ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಸೆಪ್ಟಂಬರ್ 2020
ನಗರದ ಅಂಬೇಡ್ಕರ್ ಭವನದಲ್ಲಿ ಸೆ.23ರ ಬೆಳಿಗ್ಗೆ ಪೌರ ಕಾರ್ಮಿಕರ ದಿನಾಚರಣೆಯನ್ನು ಆಯೋಜಿಸಲಾಗಿದೆ ಎಂದು ಪಾಲಿಕೆ ಮೇಯರ್ ಸುವರ್ಣ ಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ಕೊರೋನಾ ವಾರಿಯರ್‍ಸ್ ಆಗಿದ್ದಾರೆ. ಇಬ್ಬರು ಪೌರ ಕಾರ್ಮಿಕರ ಬಲಿದಾನವನ್ನು ನಾವು ಮರೆಯಲು ಸಾಧ್ಯವಿಲ್ಲ. ಸೆ.23 ರಂದು ಹಮ್ಮಿಕೊಂಡಿರುವ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರಿಗೆ ಗೌರವ ಸಿಗುವ ರೀತಿಯಲ್ಲಿ ಆಚರಣೆ ಮಾಡಲು ಪಾಲಿಕೆ ನಿರ್ಧ ರಿಸಿದೆ ಎಂದರು.
https://www.facebook.com/liveshivamogga/videos/1421252844739386/?t=44
ಬೆಳ್ಳಿ ದೀಪ, ಕಲ್ಯಾಣ ಭವನ, ಮನೆ
ಪೌರ ಕಾರ್ಮಿಕರ ದಿನಾಚರಣೆಗಾಗಿ ಪಾಲಿಕೆಯ ಆಯವ್ಯಯದಲ್ಲಿ 16 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ. ಪೌರ ಕಾರ್ಮಿಕರ ಕುಟುಂಬ ಚೆನ್ನಾಗಿರಬೇಕು. ಬೆಳಗುವಂತಾಗಬೇಕು ಎಂದು ಪಾಲಿಕೆಯ 409 ಪೌರ ಕಾರ್ಮಿಕರು, ೩೦೮ ಪೌರ ನೌಕರರು ಸೇರಿದಂತೆ ಒಟ್ಟು 717 ಸಿಬ್ಬಂದಿಗಳಿಗೆ ಒಂದು ಜೊತೆ ಬೆಳ್ಳಿದೀಪ ನೀಡಲು ಪಾಲಿಕೆ ಒಮ್ಮತದ ನಿರ್ಧಾರ ತೆಗೆದುಕೊಂಡಿದೆ ಎಂದರು. ಅಷ್ಟೆ ಅಲ್ಲದೇ ಪೌರ ಕಾರ್ಮಿಕರಿಗೆ ಒಂದು ಮನೆ ಕಟ್ಟಿಸಲು ಹಾಗೂ ಕಲ್ಯಾಣ ಭವನ ನಿರ್ಮಿಸಲು ಗಾಂಧಿಜಯಂತಿಯಂದು ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಈ ಬಾರಿ ಸರಳ ಆಚರಣೆ
ಕೋವಿಡ್ ಹಿನ್ನೆಲೆ ಯಲ್ಲಿ ಈ ಬಾರಿಯ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಮತ್ತು ಪ್ರವಾಸ ಮತ್ತು ಆಟೋಟ ಸ್ಪರ್ಧೆಗಳನ್ನು ರದ್ದುಮಾಡಲಾಗಿದೆ. ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಪೌರ ಕಾರ್ಮಿಕರ ದಿನಾಚ ರಣೆ ಕಾರ್ಯಕ್ರಮವನ್ನು ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಚುನಾಯಿತ ಶಾಸಕರು, ಪಾಲಿಕೆ ಸದಸ್ಯರುಗಳು, ಸಂಸದರು, ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳು, ಸ್ಥಾಯಿ ಸಮಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ವೇದಿಕೆಗೆ ಮೃತ ಪೌರ ಕಾರ್ಮಿಕರ ಹೆಸರು
ಈ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ. ಯೋಗೀಶ್‌ರವರು ಪೌರ ಕಾರ್ಮಿಕರ ದಿನಾಚರಣೆಯಂದು ಕೊರೋನಾ ದಿಂದ ಮೃತಪಟ್ಟ ಪೌರ ಕಾರ್ಮಿಕ ರಾದ ಚನ್ನಮ್ಮ ಹಾಗೂ ಪಾಪಾನಾಯ್ಕ ಅವರಿಗೆ ಶಾಂತಿ ಕೋರುವ ಸಲುವಾಗಿ ಆ ವೇದಿಕೆಗೆ ಚನ್ನಮ್ಮ ಹಾಗೂ ಪಾಪಾನಾಯ್ಕ ಸ್ಮರಣಾರ್ಥ ವೇದಿಕೆ ಎಂದು ಹೆಸರಿಡಬೇಕೆಂದು ಮನವಿ ಮಾಡಿದ ಹಿನ್ನಲೆಯಲ್ಲಿ ಆ ವೇದಿಕೆಗೆ ಅವರುಗಳ ಹೆಸರುಗಳನ್ನೇ ಇಟ್ಟು ಅವರನ್ನು ಸ್ಮರಿಸಲಾಗುವುದು ಎಂದು ಮೇಯರ್ ಸುವರ್ಣ ಶಂಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಸುರೇಖಾ ಮುರಳೀಧರ್, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಸದಸ್ಯರುಗಳಾದ ಇ.ವಿಶ್ವಾಸ್, ಜ್ಞಾನೇಶ್ವರ್, ಆಯುಕ್ತ ಚಿದಾನಂದ ವಟಾರೆ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422