SHIVAMOGGA LIVE NEWS, 25 DECEMBER 2024
ಶಿವಮೊಗ್ಗ : ನಗರದ ಪ್ರಮುಖ ರಸ್ತೆಗಳಲ್ಲಿ ಕೇಬಲ್ ಡೆಕ್ಟ್ಗಳ ಸ್ಲ್ಯಾಬ್ಗಳು (Slab) ಮತ್ತೆ ಅಪಾಯಕಾರಿ ಸ್ಥಿತಿಗೆ ತಲುಪಿವೆ. ಸ್ವಲ್ಪ ಯಾಮಾರಿದರು ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿ ಕಚೇರಿ ಸನಿಹದಲ್ಲೇ, ತಾಲೂಕು ಕಚೇರಿ ಎದುರಲ್ಲೇ ಇಂತಹ ದುಸ್ಥಿತಿ ಇದ್ದರು ಅಧಿಕಾರಿಗಳು ಇವುಗಳ ರಿಪೇರಿಗೆ ಕ್ಯಾರೆ ಅನ್ನದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೃತ್ಯು ಕೂಪಗಳಾಗುತ್ತಿವೆ ಕೇಬಲ್ ಡೆಕ್ಟ್
ಸ್ಮಾರ್ಟ್ ಸಿಟಿ ಯೋಜನೆ ಅಡಿ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟ್ ರಸ್ತೆಗಳಾಗಿ ಮೇಲ್ದರ್ಜೆಗೇರಿಸಲಾಯಿತು. ಒಟ್ಟು ಯೋಜನೆ ಮೊತ್ತದ ಪೈಕಿ ಅರ್ಧದಷ್ಟು ಪಾಲು ಈ ಸ್ಮಾರ್ಟ್ ರಸ್ತೆಗಳ ನಿರ್ಮಾಣಕ್ಕಾಗಿಯೆ ವೆಚ್ಚಾಗಿದೆ. 472 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆಗಳ ಅಡಿಯಲ್ಲಿ ಒಎಫ್ಸಿ ಕೇಬಲ್ ಡೆಕ್ಟ್ಗಳನ್ನು ನಿರ್ಮಿಸಲಾಗಿದೆ. ಇವುಗಳಿಗೆ ಮೇಲಿನಿಂದ ಸ್ಲ್ಯಾಬ್ಗಳನ್ನು ಅಳವಡಿಸಲಾಗಿದೆ. ಇವುಗಳೇ ಈಗ ಮೃತ್ಯು ಕೂಪವಾಗಿ ಬದಲಾಗಿವೆ.
ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯಲ್ಲಿ ಒಂದೊಂದು ಬದಿಯಲ್ಲಿ ಹತ್ತಕ್ಕೂ ಹೆಚ್ಚು ಕೇಬಲ್ ಡೆಕ್ಟ್ಗಳಿವೆ. ಭಾರಿ ವಾಹನಗಳ ಸಂಚಾರದಿಂದ ಈ ಡೆಕ್ಟ್ಗಳಿಗೆ ಅಳವಡಿಸಿರುವ ಸ್ಲ್ಯಾಬ್ಗಳು ಆರಾರು ತಿಂಗಳಿಗೆ ಒಮ್ಮೆ ಕುಸಿಯುತ್ತಿವೆ. ಕೆಲವು ಸ್ಲ್ಯಾಬ್ಗಳು ತುಂಡಾಗುತ್ತಿವೆ. ಇವುಗಳ ನಿರ್ವಹಣೆಗೆ ಅಧಿಕಾರಿಗಳು ಆಸಕ್ತಿ ತೋರಿಸದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ.» ಆರಾರು ತಿಂಗಳಿಗೆ ಕುಸಿಯುತ್ತವೆ..!
ಡಿಸಿ ಕಚೇರಿ ಬಳಿಯೇ ಮೃತ್ಯು ಕೂಪ
ಮಹಾವೀರ ವೃತ್ತದಲ್ಲಿ ಡೆಕ್ಟ್ ಸ್ಲ್ಯಾಬ್ ಮುರಿದಿದೆ. ತಿರುವಿನಲ್ಲಿ ಸ್ಲ್ಯಾಬ್ ತುಂಡಾಗಿದ್ದು ವಾಹನ ಸವಾರರಿಗೆ ಇದು ಗೊತ್ತಾಗುವುದಿಲ್ಲ. ಹಾಗಾಗಿ ಸ್ವಲ್ಪ ಯಾಮಾರಿದರು ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಈ ಸ್ಲ್ಯಾಬ್ ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲಿದೆ. ತಾಲೂಕು ಕಚೇರಿಯ ಎದುರಿಗೇ ಇದೆ. ಸನಿಹದಲ್ಲೇ ಮಹಾನಗರ ಪಾಲಿಕೆ ಕಚೇರಿಯು ಇದೆ. ನಿತ್ಯ ಅಧಿಕಾರಿಗಳು ಇದೇ ರಸ್ತೆಯಲ್ಲಿ ಒಡಾಡುತ್ತಾರೆ. ಆದರೂ ಯಾರೊಬ್ಬರು ಇದರ ರಿಪೇರಿಗೆ ಯೋಚಿಸದಿರುವುದು ಆಶ್ಚರ್ಯ.
ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಅಪ್ಡೇಟ್ ನೀಡಿದ ಸಂಸದ
ಬಾಲರಾಜ್ ಅರಸ್ ರಸ್ತೆಯೊಂದರಲ್ಲೆ ಹಲವು ಸ್ಲ್ಯಾಬ್ಗಳು ಹಾನಿಗೀಡಾಗಿವೆ. ಜೈಲ್ ವೃತ್ತ, ಕುವೆಂಪು ರಸ್ತೆಯಲ್ಲಿಯು ಇದೇ ಸ್ಥಿತಿ ಇದೆ. ಸ್ಲ್ಯಾಬ್ಗಳ ರಿಪೇರಿ ಕಾರ್ಯ ಮಾಡಿಸಿ ವಾಹನ ಸವಾರರು ನೆಮ್ಮದಿಯಿಂದ ಓಡಾಡಲು ಅವಕಾಶ ಮಾಡಿಕೊಡಬೇಕಿದೆ.