ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಈ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರು ಅಪಘಾತ ಫಿಕ್ಸ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 13 SEPTEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿ ವಿರುದ್ಧ ಜನರ ಅಸಮಾಧಾನ ಮುಂದುವರೆದಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಜನರಿಗೆ ಸಮಸ್ಯೆಗಳು ಶುರುವಾಗಿವೆ. ರಸ್ತೆ ಮಧ್ಯೆ ಅಳವಡಿಸಿರುವ ಸ್ಲಾಬ್‌ಗಳು ಕುಸಿಯುತ್ತಿದ್ದು ವಾಹನ ಸವಾರರಿಗೆ ದುಸ್ವಪ್ನದಂತೆ ಕಾಡುತ್ತಿದೆ.

Slab in Shimoga Balaraja Urs Road

ಶಿವಮೊಗ್ಗದ ಬಾಲರಾಜ ಅರಸ್‌ ರಸ್ತೆಯಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸಲಾಗಿದೆ. ಅಲ್ಲಲ್ಲಿ ಇವುಗಳಿಗೆ ಸ್ಲಾಬ್‌ಗಳನ್ನು ಹಾಕಲಾಗಿದೆ. ಈ ಸ್ಲಾಬ್‌ಗಳು ವಾಹನ ಸವಾರರ ಪಾಲಿಗೆ ಕಂಟಕವಾಗಿವೆ.

ಕುಸಿಯುತ್ತಿವೆ ಸ್ಲಾಬ್‌ಗಳು

ಬಾಲರಾಜ ಅರಸ್‌ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ಹೆಚ್ಚು. ಈ ಸ್ಲಾಬ್‌ಗಳು ರಸ್ತೆ ಮಧ್ಯದಲ್ಲಿವೆ. ಹಾಗಾಗಿ ಲಾರಿ, ಬಸ್ಸುಗಳು ಇದರ ಮೇಲೆ ಸಂಚರಿಸುತ್ತವೆ. ಅತಿಯಾದ ಭಾರದಿಂದ ಸ್ಲಾಬ್‌ಗಳು ಕುಸಿಯುತ್ತಿವೆ. ಸ್ಲಾಬ್‌ಗಳ ದುಸ್ಥಿತಿ ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಇದರ ಮೇಲೆ ಸಂಚರಿಸಿದರೆ ಅಪಘಾತ ನಿಶ್ಚಿತ.

Slab in Balaraja urs road

ಕಳಪೆ ಕಾಮಗಾರಿ ಮಾಡಿದ್ದಾರೆ. ರಸ್ತೆ ಮಧ್ಯೆ ಇವುಗಳನ್ನು ಹಾಕುವ ಬದಲು ರಸ್ತೆ ಬದಿಯಲ್ಲಿ ಹಾಕಬಹುದಿತ್ತು. ಇದರ ಮೇಲೆ ಗಾಡಿ ಓಡಿಸುವುದಕ್ಕೆ ಭಯವಾಗುತ್ತದೆ. ಗಾಡಿ ಹೋಗುವಾಗಲೆ ಇದು ಕುಸಿದುಬಿಟ್ಟರೆ ಏನು ಮಾಡೋದು.ಮಂಜಣ್ಣ, ಆಟೋ ಚಾಲಕ

ಬ್ಯಾರಿಕೇಡ್‌ ಹಾಕಿ ಬಂದ್‌

ಬಾಲರಾಜ್‌ ಅರಸ್‌ ರಸ್ತೆಯಲ್ಲಿರುವ ಎರಡು ಸ್ಲಾಬ್‌ಗಳು ಅಪಾಯದ ಹಂತಕ್ಕೆ ತಲುಪಿವೆ. ಇವುಗಳ ಸುತ್ತಲು ಬ್ಯಾರಿಕೇಡ್‌ ಹಾಕಲಾಗಿದೆ. ಪಿಡಬ್ಲುಡಿ ಕಚೇರಿ ಮುಂಭಾಗ ಮತ್ತು ಬಸವನಗುಡಿಯ ತಿರುವಿನಲ್ಲಿ ಸ್ಲಾಬ್‌ಗೆ ಬ್ಯಾರಿಕೇಡ್‌ ಹಾಕಲಾಗಿದೆ. ರಾತ್ರಿ ವೇಳೆ ರಸ್ತೆ ಖಾಲಿ ಇರುವುದರಿಂದ ವಾಹನ ಸವಾರರು ಸಹಜವಾಗಿ ವೇಗವಾಗಿಯೇ ತೇರಳುತ್ತಾರೆ. ಇಂತಹ ಸಂದರ್ಭ ಸ್ವಲ್ಪ ಯಾಮಾರಿದರು ಅಪಘಾತ ಸಂಭವಿಸಲಿದೆ.

Slab in Shimoga Balaraja Urs Road

ಮೂರ್ನಾಲ್ಕು ತಿಂಗಳ ಹಿಂದೇನು ಇದೆ ರೀತಿಯಾಗಿತ್ತು. ಆಗ ರಿಪೇರಿ ಮಾಡಿದ್ದರು. ಈಗ ಸಮಸ್ಯೆ ಜಾಸ್ತಿಯಾಗಿದೆ. ಈ ಮೊದಲು ರಸ್ತೆ ಚನ್ನಾಗಿಯೇ ಇತ್ತು. ಸ್ಮಾರ್ಟ್‌ ಸಿಟಿ ಮಾಡಲು ಹೋಗಿ ಇಂತಹ ದುಸ್ಥಿತಿ ಬಂದಿದೆ.ರಮೇಶ್‌, ಬಸವನಗುಡಿ ನಿವಾಸಿ

ಇಲ್ಲಿ ಮಾತ್ರವಲ್ಲ ಈ ಸಮಸ್ಯೆ

ಸ್ಲಾಬ್‌ಗಳ ಸಮಸ್ಯೆ ಬಾಲರಾಜ ಅರಸ್‌ ರಸ್ತೆಗೆ ಸೀಮಿತವಲ್ಲ. ನಗರದ ವಿವಿಧೆಡೆ ರಸ್ತೆ, ಸರ್ಕಲ್‌ಗಳಲ್ಲಿ ಸ್ಲಾಬ್‌ಗಳ ಸಮಸ್ಯೆ ಇದೆ. ಜೈಲ್‌ ಸರ್ಕಲ್‌, ಕುವೆಂಪು ರಸ್ತೆಯಲ್ಲೂ ಸ್ಲಾಬ್‌ಗಳು ಅಂಕು ಡೊಂಕಾಗಿವೆ. ದ್ವಿಚಕ್ರ ವಾಹನಗಳು, ಆಟೋ, ಕಾರುಗಳ ಚಾಲಕರಿಗೆ ಈ ಸ್ಲಾಬ್‌ಗಳು ದೊಡ್ಡ ಸವಾಲಾಗಿವೆ.

ಇದನ್ನೂ ಓದಿ – ಶಿವಮೊಗ್ಗ ತಹಶೀಲ್ದಾರ್‌ ನಾಗರಾಜ್‌ ಸಸ್ಪೆಂಡ್‌, ಕಾರಣವೇನು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment