ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಸ್ವಲ್ಪ ಯಾಮಾರಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ ಫಿಕ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 25 DECEMBER 2024

ಶಿವಮೊಗ್ಗ : ನಗರದ ಪ್ರಮುಖ ರಸ್ತೆಗಳಲ್ಲಿ ಕೇಬಲ್‌ ಡೆಕ್ಟ್‌ಗಳ ಸ್ಲ್ಯಾಬ್‌ಗಳು (Slab) ಮತ್ತೆ ಅಪಾಯಕಾರಿ ಸ್ಥಿತಿಗೆ ತಲುಪಿವೆ. ಸ್ವಲ್ಪ ಯಾಮಾರಿದರು ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿ ಕಚೇರಿ ಸನಿಹದಲ್ಲೇ, ತಾಲೂಕು ಕಚೇರಿ ಎದುರಲ್ಲೇ ಇಂತಹ ದುಸ್ಥಿತಿ ಇದ್ದರು ಅಧಿಕಾರಿಗಳು ಇವುಗಳ ರಿಪೇರಿಗೆ ಕ್ಯಾರೆ ಅನ್ನದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ‌

ಮೃತ್ಯು ಕೂಪಗಳಾಗುತ್ತಿವೆ ಕೇಬಲ್‌ ಡೆಕ್ಟ್‌

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್‌ ರಸ್ತೆಗಳಾಗಿ ಮೇಲ್ದರ್ಜೆಗೇರಿಸಲಾಯಿತು. ಒಟ್ಟು ಯೋಜನೆ ಮೊತ್ತದ ಪೈಕಿ ಅರ್ಧದಷ್ಟು ಪಾಲು ಈ ಸ್ಮಾರ್ಟ್‌ ರಸ್ತೆಗಳ ನಿರ್ಮಾಣಕ್ಕಾಗಿಯೆ ವೆಚ್ಚಾಗಿದೆ. 472 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಗಳ ಅಡಿಯಲ್ಲಿ ಒಎಫ್‌ಸಿ ಕೇಬಲ್‌ ಡೆಕ್ಟ್‌ಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ಮೇಲಿನಿಂದ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಇವುಗಳೇ ಈಗ ಮೃತ್ಯು ಕೂಪವಾಗಿ ಬದಲಾಗಿವೆ.

Cable-Duct-in-Balaraja-Urs-Road-in-Shimoga.

» ಆರಾರು ತಿಂಗಳಿಗೆ ಕುಸಿಯುತ್ತವೆ..!

ಶಿವಮೊಗ್ಗದ ಬಾಲರಾಜ್‌ ಅರಸ್‌ ರಸ್ತೆಯಲ್ಲಿ ಒಂದೊಂದು ಬದಿಯಲ್ಲಿ ಹತ್ತಕ್ಕೂ ಹೆಚ್ಚು ಕೇಬಲ್‌ ಡೆಕ್ಟ್‌ಗಳಿವೆ. ಭಾರಿ ವಾಹನಗಳ ಸಂಚಾರದಿಂದ ಈ ಡೆಕ್ಟ್‌ಗಳಿಗೆ ಅಳವಡಿಸಿರುವ ಸ್ಲ್ಯಾಬ್‌ಗಳು ಆರಾರು ತಿಂಗಳಿಗೆ ಒಮ್ಮೆ ಕುಸಿಯುತ್ತಿವೆ. ಕೆಲವು ಸ್ಲ್ಯಾಬ್‌ಗಳು ತುಂಡಾಗುತ್ತಿವೆ. ಇವುಗಳ ನಿರ್ವಹಣೆಗೆ ಅಧಿಕಾರಿಗಳು ಆಸಕ್ತಿ ತೋರಿಸದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ.

Smart City Cable Duct

ಡಿಸಿ ಕಚೇರಿ ಬಳಿಯೇ ಮೃತ್ಯು ಕೂಪ

ಮಹಾವೀರ ವೃತ್ತದಲ್ಲಿ ಡೆಕ್ಟ್‌ ಸ್ಲ್ಯಾಬ್‌ ಮುರಿದಿದೆ. ತಿರುವಿನಲ್ಲಿ ಸ್ಲ್ಯಾಬ್‌ ತುಂಡಾಗಿದ್ದು ವಾಹನ ಸವಾರರಿಗೆ ಇದು ಗೊತ್ತಾಗುವುದಿಲ್ಲ. ಹಾಗಾಗಿ ಸ್ವಲ್ಪ ಯಾಮಾರಿದರು ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಸ್ಲ್ಯಾಬ್‌ ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿದೆ. ತಾಲೂಕು ಕಚೇರಿಯ ಎದುರಿಗೇ ಇದೆ. ಸನಿಹದಲ್ಲೇ ಮಹಾನಗರ ಪಾಲಿಕೆ ಕಚೇರಿಯು ಇದೆ. ನಿತ್ಯ ಅಧಿಕಾರಿಗಳು ಇದೇ ರಸ್ತೆಯಲ್ಲಿ ಒಡಾಡುತ್ತಾರೆ. ಆದರೂ ಯಾರೊಬ್ಬರು ಇದರ ರಿಪೇರಿಗೆ ಯೋಚಿಸದಿರುವುದು ಆಶ್ಚರ್ಯ.

Smart City Cable Duct

ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಅಪ್‌ಡೇಟ್‌ ನೀಡಿದ ಸಂಸದ

ಬಾಲರಾಜ್‌ ಅರಸ್‌ ರಸ್ತೆಯೊಂದರಲ್ಲೆ ಹಲವು ಸ್ಲ್ಯಾಬ್‌ಗಳು ಹಾನಿಗೀಡಾಗಿವೆ. ಜೈಲ್‌ ವೃತ್ತ, ಕುವೆಂಪು ರಸ್ತೆಯಲ್ಲಿಯು ಇದೇ ಸ್ಥಿತಿ ಇದೆ. ಸ್ಲ್ಯಾಬ್‌ಗಳ ರಿಪೇರಿ ಕಾರ್ಯ ಮಾಡಿಸಿ ವಾಹನ ಸವಾರರು ನೆಮ್ಮದಿಯಿಂದ ಓಡಾಡಲು ಅವಕಾಶ ಮಾಡಿಕೊಡಬೇಕಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : December 25, 2024

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್‌ | 20 ಮಾರ್ಚ್‌ 2026 | ಅಡಿಕೆ ಧಾರಣೆ

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಕಾರು, ಬೈಕ್‌ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ಉಷಾ ನರ್ಸಿಂಗ್‌ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್‌ ಡಿಟೇಲ್ಸ್‌

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ರಂಗಾಯಣದಲ್ಲಿ ನಾಟಕ ನಿರ್ದೇಶಕ, ಸಹಾಯಕ ನಿರ್ದೇಶಕರಿಂದ ಅರ್ಜಿ ಆಹ್ವಾನ

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಭದ್ರಾವತಿಯ 3 ಮಹಿಳೆಯರು ಸೇರಿ 6 ಮಂದಿಗೆ 2 ವರ್ಷ ಜೈಲು, ₹1.74 ಲಕ್ಷ ದಂಡ, ಯಾಕೆ?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ಮೇ 1ರಿಂದ ಶಿವಮೊಗ್ಗ – ಬೆಂಗಳೂರು ಇಂಡಿಗೋ ವಿಮಾನ ರದ್ದು, ಕಾರಣವೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ದುರ್ಗಿಗುಡಿಯಲ್ಲಿ ಅಂಗಡಿಯೊಳಗೆ ಹೋಗಿ ಬಂದ ಮಾಲೀಕನಿಗೆ ಆಘಾತ, ದಾಖಲಾಯ್ತು ಪ್ರಕರಣ, ಆಗಿದ್ದೇನು?

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

ಶಿವಮೊಗ್ಗ JNNCEಯಲ್ಲಿ ಹ್ಯಾಕ್‌ಫೆಸ್ಟ್‌, ತಮಿಳುನಾಡು, ಮೈಸೂರು, ದಾವಣಗೆರೆ ಕಾಲೇಜುಗಳಿಗೆ ಬಹುಮಾನ

Leave a Comment