ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮ ನವಮಿ (Rama Navami) ಉತ್ಸವದ ಭಾಗವಾಗಿ ಗುರುವಾರ ದೇವರಿಗೆ ಮಹಾವಿಷ್ಣು ಅಲಂಕಾರ ಮಾಡಲಾಯಿತು. ವಿಶೇಷ ಪೂಜೆ ಹಿನ್ನೆಲೆ ದೊಡ್ಡ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಯುಗಾದಿ ಹಬ್ಬದ ಅಂಗವಾಗಿ ಪಂಚಾಂಗ ಶ್ರವಣ ಆಯೋಜಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಕುಳಿತು ಭಕ್ತರು ವರ್ಷದ ಪಂಚಾಂಗವನ್ನು ತಿಳಿದುಕೊಂಡರು.

ಶ್ರೀ ರಾಮ ನವಮಿ ಉತ್ಸವದ ಅಂಗವಾಗಿ ಪ್ರತಿದಿನ ಸಂಜೆ 6:30ಕ್ಕೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಲ್ಲದೆ ದೇವರಿಗೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಅತಿ ಕೆಳಗೆ ಹಾರಿದ ವಿಮಾನ, ಎರಡು ಟ್ರಿಪ್ ಹಾರಾಟ, ಕಾರಣವೇನು?
ಮಾ.20 ರಂದು ಭವಾನಿ ಅನಂತರಾಮ್ ಮತ್ತು ಸಂಗಡಿಗರು, ಮತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ದೇವರಿಗೆ ವಿಶ್ವಾಮಿತ್ರ ಯಜ್ಞ ಸಂರಕ್ಷಣೆ ಅಲಂಕಾರ, ಮಾ.21ರಂದು ಕಗ್ಗ ಖ್ಯಾತಿಯ ನಟೇಶ್ ಅವರಿಂದ ಸೀತಾ ಪರಿತ್ಯಾಗ ಉಪನ್ಯಾಸ, ದೇವರಿಗೆ ಅಹಲ್ಯಾ ಶಾಪ ವಿಮೋಚನೆ ಅಲಂಕಾರ, ಮಾ.22ರಂದು ನಾಗಶ್ರುತಿ ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಸೀತಾ ಕಲ್ಯಾಣ ಅಲಂಕಾರ, ಮಾ.23ರಂದು ಮುದ್ರಿಕಾ ಪ್ರದಾನ ಗಮಕ ವಾಚನದಲ್ಲಿ ಡಾ. ಸನತ್ ಕುಮಾರ್ ಅವರಿಂದ ವಾಚನ, ಅಚ್ಯುತ ಅವಧಾನಿಯವರಿಂದ ವ್ಯಾಖ್ಯಾನ ನಡೆಯಲಿದೆ. ದೇವರಿಗೆ ಗುಹಾತಿಥ್ಯ ಅಲಂಕಾರ ಇರಲಿದೆ.

ಮಾ.24ರಂದು ಸಂಭ್ರಮ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಕಬಂಧ ಬಾಹು ವಧೆ ಅಲಂಕಾರ, ಮಾ.25 ರಂದು ನಾದಸಂಭ್ರಮ ಕಾರ್ಯಕ್ರಮವಿದ್ದು, ಶಬರಿ ಅತಿಥ್ಯ ಅಲಂಕಾರ, ಮಾ.26ರಂದು ಶೃಂಗೇರಿ ಹೆಚ್.ಎಸ್. ನಾಗರಾಜ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮವಿದ್ದು, ದೇವರಿಗೆ ವಿಭೀಷ ಶರಣಾಗತಿ ಅಲಂಕಾರ, ಮಾ.27ರಂದು ಬೆಳಗ್ಗೆ ಮೂಲ ರಾಮರಿಗೆ ಮಹಾಭಿಷೇಕ, ಸಂಜೆ 5ಕ್ಕೆ ಪಟ್ಟಾಭಿಷೇಕ, ಸಂಜೆ 7ಕ್ಕೆ ಉತ್ಸವ, ರಾವಣ ಸಂಹಾರ ಮತ್ತು ಪುಷ್ಪಕ ವಿಮಾನ ಅಲಂಕಾರ, ಮಾ.28ರಂದು ಸಂಜೆ 7ಕ್ಕೆ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ 5 ರಿಂದ ವಿವಿಧ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮವಿದ್ದು, ರಾತ್ರಿ ವಸಂತಸೇವೆ (ಪಾನಕ ಕೋಸಂಬರಿ) ವಿತರಣೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾರು ಪಾಲ್ಗೊಳ್ಳುವಂತೆ ಕೋರಲಾಗಿದೆ.
LATEST NEWS
- ವಿದ್ಯುತ್ ಬೇಲಿಗೆ ಹಸು ಬಲಿ, ಸಾಕ್ಷ್ಯ ನಾಶಕ್ಕೆ ನಡೆದಿತ್ತಾ ಪ್ಲಾನ್?

- ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯೆ ಸಾವು, ಮಿನಿಸ್ಟರ್ ಗರಂ, ಖಡಕ್ ಸೂಚನೆ, ಏನದು?

- BREAKING NEWS – ಶಿವಮೊಗ್ಗದ ಸಿಂಹಧಾಮದಲ್ಲಿ ನೀರಾನೆ ದಾಳಿ ಡಾಕ್ಟರ್ ಸಾವು

- ಡಿ.ಬಿ.ಹಳ್ಳಿ ಕ್ರಾಸ್‌ನಲ್ಲಿ ಅಪಘಾತ, ಮಹಿಳೆಯ ಕೈ ಮೂಳೆ ಕಟ್, ಆಗಿದ್ದೇನು?

- ಕೋಟೆ ದೇಗುಲದಲ್ಲಿ ದೇವರಿಗೆ ಮಹಾವಿಷ್ಣು ಅಲಂಕಾರ, ಪಂಚಾಂಗ ಶ್ರವಣ, ಇವತ್ತು ಯಾವ ಅಲಂಕಾರ ಇರಲಿದೆ?

About The Editor
ನಿತಿನ್ ಆರ್.ಕೈದೊಟ್ಲು














