SHIVAMOGGA LIVE NEWS
SHIMOGA | ಫುಟ್ ಪಾತ್ ಕೆಳಗೆ (FOOT PATH) ವಿಚಿತ್ರ ಶಬ್ದ ಕೇಳಿಸಿದ್ದು, ಹೊಗೆ ಬಂದಿದೆ. ಇದನ್ನು ಕಂಡು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.
ಶಿವಮೊಗ್ಗ ಲೈವ್ನ ಪ್ರತಿ ಅಪ್ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್ಗಳನ್ನು ಜಾಯಿನ್ ಆಗಿ:

ನಗರದ 100 ಅಡಿ ರಸ್ತೆಯಲ್ಲಿ ನಿರ್ಮಲಾ ಆಸ್ಪತ್ರೆ ಸಮೀಪ ಘಟನೆ ಸಂಭವಿಸಿದೆ. ಸ್ಮಾರ್ಟ್ ಸಿಟಿ ಫುಟ್ ಪಾತ್ ಕಳೆಗೆ ಶಬ್ದ ಮತ್ತು ಹೊಗೆ ಬಂದಿದೆ.
(FOOT PATH)
ಹೊಗೆ ಕಂಡು ಸ್ಥಳೀಯರಲ್ಲಿ ಆತಂಕ
ಸ್ಮಾರ್ಟ್ ಸಿಟಿ ಫುಟ್ ಪಾತ್ ಅಡಿಯಲ್ಲಿ ವಿಚಿತ್ರ ಶಬ್ದ ಕೇಳಿಸಿದೆ. ಕೆಲವೆ ಕ್ಷಣದಲ್ಲಿ ಸಣ್ಣ ಪ್ರಮಾಣದಲ್ಲಿ ಹೊಗೆ ಬರಲು ಶುರುವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕೂಡಲೆ ಮಹಾನಗರ ಪಾಲಿಕೆ ಮತ್ತು ಮೆಸ್ಕಾಂ ಇಲಾಖೆಗೆ ಕರೆ ಮಾಡಿದ್ದಾರೆ.

‘ಬೆಳಗ್ಗೆ 9 ಗಂಟೆ ಹೊತ್ತಿಗೆ ಅಂಗಡಿ ಬಾಗಿಲು ತೆಗೆಯುವಾಗ ಘಟನೆ ಸಂಭವಿಸಿದೆ. ಟ್ರಾಕ್ಟರ್ ಚಲಿಸುತ್ತಿರುವಂತೆ ಶಬ್ದ ಕೇಳಿಸಿತು. ಹತ್ತಿರ ಬಂದು ನೋಡಿದಾಗ ಹೊಗೆ ಬರುತ್ತಿತ್ತು. ಕೂಡಲೆ ಪಾಲಿಕೆ ಸದಸ್ಯರು ಮತ್ತು ಮೆಸ್ಕಾಂಗೆ ಕರೆ ಮಾಡಿ ಮಾಹಿತಿ ನೀಡಿದೆವು. ವಿಡಿಯೋ ಚಿತ್ರೀಕರಣ ಮಾಡಿ ಕಳುಹಿಸಿದೆವು’, ಅನ್ನುತ್ತಾರೆ ವ್ಯಾಪಾರಿ ರಿಷಬ್ ಜೈನ್.
(FOOT PATH)
ವಿದ್ಯುತ್ ಪೂರೈಕೆ ಕಡಿತ
ಫುಟ್ ಪಾತ್ ಕೆಳಗೆ (FOOT PATH) ಹೊಗೆ ಬರುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಸಿಬ್ಬಂದಿ ಕೂಡಲೆ ವಿದ್ಯುತ್ ಸ್ಥಗಿತಗೊಳಿಸಿದ್ದಾರೆ. ಬಳಿಕ ಪರಿಶೀಲನೆ ನಡೆಸಿದರು. ಇದರಿಂದ ಸ್ಥಳೀಯರು ನಿಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಕ್ಲಿಕ್ ಮಾಡಿ ಇದನ್ನೂ ಓದಿ | ರಾತ್ರಿ ಮನೆ ಗೋಡೆ ಮುಟ್ಟಿದರೆ ಕರೆಂಟ್ ಶಾಕ್, ಜನಕ್ಕೆ ಢವ ಢವ, ಸ್ಥಳಕ್ಕೆ ಅಧಿಕಾರಿಗಳು ದೌಡು
ಸ್ಮಾರ್ಟ್ ಸಿಟಿ ಯೋಜನೆ ಅಡಿ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ. ಇದೆ ಕೇಬಲ್ ಮೂಲಕ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ತಾಂತ್ರಿಕ ದೋಷ ಉಂಟಾಗಿದ್ದು, ಶಬ್ದ ಮತ್ತು ಹೊಗೆ ಬಂದಿದೆ ಎಂದು ಹೇಳಲಾಗುತ್ತಿದೆ.
ಅಲ್ಲಲ್ಲಿ ಸಮಸ್ಯೆಯ ವಿಡಿಯೋ
ಸ್ಮಾರ್ಟ್ ಸಿಟಿ ಯೋಜನೆಯ ಭೂಗತ ವಿದ್ಯುತ್ ಕೇಬಲ್’ನಿಂದಾಗಿ ಅಲ್ಲಲ್ಲಿ ಸಮಸ್ಯೆಯಾಗಿದೆ. ಈಚೆಗೆ ಹೊಸಮನೆ ಬಡಾವಣೆಯಲ್ಲಿ ರಾತ್ರಿ ಗ್ರೌಂಡಿಂಗ್ ಸಂಭವಿಸಿತ್ತು. ಕೆಲವು ಕಡೆ ವಿದ್ಯುತ್ ಶಾರ್ಟ್ ಆಗಿರುವ ವರದಿಯಾಗಿದೆ. ಇವುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಇದು ಜನರಲ್ಲಿ ಆತಂಕ ಮೂಡಿಸಿತ್ತು.

ಕ್ಲಿಕ್ ಮಾಡಿ ಇದನ್ನೂ ಓದಿ | ದೀಪಾವಳಿಗೆ ಯಶವಂತಪುರ ಶಿವಮೊಗ್ಗ ಮಧ್ಯೆ ವಿಶೇಷ ರೈಲು, ಟೈಮಿಂಗ್ ಏನು?
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.
LATEST NEWS
- ವರ್ಷ ಪೂರ್ತಿ ರಂಗ ಚಟುವಟಿಕೆ, ಉದ್ಘಾಟನೆಯ ದಿನಾಂಕ ಪ್ರಕಟ, ಏನಿದು ಕಾರ್ಯಕ್ರಮ?

- ಸರ್ಕಾರಿ ಮಹಿಳಾ ನೌಕರರ ಸಂಘ ಅಸ್ಥಿತ್ವಕ್ಕೆ, ಉದ್ದೇಶವೇನು? ರಾಜ್ಯಾಧ್ಯಕ್ಷೆ ಏನೆಲ್ಲ ಹೇಳಿದರು?

- ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ಫೆಬ್ರವರಿ 7ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

- ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತಷ್ಟು ತಗ್ಗಿದ ತಪಮಾನ, ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ?

- ಶಿವಮೊಗ್ಗ ಮಾರಿಕಾಂಬಾ ಜಾತ್ರೆ, ಪಂದ್ಯ ಗೆದ್ದವರಿಗೆ ಎರಡು ಟಗರು

About The Editor
ನಿತಿನ್ ಆರ್.ಕೈದೊಟ್ಲು






