SHIVAMOGGA LIVE | 25 JUNE 2023
SHIMOGA : ಶಿವಮೊಗ್ಗ ಲೈವ್.ಕಾಂ ವರದಿ ಹಿನ್ನೆಲೆ ಜೈಲ್ ಸರ್ಕಲ್‌ನಲ್ಲಿ ಸ್ಮಾರ್ಟ್ ಸಿಟಿ (Smart City) ಕಾಮಗಾರಿ ಪೂರ್ಣಗೊಂಡಿದೆ. ಡಾ. ಅಂಬೇಡ್ಕರ್ ಅವರ ಹೆಸರು ಇರುವ ಬೋರ್ಡ್‌ಗೆ ಹೊಸ ರೂಪ ನೀಡಲಾಗಿದೆ.

ಜೈಲ್ ವೃತ್ತದಲ್ಲಿ ಸ್ಮಾರ್ಟ್ ಸಟಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಇನ್ನು, ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ನಾಮಫಲಕವನ್ನು ಚರಂಡಿಗೆ ಹಾಕಲಾಗಿತ್ತು. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಆ ವರದಿಯ ಲಿಂಕ್ ಇಲ್ಲಿ ಕೆಳಗಿದೆ.
ಇದನ್ನೂ ಓದಿ – ಜೈಲ್ ಸರ್ಕಲ್‌ನಲ್ಲಿ ಸ್ವಲ್ಪ ಯಾಮಾರಿದ್ರು ಬೈಕ್ ಸವಾರರಿಗೆ ಅಪಾಯ ಫಿಕ್ಸ್
ವರದಿ ಬೆನ್ನಿಗೆ ಕೆಲಸ ಶುರು
ಶಿವಮೊಗ್ಗ ಲೈವ್.ಕಾಂ ವರದಿ ಬೆನ್ನಿಗೆ ಸ್ಮಾರ್ಟ್ ಸಿಟಿ (Smart City) ಅಧಿಕಾರಿಗಳು ಎಚ್ಚೆತ್ತುಕೊಂಡರು. ಮರುದಿನವೆ ಸರ್ಕಲ್‌ನಲ್ಲಿ ಅರೆಬರೆಯಾಗಿದ್ದ ಕಾಮಗಾರಿಯನ್ನು ಪುನಾರಂಭ ಮಾಡಿದರು.
ಸರ್ಕಲ್‌ನಲ್ಲಿ ಲಾಕಿಂಗ್ ಟೈಲ್ಸ್ ಇಲ್ಲದೆ ಜೆಲ್ಲಿ ಕಲ್ಲುಗಳನ್ನು ಹಾಗೆ ಬಿಡಲಾಗಿತ್ತು. ಕುವೆಂಪು ರಸ್ತೆಯಿಂದ ಬರುವ ದ್ವಿಚಕ್ರ ವಾಹನ ಸವಾರರು ದುರ್ಗಿಗುಡಿ ಮುಖ್ಯ ರಸ್ತೆ ಕಡೆಗೆ ತೆರಳುವಾಗ ತೀವ್ರ ಸಮಸ್ಯೆ ಅನುಭವಿಸುತ್ತಿದ್ದರು. ಜೆಲ್ಲಿಯ ಕಾರಣಕ್ಕೆ ಸ್ಕಿಡ್ ಆಗಿ ಬೀಳುವ ಆತಂಕವಿತ್ತು. ವರದಿ ಬಳಿಕ, ಈಗ ಜೆಲ್ಲಿ ತೆರವು ಮಾಡಿ ಲಾಕಿಂಗ್ ಟೈಲ್ಸ್ ಅಳವಡಿಸಲಾಗಿದೆ.
ಡಾ. ಬಿ.ಆರ್.ಅಂಬೇಡ್ಕರ್ ವೃತ್ತದ ನಾಮಫಲಕವನ್ನು ಚರಂಡಿಗೆ ಹಾಕಲಾಗಿತ್ತು. ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ನಾಮಫಲಕಕ್ಕೆ ಹೊಸ ರೂಪ ನೀಡಲಾಗಿದೆ.
ಈಗ ಚರಂಡಿಗೆ ಸ್ಲ್ಯಾಬ್ ಅಳವಡಿಸಲಾಗಿದೆ, ಕುವೆಂಪು ರಸ್ತೆ ಕಡೆಗೆ ಲಾಕಿಂಗ್ ಟೈಲ್ಸ್ ಅಳವಡಿಸಲಾಗಿದೆ. ಶಿವಮೊಗ್ಗ ಲೈವ್.ಕಾಂ ವರದಿ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ನಿರ್ವಹಿಸಿದ್ದಾರೆ.

