ವೀರಶೈವ ತಂಡಕ್ಕೆ ‍ಶ್ರೀಕಾಂತಣ್ಣ ಕ್ರಿಕೆಟ್ ಕಪ್‌, ರನ್ನರ್‌ ಅಪ್‌ ಯಾರು?

Published On : ಮಾರ್ಚ್ 31, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನಗರದ ಎನ್.ಇ.ಎಸ್. ಮೈದಾನದಲ್ಲಿ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀಕಾಂತಣ್ಣ ಕಪ್-3 ಕ್ರಿಕೆಟ್ ಪಂದ್ಯಾವಳಿಯು (cricket tournament) ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವೀರಶೈವ ತಂಡವು ಭರ್ಜರಿ ಜಯ ಸಾಧಿಸಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಸಮುದಾಯಗಳ ಸೌಹಾರ್ದತೆಗೆ ವೇದಿಕೆ

ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಎಲ್ಲಾ ಸಮಾಜಗಳು ಕ್ರೀಡೆಯ ಮೂಲಕ ಒಂದಾಗುತ್ತಿರುವುದು ಹಬ್ಬದ ವಾತಾವರಣ ನಿರ್ಮಿಸಿದೆ. ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ನಾವೆಲ್ಲರೂ ಒಟ್ಟಾಗಿ ಯೋಚಿಸಬೇಕಾದ ಅಗತ್ಯವಿದೆ. ಕ್ರಿಕೆಟ್ ಒಂದು ಜೆಂಟಲ್‌ಮನ್ ಗೇಮ್ ಆಗಿದ್ದು, ಈ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಸೌಹಾರ್ದತೆಯ ಸಂದೇಶ ರವಾನೆಯಾಗಿದೆ, ಎಂದು ಸಂತಸ ವ್ಯಕ್ತಪಡಿಸಿದರು.

Kantanna-Cup-Cricket-at-NES-Ground-by-M-Srikanth-in-Shimoga

ಯಾವ್ಯಾವ ತಂಡ ಗೆದ್ದಿದೆ?

ಒಟ್ಟು 13 ಸಮಾಜಗಳ 19 ತಂಡಗಳು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನ ವೀರಶೈವ ತಂಡ, ದ್ವಿತೀಯ ಬಹುಮಾನ ವಿಪ್ರ ಸಿಸಿ ತಂಡ, ತೃತೀಯ ಬಹುಮಾನ ಅಂಬಿಗರ ಚೌಡಯ್ಯ ತಂಡದ ಮುಡಿಗೇರಿದೆ. ಸಮಾರೋಪ ಸಮಾರಂಭದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ಮುಖಂಡರಾದ ಪಾಲಾಕ್ಷಿ, ನರಸಿಂಹ ಗಂಧದ ಮನೆ, ಯುವರಾಜ್, ಎ.ಹೆಚ್. ಸುನಿಲ್, ಗಿರೀಶ್ ಹಾಗೂ ಭಾವಸಾರ ಕ್ಷತ್ರಿಯ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ : ಒಂದೂವರೆ ಕೋಟಿ ಮೌಲ್ಯದ ಅಡಿಕೆ ನಾಪತ್ತೆ, ಆಗಿದ್ದೇನು?

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 31, 2026

Leave a Comment