SHIVAMOGGA LIVE | 3 JUNE 2023
SHIMOGA : ಕೇಂದ್ರ ಕಾರಾಗೃಹದ ಮಹಿಳಾ ವಿಭಾಗದಲ್ಲಿ ಪೊಲೀಸ್ ಇಲಾಖೆ ವತಿಯಿಂದ ದಿಢೀರ್ ತಪಾಸಣೆ (Sudden Search) ನಡೆಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿಂದುಮಣಿ ಅವರ ನೇತೃತ್ವದ ತಂಡ ತಪಾಸಣೆ ನಡೆಸಿತು.
ಕೇಂದ್ರ ಕಾರಾಗೃಹದ ಮಹಿಳಾ ವಿಭಾಗದಲ್ಲಿ ಪ್ರತಿ ಸೆಲ್ ಮತ್ತು ಬಂಧಿಗಳನ್ನು ತಪಾಸಣೆ (Sudden Search) ಮಾಡಲಾಯಿತು.
ಮಹಿಳಾ ಕೇಂದ್ರ ಕಾರಾಗೃಹ ಮತ್ತು ಬಂಧಿಗಳನ್ನು ತಪಾಸಣೆ ಮಾಡಲಾಯಿತು. ಈ ವೇಳೆ ಯಾವುದೆ ರೀತಿ ನಿಷೇಧಿತ ವಸ್ತುಗಳು ದೊರೆತಿಲ್ಲ.ಹೇಮಾವತಿ.ಜಿ, ಕೇಂದ್ರ ಕಾರಾಗೃಹದ ಅಧೀಕ್ಷಕಿ
ತಪಾಸಣಾ ತಂಡಲ್ಲಿ ಒಬ್ಬ ಮಹಿಳಾ ಪೊಲೀಸ್ ಹೆಡ್ ಕಾನ್‌ಸ್ಟೇಬಲ್, 8 ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್, ತಪಾಸಣಾ ಯಂತ್ರದೊಂದಿಗೆ 5 ಪುರುಷ ಪೊಲೀಸ್ ಸಿಬ್ಬಂದಿ ಹಾಗೂ ಡಾಗ್ ಸ್ಕ್ವಾಡ್ ಭಾಗವಹಿಸಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ – 40 ಪರ್ಸೆಂಟ್ ವಿರುದ್ಧ ಶಿವಮೊಗ್ಗದಲ್ಲಿ ಮಹಿಳೆಯರ ಹೋರಾಟ, ಡಿಸಿ ಕಚೇರಿ ಗೇಟ್‌ಗೆ ಅಡ್ಡಲಾಗಿ ಕುಳಿತು ಆಕ್ರೋಶ
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ