ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 8 AUGUST 2023
SHIMOGA : ತಾಂತ್ರಿಕತೆಯ ಪಾಠ ನಡೆಯುತ್ತಿದ್ದ ಜಾಗ ಸಂಪೂರ್ಣ ಸಾಂಪ್ರದಾಯಿಕವಾಗಿತ್ತು. ಪಂಚೆ, ಧೋತಿ ತೊಟ್ಟ ವಿದ್ಯಾರ್ಥಿಗಳು, ಸೀರೆ ಹೂವು ಮುಡಿದ ವಿದ್ಯಾರ್ಥಿನಿಯರು ಸಾಂಪ್ರದಾಯಿಕ (Traditional Day) ಉಡುಗೆಯಲ್ಲಿ ಸಂಭ್ರಮಿಸುತ್ತಿದ್ದರು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಈ ಸಂಭ್ರಮ ಕಂಡುಬಂದದ್ದು ನಗರದ ಎಸ್.ಆರ್.ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನಲ್ಲಿ. ಕಾಲೇಜು ಆವರಣದಲ್ಲಿ ಇವತ್ತು ಸಾಂಪ್ರದಾಯಿಕ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ವಿವಿಧ ಬಗೆಯ ಸಾಂಪ್ರದಾಯಿಕ ಉಡುಪು ಧರಿಸಿ ಮಿಂಚಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ವಿವಿಧ ಸ್ಟೈಲ್‌ನ ಧಿರಿಸು
ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಮಿಂಚಿದರು. ವಿದ್ಯಾರ್ಥಿನಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ, ಹಣೆಮೇಲೆ ಬೊಟ್ಟು, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ದೇಸಿ ಸ್ಟೈಲ್‌ನಲ್ಲಿ ಕಂಗೊಳಿಸಿದರು. ಹುಡುಗರು ಜುಬ್ಬಾ, ಪೈಜಾಮ್, ಧೋತಿ, ಮುಂಡಾಸು, ಕತ್ತಿಗೆ ಸ್ಕಾರ್ಪ್, ಲುಂಗಿ, ರೇಷ್ಮೆ ಅಂಗಿ ಧರಿಸಿ ಗಮನ ಸೆಳೆದರು.
ಇದೇ ವೇಳೆ ಸರಸ್ವತಿ ಪೂಜೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಗೋಡೆಯ ಮೇಲೆ ಹಸೆ ಚಿತ್ತಾರ ಬರೆದು ಸಂಭ್ರಮಿಸಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಸಾವಿರ ಸಾವಿರ ವಿದ್ಯಾರ್ಥಿಗಳಿಂದ ಅಮೃತ ನಡಿಗೆ, ಹೇಗಿತ್ತು? ನಡಿಗೆಗೆ ಕಾರಣವೇನು?