ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JANUARY 2021
ಜಿಲ್ಲೆಯ ಕ್ವಾರಿಗಳಿಗೆ ಅಕ್ರಮವಾಗಿ ಸ್ಪೋಟಕಗಳು ಸರಬರಾಜು ಆಗುತ್ತಿರುವುದು ಹೊಸತೇನಲ್ಲ. ಕುಖ್ಯಾತ ಭಯೋತ್ಪಾದಕರು ಕೂಡ ಇಲ್ಲಿಂದ ಸ್ಪೋಟಕಗಳನ್ನು ಕೊಂಡೊಯ್ದಿದ್ದರು ಎಂಬುದು ಹಲವು ಸ್ಪೋಟ ಪ್ರಕರಣಗಳಲ್ಲಿ ಪತ್ತೆಯಾಗಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಹಮದಾಬಾದ್ ಸರಣಿ ಸ್ಪೋಟ
2008ರಲ್ಲಿ ಗುಜರಾತ್ ರಾಜಧಾನಿ ಅಹಮದಾಬಾದ್‍ನಲ್ಲಿ ಸರಣಿ ಸ್ಪೋಟ ಸಂಭವಿಸಿತ್ತು. ಪ್ರಕರಣ ಮಾಸ್ಟರ್ ಮೈಂಡ್, ಕುಖ್ಯಾತ ಉಗ್ರ ಯಾಸಿನ್ ಭಟ್ಕಳ್‍ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಸಂದರ್ಭ ಯಾಸಿನ್ ಭಟ್ಕಳ್, ಶಿವಮೊಗ್ಗದಿಂದ ತಂದಿದ್ದ ಜಿಲೆಟಿನ್ ಕಡ್ಡಿಗಳನ್ನು ಸ್ಪೋಟಕ್ಕೆ ಬಳಸಲಾಗಿತ್ತು ಎಂದು ತಿಳಿಸಿದ್ದ.
ಶಿವಮೊಗ್ಗಕ್ಕೂ ಬಂದಿದ್ದ ಯಾಸಿನ್
ಸ್ಪೋಟಕ್ಕೂ ಮೊದಲು ಯಾಸಿನ್ ಭಟ್ಕಳ್ ಶಿವಮೊಗ್ಗಕ್ಕೆ ಬಂದಿದ್ದ. ಇಲ್ಲಿನ ಕೆಲವು ಕ್ವಾರಿಗಳಿಗೂ ಭೇಟಿ ನೀಡಿದ್ದ. ಇದೇ ಸಂದರ್ಭ ತೀರ್ಥಹಳ್ಳಿಯ ಹಣಗೆರೆಕಟ್ಟೆಗೂ ಆತ ಭೇಟಿ ನೀಡಿದ್ದ ಅನ್ನುವುದು ಈ ತನಿಖೆಗಳ ವೇಳೆ ತಿಳಿದು ಬಂದಿತ್ತು. ಭದ್ರಾ ಅಭಯಾರಣ್ಯದಲ್ಲಿ ಸಭೆಯನ್ನೂ ನಡೆಸಿದ್ದ ಎಂದು ಹೇಳಲಾಗುತ್ತಿದೆ.
ಅಕ್ರಮ ಸ್ಪೋಟಕಕ್ಕೆ ಹೆಸರುವಾಸಿ
ಉಗ್ರ ಯಾಸಿನ್ ಭಟ್ಕಳ್‍ನದ್ದು ಒಂದು ದಶಕಕ್ಕೂ ಹಿಂದಿನ ಕೇಸ್. ಆದರೂ ಶಿವಮೊಗ್ಗದಲ್ಲಿ ಜಿಲ್ಲಾಡಳಿತ ಸ್ಪೋಟಕದ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ.
ಸ್ಪೋಟಕಗಳು, ಜಿಲೆಟಿನ್ ಕಡ್ಡಿ ಅಕ್ರಮ ಸಾಗಣೆ ಸಾಮಾನ್ಯದಂತೆ ಆಗಿದೆ. ಅಕ್ರಮ ಕ್ವಾರಿ, ಕ್ರಷರ್‍ಗಳ ನಿಯಂತ್ರಣ ವಿಚಾರದಲ್ಲಿ ಯಾವುದೆ ಕ್ರಮ ಕೈಗೊಂಡಿದ್ದರೆ, ಸ್ಪೋಟಕಗಳ ಅಕ್ರಮ ಸಾಗಣೆಗೂ ಬ್ರೇಕ್ ಬಿದ್ದಿರುತ್ತಿತ್ತು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]