಂದಿಸುವ ಅಂತಃಕರಣ. ಅವರಲ್ಲಿ ದುಡಿಮೆಯ ಸಂಕಲ್ಪವಿತ್ತು. ಇವೆಲ್ಲ ಕಾರಣದಿಂದಾಗಿ ಜಿಲ್ಲೆಯ ಉದ್ಯಮ ಕ್ಷೇತ್ರದಲ್ಲಿ ಅವರು ಯಶಸ್ವಿಯಾದರು.ಡಿ.ಮಂಜುನಾಥ್, ಜಿಲ್ಲಾಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು
ಶೃತಿ ಮೋಟರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಮೋಹನ್.ಡಿ.ಪಿ, ಡಾ.ಆಶ್ವತ್ ನಾರಾಯಣ ಶೆಟ್ಟಿ, ಸಂಚಾರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಇದ್ದರು. ಇದೇ ವೇಳೆ ಡಿ.ಟಿ.ಪರಮೇಶ್ ಅವರಿಗೆ ಶೃತಿ ಮೋಟರ್ಸ್ ಸಿಬ್ಬಂದಿ ಗೌರವ ಸಲ್ಲಿಸಿದರು.
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ.
ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ.ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..!ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ.ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ.ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ