ಹೊನ್ನಾವರದಿಂದ ಶಿವಮೊಗ್ಗ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಮರಳಿದ ಇಂಜಿನಿಯರ್ ಗೆ ಕಾದಿತ್ತು ಆಘಾತ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 1 APRIL 2023

SHIMOGA : ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ (parking) ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದ ಪಲ್ಸರ್ ಬೈಕ್ ಕಳ್ಳತನವಾಗಿದೆ. ಪಾರ್ಕಿಂಗ್ ನಿರ್ವಹಣೆ ಮಾಡುವ ಸಿಬ್ಬಂದಿಯ ನಿರ್ಲಕ್ಷ್ಯವೆ ಘಟನೆಗೆ ಕಾರಣ ಎಂದು ಆರೋಪಿಸಿ ಇಂಜಿನಿಯರ್ ಒಬ್ಬರು ದೂರು ನೀಡಿದ್ದಾರೆ.

Ksrtc-bus-stand-front-views

ಇಂಜಿನಿಯರ್ ಶಿವಶಂಕರ್ ಎಂಬುವವರು ಹೊನ್ನಾವರಕ್ಕೆ ತೆರಳಬೇಕಿತ್ತು. ತಮ್ಮ ಬೈಕನ್ನು ಶಿವಮೊಗ್ಗದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ (parking) ಸ್ಥಳದಲ್ಲಿ ನಿಲ್ಲಿಸಿ, ರಶೀದಿ ಪಡೆದು ತೆರಳಿದ್ದರು. ಹೊನ್ನಾವರದಿಂದ ಸಂಜೆ ಬಂದು ಪಾರ್ಕಿಂಗ್ ಸ್ಥಳಕ್ಕೆ ತೆರಳಿದಾಗ ಬೈಕ್ ಕಾಣಿಸಲಿಲ್ಲ. ಎಲ್ಲೆಡೆ ಹುಡುಕಾಡಿದ ಶಿವಶಂಕರ್ ಅವರು, ಸಿಬ್ಬಂದಿಯನ್ನು ವಿಚಾರಿಸಿದಾಗ ಎರಡು ದಿನ ಸಮಯ ನೀಡಿದರೆ ಬೈಕ್ ಹುಡುಕಿ ಕೊಡುವುದಾಗಿ ತಿಳಿಸಿದ್ದಾರೆ.

ಎರಡು ದಿನದ ನಂತರ ಪುನಃ ಪಾರ್ಕಿಂಗ್ ಸ್ಥಳಕ್ಕೆ ತೆರಳಿದಾಗ ಪಾರ್ಕಿಂಗ್ ಸಿಬ್ಬಂದಿ ಕೈ ಚೆಲ್ಲಿದ್ದಾರೆ. ಈ ಹಿನ್ನೆಲೆ ಶಿವಶಂಕರ್ ಅವರು ಪಾರ್ಕಿಂಗ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಬೈಕ್ ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ –  ಕಾಡಿನ ಮಧ್ಯೆ ಮರಕ್ಕೆ ನೇಣು ಬಿಗದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ, ಪಕ್ಕದಲ್ಲಿ ಸಿಕ್ತು ಬೈಕ್

Nammur-News-Whatsapp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment