ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 2 SEPTEMBER 2023
SHIMOGA : ಸಂಚಾರ ನಿಯಮ ಪಾಲಿಸದವರಿಗೆ ಬಿಸಿ ಮುಟ್ಟಿಸಲು ಶಿವಮೊಗ್ಗ ನಗರದಲ್ಲಿ ಆಟೋಮ್ಯಾಟಿಕ್ ನೊಟೀಸ್ ಜಾರಿ ಮಾಡುವ ವ್ಯವಸ್ಥೆ ಆರಂಭಿಸಲಾಗಿದೆ. ಟ್ರಾಫಿಕ್ ರೂಲ್ಸ್ (Traffic Rules) ಪಾಲಿಸದ ವಾಹನಗಳ ಪತ್ತೆಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿ ಸ್ಮಾರ್ಟ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ, ಕಾರುಗಳಲ್ಲಿ ಸೀಟ್ ಬೆಲ್ಟ್ ಹಾಕದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳನ್ನು ಈ ಕ್ಯಾಮರಾಗಳು ಪತ್ತೆ ಹಚ್ಚುತ್ತವೆ. ಆಟೋಮ್ಯಾಟಿಕ್ ಆಗಿ ಮೊಬೈಲ್ ಅಥವಾ ಮನೆಗೆ ನೊಟೀಸ್ ತಲುಪುವ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನವೇ 600ಕ್ಕೂ ಹೆಚ್ಚು ವಾಹನ ಮಾಲೀಕರ ಮೊಬೈಲ್‌ಗೆ ನೊಟೀಸ್ ಕಳುಹಿಸಲಾಗಿತ್ತು.
ನಮ್ ಗಾಡಿಗೂ ದಂಡ ಹಾಕಿದ್ದಾರಾ?
ಬಹುತೇಕರಿಗೆ ತಮ್ಮ ವಾಹನದ ಮೇಲೆ ದಂಡ ಹಾಕಲಾಗಿದೆಯೋ ಇಲ್ಲವೋ ಅನ್ನುವುದೆ ಗೊತ್ತಾವುದಿಲ್ಲ. ಈಗ ಇದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ವಾಹನದ ರಿಜಿಸ್ಟ್ರೇಷನ್ ನಂಬರ್ ಬಳಿಸಿ ದಂಡ ಹಾಕಲಾಗಿದೆಯೋ ಇಲ್ಲವೋ ಅನ್ನುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಇದಕ್ಕೆ ಎರಡು ಮಾರ್ಗವಿದೆ.
ಆನ್ ಲೈನ್ ಮಾರ್ಗ :
ಸರ್ಕಾರದ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ಮೇಲಿರುವ ದಂಡದ ಕುರಿತು ಮಾಹಿತಿ ಸಿಗಲಿದೆ. ವೆಬ್‌ಸೈಟ್‌ನಲ್ಲಿ ONLINE SERVICES ವಿಭಾಗದಲ್ಲಿ POLICE ಇಲಾಖೆಯನ್ನು ಆಯ್ಕೆ ಮಾಡಬೇಕು. ಬಳಿಕ PAY TRAFFIC VIOLATION FINE ಮೇಲೆ ಕ್ಲಿಕ್ ಮಾಡಬೇಕು. AVAIL ONLINE ಬಟನ್ ಒತ್ತಿದರೆ ಕೆಳಗೆ ಜೋಗದ ಚಿತ್ರ ಮತ್ತು ಶಿವಮೊಗ್ಗ ಎಂದು ಬರೆದ ಬಾಕ್ಸ್ ತೆರೆದುಕೊಳ್ಳುತ್ತದೆ. PAY NOW ಎಂದು ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳಲಿದೆ. ಇಲ್ಲಿ ವಾಹನದ ನಂಬರ್ ನಮೂದಿಸಿ ಸರ್ಚ್ ಕೊಟ್ಟರೆ ಪಾವತಿಸಬೇಕಾದ ದಂಡದ ಮೊತ್ತವನ್ನು ತೋರಿಸುತ್ತದೆ.
ಇದನ್ನೂ ಓದಿ- ಮಾಜಿ ಸಿಎಂ ಕುಮಾರಸ್ವಾಮಿ ಆರೋಗ್ಯಕ್ಕಾಗಿ ವಿಶೇಷ ಪೂಜೆ – 3 ಫಟಾಫಟ್ ನ್ಯೂಸ್
ಪೊಲೀಸರ ಬಳಿ ಮಾಹಿತಿ :
ಇನ್ನು, ಸಂಚಾರ ಠಾಣೆ ಪೊಲೀಸರಿಂದಲು ಮಾಹಿತಿ ಪಡೆಯಬಹುದಾಗಿದೆ. ನಗರದ ವಿವಿಧೆಡೆ ಕರ್ತವ್ಯನಿರತ ಸಂಚಾರ ಠಾಣೆ ಎಎಸ್‌ಐಗಳ ಬಳಿ ಸಂಚಾರ ನಿಯಮ ಉಲ್ಲಂಘನೆ ಕುರಿತು ಮಾಹಿತಿ ಪಡೆಯಬಹುದು. ಇಲ್ಲವಾದಲ್ಲಿ ಸಂಚಾರ ಠಾಣೆಗೆ ಭೇಟಿ ನೀಡಿದರೆ ಅಲ್ಲಿಯು ಸಂಚಾರ ನಿಯಮ ಉಲ್ಲಂಘನೆ, ಪಾವತಿಸಬೇಕಾದ ದಂಡದ ಮಾಹಿತಿ ಲಭ್ಯವಾಗಲಿದೆ.
ದಂಡ ಪಾವತಿ ಹೇಗೆ?
ದಂಡ ಪಾವತಿಗು ಆನ್ ಲೈನ್ ಮತ್ತು ಆಫ್‌ಲೈನ್ ವ್ಯವಸ್ಥೆ ಇದೆ. ಕರ್ನಾಟಕ ಒನ್ ವೆಬ್‌ಸೈಟ್ ಮೂಲಕ ದಂಡ ಕಟ್ಟಬಹುದಾಗಿದೆ. ಇನ್ನು, ಕರ್ತವ್ಯನಿರತ ಸಂಚಾರ ಠಾಣೆ ಎಎಸ್‌ಐಗಳು ಅಥವಾ ಸಂಚಾರ ಠಾಣೆಗೆ ನೇರವಾಗಿ ಭೇಟಿ ನೀಡಿ ದಂಡ ಪಾವತಿಸಬಹುದು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422