ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಜುಲೈ 2020
ಸಂಡೆ ಕರ್ಫ್ಯೂ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಮುಕ ರಸ್ತೆಗಳು ಜನ ಮತ್ತು ವಾಹನ ಸಂಚಾರವಿಲ್ಲದೆ ಬಿಕೋ ಅನ್ನುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ವಾಹನ ಸಂಚಾರ ಕಡಿಮೆಯಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾವ್ಯಾವ ರಸ್ತೆಯಲ್ಲಿ ಹೇಗಿದೆ?
ಬಿ.ಹೆಚ್.ರೋಡ್ | ನಗರದ ಪ್ರಮುಖ ರಸ್ತೆ. ವಾಹನ ಮತ್ತು ಜನ ಸಂಚಾರ ವಿರಳ. ಅಗತ್ಯ ಸೇವೆಗಳನ್ನು ಪೂರೈಸುವ ಸಿಲಿಂಡರ್ ಲಾರಿಗಳು, ಹಾಲಿನ ವಾಹನಗಳು ನಿರಂತರ ಸಂಚರಿಸುತ್ತಿವೆ. ಕೆಲವು ಕಾರುಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ.
ಸಾಗರ ರಸ್ತೆ | ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಸಾಗರ ರಸ್ತೆಯಲ್ಲಿ ಬೆರಳಣಿಕೆಯಷ್ಟು ವಾಹನಗಳು ಮಾತ್ರ ಸಂಚರಿಸುತ್ತಿದ್ದವು. ಅನಗತ್ಯವಾಗಿ ಓಡಾಡುವವರನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ಗಾಂಧಿ ಬಜಾರ್ | ಪ್ರಮುಖ ವಹಿವಾಟು ಕ್ಷೇತ್ರ. ಕೆಲವು ತರಕಾರಿ ಅಂಗಡಿಗಳು, ದಿನಸಿ ಅಂಗಡಿಗಳು ಬಾಗಿಲು ತೆಗೆಯಲಾಗಿತ್ತು.
ಹೂವಿನ ಮಾರುಕಟ್ಟೆ | ಕೆಲವು ವ್ಯಾಪಾರಿಗಳು ಹೂವಿನ ವ್ಯಾಪಾರ ನಡೆಸಿದರು. ಬೆಳಗ್ಗೆಯಿಂದಲೇ ವ್ಯಾಪಾರ ನಡೆಯುತ್ತಿತ್ತು.
ನೆಹರೂ ರೋಡ್ | ಇಲ್ಲಿ ಯಾವುದೇ ಅಂಗಡಿಗಳ ಬಾಗಿಲು ತೆಗೆದಿಲ್ಲ. ಎಲ್ಲವೂ ಬಂದ್ ಮಾಡಲಾಗಿದೆ.
ದುರ್ಗಿಗುಡಿ | ಬೆಳಗ್ಗೆಯಿಂದಲೂ ಬಹುತೇಕ ಅಂಗಡಿಗಳು ಬಂದ್ ಆಗಿವೆ. ತರಕಾರಿ, ಮಟನ್ ಅಂಗಡಿಗಳು ಮಾತ್ರ ತೆಗೆದಿದ್ದವು. ಹೊಟೇಲ್‍ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಇತ್ತು.
ಜೈಲ್ ರೋಡ್ | ಬೆಳಗ್ಗೆಯಿಂದಲೂ ಜನ ಮತ್ತು ವಾಹನ ಸಂಚಾರ ಹೆಚ್ಚಿತ್ತು. ಈ ರಸ್ತೆಯಲ್ಲಿ ಹಲವು ಮಟನ್ ಮತ್ತು ಚಿಕನ್ ಸ್ಟಾಲ್‍ಗಳಿವೆ. ಹಾಗಾಗಿ ಜನ ದಟ್ಟಣೆ ಹೆಚ್ಚಿದೆ.
ಹಂಡ್ರೆಡ್ ಫೀಟ್ ರೋಡ್ | ವಿನೋಬಗರದ ನೂರು ಅಡಿ ರಸ್ತೆಯಲ್ಲೂ ಜನ ಮತ್ತು ವಾಹನ ಸಂಚಾರ ನಿರಂತರವಾಗಿತ್ತು. ಇಲ್ಲಿಯೂ ಕೆಲವು ಅಗತ್ಯ ವಸ್ತು ಮಾರಾಟ ಮಾಡುವ ಅಂಗಡಿ ಬಾಗಿಲು ತೆಗೆದಿದ್ದವು.
ಸವಳಂಗ ರಸ್ತೆ | ಜನ, ವಾಹನ ಸಂಚಾರವಿತ್ತು. ಬಾಲರಾಜ್ ಅರಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಬ್ಯಾರಿಕೆಡ್ ಹಾಕಲಾಗಿದೆ. ರಸ್ತೆಯ ಕೆಲವು ಕಡೆ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬಾಗಿಲು ಬಂದ್ ಮಾಡಿಸಿದ ಪೊಲೀಸ್
ಜನ ಸಂಚಾರ ನಿಯಂತ್ರಿಸಲು ಪೊಲೀಸರು ಫೀಲ್ಡಿಗಿಳಿದು ಅಂಗಡಿಗಳನ್ನು ಬಂದ್ ಮಾಡಿಸಿದರು. ಜೀಪ್‍ನಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ ಅಂಗಡಿಗಳ ಬಾಗಿಲು ಹಾಕಿಸಿದರು. ನಗರದ ವಿವಿಧೆಡೆ ಪೊಲೀಸರು ರಸ್ತೆಗಳನ್ನು ಬಂದ್ ಮಾಡಿ, ಅನಗತ್ಯವಾಗಿ ಓಡಾಡುವವರಿಗೆ ಕಡಿವಾಣ ಹಾಕುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]