ಶಿವಮೊಗ್ಗದಲ್ಲಿ ‘ಥಟ್‌ ಅಂತ ಹೇಳಿ’ ಕಾರ್ಯಕ್ರಮ, ಹೇಗಿತ್ತು ರಸಪ್ರಶ್ನೆ ಸ್ಪರ್ಧೆ? ಯಾರೆಲ್ಲ ಭಾಗವಹಿಸಿದ್ದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 FEBRUARY 2024

SHIMOGA : ಜನಪ್ರಿಯ ‘ಥಟ್‌ ಅಂತ ಹೇಳಿʼ ರಸಪ್ರಶ್ನೆ ಕಾರ್ಯಕ್ರಮ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಿತು. ಡಾ. ನಾ.ಸೋಮೇಶ್ವರ ಅವರು ಕಾರ್ಯಕ್ರಮದ ನಡೆಸಿಕೊಟ್ಟರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ಆರು ತಂಡಗಳು ಭಾಗವಹಿಸಿದ್ದವು. ಡಾ. ನಾ.ಸೋಮೇಶ್ವರ ಅವರು ಆರು ತಂಡಗಳಿಗೆ ಪ್ರಶ್ನೆಗಳನ್ನು ಕೇಳಿದರು. ಸರಿ ಉತ್ತರ ನೀಡಿದ ತಂಡಕ್ಕೆ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಆರು ತಂಡಗಳಿಗು ಸರಿಯಾದ ಉತ್ತರ ಗೊತ್ತಿಲ್ಲದಿದ್ದರೆ ಪ್ರೇಕ್ಷಕರಿಗೆ ಉತ್ತರ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಸರಿ ಉತ್ತರ ನೀಡಿದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ವಿತರಿಸಲಾಯಿತು.

ರಸಪ್ರಶ್ನೆ ಕಾರ್ಯಕ್ರಮದ ಬಳಿಕ ಕರ್ನಾಟಕ ಸಂಘದ ತಿಂಗಳ ಅತಿಥಿ ಉಪನ್ಯಾಸ ನಡೆಯಿತು. ಡಾ. ನಾ.ಸೋಮೇಶ್ವರ ಅವರು ನಮ್ಮ ಹೊಟ್ಟೆಯಲ್ಲೊಂದು ಮಿದುಳು ವಿಷಯದ ಕುರಿತು ಮಾತನಾಡಿದರು. ಕರ್ನಾಟಕ ಸಂಘದ ಅ‍ಧ್ಯಕ್ಷ ಎಂ.ಎನ್‌.ಸುಂದರ ರಾಜ್‌ ಅವರು ಅಧ್ಯಕ್ಷತೆ ವಹಿಸಿದ್ದರು.

That Anat Heli Na Somashekar in Shimoga karnataka sanga

That Anat Heli Na Somashekar in Shimoga karnataka sanga

That Anat Heli Na Somashekar in Shimoga karnataka sanga

That Anat Heli Na Somashekar in Shimoga karnataka sanga

ಇದನ್ನೂ ಓದಿ – ನಡು ರಸ್ತೆಯಲ್ಲೆ ನಿಂತ ಬಸ್ಸು, ಅದೇ ಮಾರ್ಗದಲ್ಲಿ ಬಂತು ಸಂಸದರ ಕಾರು, ಮುಂದೇನಾಯ್ತು? ಫೋಟೊ ವೈರಲ್

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment