SHIMOGA | ಮುಂಜಾಗ್ರತೆ ವಹಿಸದೆ ಕಾರು ಬಾಗಿಲು (Car Door) ತೆಗೆದಿದ್ದರಿಂದ ಹಿಂಬದಿ ಬರುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದ್ದು, ಸವಾರನಿಗೆ ಗಾಯವಾಗಿದೆ. ಘಟನೆ ಸಂಬಂಧ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಘಟನೆ ಸಂಭವಿಸಿದೆ. ನಂದಿನಿ ಹಾಲಿನ ಕೇಂದ್ರದ ಪಕ್ಕದಲ್ಲಿ ಗಾಂಧಿ ನಗರಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆ ಬದಿ ಕಾರು ನಿಂತಿತ್ತು. ಚಾಲಕ ಏಕಾಏಕಿ ಕಾರು ಬಾಗಿಲು (Car Door) ತೆಗೆದಿದ್ದಾನೆ. ತಿಲಕನಗರ ಕಡೆಯಿಂದ ಗಾಂಧಿ ನಗರ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಾಗಿಲು ತಾಗಿದೆ. ನಿಯಂತ್ರಣ ತಪ್ಪಿ ಸವಾರ ಗಾಜನೂರಿನ ಶಿವರುದ್ರಪ್ಪ ಕೆಳಗೆ ಬಿದ್ದಿದ್ದಾರೆ. ಕಾಲು ಮತ್ತು ಕಾಲಿನ ಬೆರಳಿಗೆ ಗಾಯವಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಈ ಬ್ರ್ಯಾಂಡ್ ಭಾರಿ ಫೇಮಸ್, ವಿದೇಶಕ್ಕು ತಲುಪುತ್ತಿದೆ ಮಲೆನಾಡ ಟೇಸ್ಟ್, MN ಪಿಕಲ್ಸ್ ಬಗ್ಗೆ ನಿಮಗೆಷ್ಟು ಗೊತ್ತು?
ಶಿವರುದ್ರಪ್ಪ ಅವರನ್ನ ಸುಬ್ಬಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಚಾಲಕನ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CLICK HERE TO JOIN SHIVAMOGGA LIVE WHATSAPP GROUP