ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 5 NOVEMBER 2024 : ಸುಬ್ಬಯ್ಯ ಆಸ್ಪತ್ರೆಗಳ (Hospital) ಸಮೂಹದ ಅಧ್ಯಕ್ಷ ಟಿ.ಸುಬ್ಬರಾಮಯ್ಯ (88) ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಟಿ. ಸುಬ್ಬರಾಮಯ್ಯ ಅವರು ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಗುತ್ತಿಗೆದಾರರು, ಕೃಷಿಕರಾಗಿದ್ದ ಟಿ.ಸುಬ್ಬರಾಮಯ್ಯ 2003ರಲ್ಲಿ ಸುಬ್ಬಯ್ಯ ಟ್ರಸ್ಟ್ ಆರಂಭಿಸಿ, ಆಸ್ಪತ್ರೆಗಳನ್ನು ಶುರು ಮಾಡಿದ್ದರು. ಬಳಿಕ ಸುಬ್ಬಯ್ಯ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು, ಮ್ಯಾಕ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಿದ್ದರು. ಸುಬ್ಬರಾಮಯ್ಯ ಅವರ ಪುತ್ರ ಡಾ. ನಾಗೇಂದ್ರ ಅವರು ಸುಬ್ಬಯ್ಯ ಆಸ್ಪತ್ರೆಗಳ ಸಮೂಹದ ಎಂ.ಡಿ. ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹಲವು ಗಣ್ಯರಿಂದ ಸಂತಾಪ
ಟಿ.ಸುಬ್ಬರಾಮಯ್ಯ ಅವರ ನಿಧನಕ್ಕೆ ಶಿವಮೊಗ್ಗದ ಪ್ರಮುಖರು, ರಾಜಕಾರಣಿಗಳು, ವೈದ್ಯರು ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ವೈದ್ಯಕೀಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ನಗರದ ಉದ್ಯಮ ವಲಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರ ಅಗಲಿಕೆಯಿಂದ ಶಿವಮೊಗ್ಗ ನಗರದಲ್ಲಿ ಒಬ್ಬ ಅತ್ಯುತ್ತಮ ಉದ್ಯಮಿಯನ್ನು ಕಳೆದುಕೊಂಡು ಉದ್ಯಮ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ.
ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
![]()
2003ರಲ್ಲಿ ತಡೀಕಲ್ ಸುಬ್ಬಯ್ಯ ಟ್ರಸ್ಟ್ ಆರಂಭಿಸಿ, ಅನೇಕ ವೈದ್ಯರಿಗೆ ಮಾರ್ಗದರ್ಶಕರಾಗಿದ್ದಾರೆ. ಸುಬ್ಬರಾಮಯ್ಯ ಅವರ ನಿಧನದಿಂದ ವೈದ್ಯಕೀಯ ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ.
ಬಿ.ವೈ.ರಾಘವೇಂದ್ರ, ಸಂಸದ
![]()
ಇದನ್ನೂ ಓದಿ » ಕುಂಸಿ, ಆಯನೂರು ಸುತ್ತಮುತ್ತ ನಾಳೆ ಇಡೀ ದಿನ ಕರೆಂಟ್ ಇರಲ್ಲ
Subbaiah hospital chairman T. Subbaramaiah breathed last in Shimoga Maxx Hospital.
LATEST NEWS
- ಅಧಿಕಾರಿಗಳು, ಪೊಲೀಸರ ಜಂಟಿ ಕಾರ್ಯಾಚರಣೆ, ಶಿವಮೊಗ್ಗದ ಮಂಡ್ಲಿಯಲ್ಲಿ ದಾಳಿ, ದಾಖಲಾಯ್ತು ಕೇಸ್

- ಶಿವಮೊಗ್ಗ ಸಿಟಿಯಲ್ಲಿ ಶೆಟ್ಟರ ಸಂತೆ, ಶ್ರೀನಿವಾಸ ಕಲ್ಯಾಣೋತ್ಸವ, ಯಾವಾಗ? ಎಲ್ಲಿ ನಡೆಯಲಿದೆ?

- ರಾತ್ರಿ 11:45ಕ್ಕೆ ಅಮೀರ್ ಅಹಮದ್ ಸರ್ಕಲ್‌ಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

About The Editor
ನಿತಿನ್ ಆರ್.ಕೈದೊಟ್ಲು















