ಮೆಗ್ಗಾನ್ ಆಸ್ಪತ್ರೆ ಮುಂದೆ ಕರೋನ ಪರೀಕ್ಷೆಗೆ ಸ್ಥಾಪಿಸಿದ್ದ ಬೂತ್ ಪೀಸ್ ಪೀಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

shivamogga live new logo formate

ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020

ಮಹಾನಗರ ಪಾಲಿಕೆ ವತಿಯಿಂದ ಮೆಗ್ಗಾನ್ ಆಸ್ಪತ್ರೆಗೆ ನೀಡಲಾಗಿದ್ದ ಸ್ವ್ಯಾಬ್ ಬೂತ್ ಪೀಸ್ ಪೀಸ್ ಆಗಿದೆ. ಕೆಲವೇ ದಿನದಲ್ಲಿ ಬೂತ್ ಈ ಸ್ಥಿತಿಗೆ ತಲುಪಿದ್ದಕ್ಕೆ ಪಾಲಿಕೆಯ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಗೆ ಬರುವವರ ಗಂಟಲು ದ್ರವ ಮಾದರಿ ಸಂಗ್ರಹಿಸಲು ಅನುಕೂಲವಾಗಲಿ ಎಂದು ಸ್ವ್ಯಾಬ್ ಬೂತ್ ನೀಡಲಾಗಿತ್ತು. ಒಂದು ಸ್ವ್ಯಾಬ್ ಬೂತ್‍ಗೆ 25 ಸಾವಿರ ರೂ. ಖರ್ಚಾಗಿದೆ.  ಮೆಗ್ಗಾನ್ ಆಸ್ಪತ್ರೆ ಕರೋನ ಕಟ್ಟಡದ ಮುಂಭಾಗದಲ್ಲಿ ಈ ಬೂತ್ ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಸುರಿದ ಮಳೆ, ಭಾರಿ ಗಾಳಿಗೆ ಸ್ವ್ಯಾಬ್ ಬೂತ್ ಉರುಳಿ ಬಿದ್ದು, ಗ್ಲಾಸ್ ಪುಡಿಪುಡಿಯಾಗಿದೆ. ಬೂತ್ ಪೀಸ್ ಪೀಸ್ ಆಗಿದೆ.

94889179 1109649322729820 4129309226277273600 o.jpg? nc cat=102& nc sid=110474& nc ohc=Fw1JFwVd2w8AX emTc & nc ht=scontent.fblr11 1

ಬೂತ್ ಸ್ಥಿತಿ ಕಂಡು ಹೌಹಾರಿದ ಸದಸ್ಯರು

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್.ಸಿ.ಯೋಗೇಶ್ ನೇತೃತ್ವದಲ್ಲಿ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಕರೋನ ಪರಿಸ್ಥಿತಿ, ಸಿಬ್ಬಂದಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಸ್ವ್ಯಾಬ್ ಬೂತ್ ಕಂಡು ಹೌಹಾರಿದರು. ಬೂತ್ ಈ ಸ್ಥಿತಿಗೆ ತಲುಪಿ ಐದಾರು ದಿನವಾದರು ಅದರ ದುರಸ್ಥಿತಗೆ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಆಸ್ಪತ್ರೆಯಲ್ಲಿ 180 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಕರೋನ ವಿರುದ್ಧ ನೀಡುವ ಉಪಕರಣಗಳನ್ನು ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ಬಾರಿ ಇಲ್ಲಿ ಬಂದು ಸಭೆ ನಡೆಸಿ ತೆರಳುತ್ತಾರೆ. ಆದರೆ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಹೆಚ್.ಸಿ.ಯೋಗೇಶ್ ಆಕ್ರೋಶ ವ್ಯಕ್ತಪಡಿಸಿದರು.

92107209 840687883077790 4340426127509028864 n.jpg? nc cat=103& nc sid=dd9801& nc ohc=nTffco3BFv0AX9cUOmv& nc ht=scontent.fblr11 1

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment