ಶಿವಮೊಗ್ಗದಲ್ಲಿ ಈ ಬಾರಿಯು ವೈಭವದ ತೆಪ್ಪೋತ್ಸವ, ಹೇಗಿದೆ ಸಿದ್ಧತೆ? ಏನೆಲ್ಲ ಕಾರ್ಯಕ್ರಮ ಇರಲಿದೆ?

 ಶಿವಮೊಗ್ಗ  LIVE 

ಶಿವಮೊಗ್ಗ: ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ಸೀತಾರಾಮ ಕಲ್ಯಾಣ ಶತಮಾನೋತ್ಸವದ ಅಂಗವಾಗಿ ತೆಪ್ಪೋತ್ಸವ ಸಮಿತಿಯಿಂದ ಜ.3ರ ಸಂಜೆ 7.30ರಿಂದ ವೈಭವದ ತೆಪ್ಪೋತ್ಸವ (Teppotsava) ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೆಚ್.ಹೆಚ್.ನಾಗೇಶ್ ತಿಳಿಸಿದರು.

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಗೇಶ್‌, ಅರ್ಚಕರಾಗಿದ್ದ ಅನಂತರಾಮ ಐಯ್ಯಂಗಾರ ಅವರು 74 ವರ್ಷದ ಹಿಂದೆ ಕಲ್ಯಾಣೋತ್ಸವದಲ್ಲಿ ತೆಪ್ಪೋತ್ಸವವನ್ನು ಸೇರಿಸಿದರು. ಅಂದಿನಿಂದ ನಿರಂತರವಾಗಿ ತೆಪ್ಪೋತ್ಸವ ನಡೆಯುತ್ತಿದೆ ಎಂದರು.

ತೆಪ್ಪೋತ್ಸವ ಕುರಿತು ಇಲ್ಲಿದೆ ಪ್ರಮುಖಾಂಶ

POINT-1ಆರಂಭದ 8 ರಿಂದ 10 ವರ್ಷ ಭೀಮನ ಮಡುವಿನಲ್ಲಿ ಬಿದಿರು ಬೊಂಬುಗಳ ತೆಪ್ಪದಲ್ಲಿ ತೆಪ್ಪೋತ್ಸವ ನಡೆಯುತ್ತಿತ್ತು. ನಂತರ ಜೋಡಿ ದೋಣಿಯಲ್ಲಿ ಅದೇ ಜಾಗದಲ್ಲಿ ಐದು ವರ್ಷ ತೆಪ್ಪೋತ್ಸವ ಮುಂದುವರಿಯಿತು.

POINT-2ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳ, ಉತ್ಸವ ಮೂರ್ತಿಯ ಸುರಕ್ಷತೆ ಹಿನ್ನೆಲೆ ಭೀಮನ ಮಡು ಸೂಕ್ತ ತಾಣವಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು. ಕೋರ್ಪಲಯ್ಯ ಛತ್ರದ ಬಳಿ ತೆಪ್ಪೋತ್ಸವ  ಸ್ಥಳಾಂತರಗೊಂಡಿತು. ಅಂದಿನಿಂದ ತೆಪ್ಪೋತ್ಸವದ ಸ್ವರೂಪದಲ್ಲಿ ಕಾಲ ಕಾಲಕ್ಕೆ ನವೀನ ರೀತಿಯಲ್ಲಿ ತೆಪ್ಪವನ್ನು ನಿರ್ಮಿಸಿ ಉತ್ಸವ ನಡೆಸಲಾಗುತ್ತಿದೆ.

Shimoga-Tunga-River-Teppotsava-Kote-Temple

POINT-3ಈ ಮೊದಲು ಕಲ್ಯಾಣೋತ್ಸವ ಸಮಿತಿಯ ಮೇಲ್ವಿಚಾರಣೆಯಲ್ಲಿ ತೆಪ್ಪೋತ್ಸವ ನಡೆಯುತ್ತಿತ್ತು. ಕಳೆದ 25 ವರ್ಷಗಳಿಂದ ಸ್ವತಂತ್ರ ಸಮಿತಿ ಮೇಲ್ವಿಚಾರಣೆಯಲ್ಲಿ ವೈಭವದ ತೆಪ್ಪೋತ್ಸವ ನಡೆಸಲಾಗುತ್ತಿದೆ.

ಈ ಬಾರಿ ತೆಪ್ಪೋತ್ಸವದ ಹೈಲೈಟ್ಸ್‌

ಈ ಬಾರಿ ತೆಪ್ಪೋತ್ಸವದಲ್ಲಿ ಬಣ್ಣ ಬಣ್ಣದ ಹೂ, ಝಗಮಗಿಸುವ ವಿದ್ಯುತ್ ಅಲಂಕಾರ, ಸಿಡಿಮದ್ದುಗಳ ಪ್ರದರ್ಶನ ಇರಲಿದೆ.

ಭಕ್ತಿ ಸಂಗೀತ, ಕುಮಾರ್ ಸ್ವಾಮಿಯವರ ಸ್ಯಾಕ್ಸೋಫೋನ್, ಭಜನೆ ಕಾರ್ಯಕ್ರಮ ಇರಲಿದೆ. ಸಂಜೆ 6 ಗಂಟೆಯಿಂದಲೇ ತುಂಗಾ ನದಿ ಮಂಟಪದ ಬಳಿ ಕಾರ್ಯಕ್ರಮ ಶುರುವಾಗಲಿದೆ.

ಕಾರ್ಯಕ್ರಮದ ನಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಸಮಿತಿ ವಿನಂತಿಸಿದೆ.

ಇದನ್ನೂ ಓದಿ » ಮೆಕಾನಿಕಲ್‌ ಇಂಜಿನಿಯರ್‌ ಇನ್ಮುಂದೆ ಶಿವಮೊಗ್ಗ ಪೊಲೀಸ್‌ ಇಲಾಖೆಯ ‘ಮೈಕ್‌ ಒನ್‌ʼ

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎಂ.ಎಲ್.ಲಕ್ಷ್ಮೀಗೌಡ, ಕೋಶಾಧಿಕಾರಿ ಕೆ.ಮಂಜುನಾಥ್, ಸಮಿತಿ ಸದಸ್ಯರಾದ ಟಿ.ಎಸ್‌.ಬದರಿನಾಥ್‌, ಜಿ.ವಿಜಯ್‌ ಕುಮಾರ್ ಹಾಜರಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment