ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ನಲ್ಲಿ ಸಿಗ್ನಲ್‌ ಲೈಟ್‌

ಶಿವಮೊಗ್ಗ: ಸಂಚಾರ ದಟ್ಟಣೆ ಉಂಟಾಗುತ್ತಿದ್ದ ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ನಲ್ಲಿ ತಾತ್ಕಾಲಿಕ ಸಿಗ್ನಲ್‌ ಲೈಟ್‌ ಅಳವಡಿಸಲಾದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಇಂದು ಸಿಗ್ನಲ್‌ ಲೈಟ್‌ (Signal Light) ಉದ್ಘಾಟಿಸಿದರು. (ಈ ಸುದ್ದಿಯನ್ನು ಇನ್ನು 38 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಉಷಾ ನರ್ಸಿಂಗ್‌ ಹೋಂ ಸರ್ಕಲ್‌ನಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿವೆ. ನಾಲ್ಕು ರಸ್ತೆಗಳು ಕೂಡುವುದರಿಂದ ಇಲ್ಲಿ ಸಂಚಾರ ದಟ್ಟಣೆ ಉಂಟಾಗುತಿತ್ತು. ಇದೇ ಕಾರಣಕ್ಕೆ ಈ ಸರ್ಕಲ್‌ನಲ್ಲಿ ಸಿಗ್ನಲ್‌ ಅಳವಡಿಸುವಂತೆ ಎಂಬ ಒತ್ತಾಯವಿತ್ತು.

Signal-at-Usha-Nursing-home-circle.

ಇದನ್ನೂ ಓದಿ » ಜೇನು ಸಾಕಾಣೆ, ಸಹಾಯಧನಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಉಷಾ ನರ್ಸಿಂಗ ಹೋಂ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪೊಲೀಸರಿದ್ದಾರೆ, ಟ್ರಾಫಿಕ್ ಸಿಗ್ನಲ್ ಇದೆ ಎಂದಾಗ ಮಾತ್ರ ಸಂಚಾರ ನಿಯಮ ಪಾಲನೆ ಮಾಡುವುದಲ್ಲ. ನಿಮ್ಮ ಕುಟುಂಬ, ಸ್ನೇಹಿತರು, ಅವಲಂಬಿತರು ಮತ್ತು ನಿಮ್ಮ ಜೀವದ ಸುರಕ್ಷತೆಗಾಗಿ ಸಂಚಾರ ನಿಯಮ ಪಾಲನೆ ಅವಶ್ಯಕ.ಮಿಥುನ್‌ ಕುಮಾರ್‌, ಜಿಲ್ಲಾ ರಕ್ಷಣಾಧಿಕಾರಿ

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Signal-at-Usha-Nursing-home-circle.

Leave a Comment