ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | POLITICAL | 22 ಏಪ್ರಿಲ್ 2022
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 2 ದಿನಗಳ ಜಿಲ್ಲಾ ಭೇಟಿಯಿಂದ ಯಾವುದೇ ಪ್ರಯೋಜನವಾಗಿಲ್ಲ. ಇದೊಂದು ಕಾಟಾಚಾರದ ಭೇಟಿಯಾಗಿತ್ತು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಮುಖಂಡ ತೀ.ನ.ಶ್ರೀನಿವಾಸ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆಲ್ಲ ಮುಖ್ಯಮಂತ್ರಿಗಳು ಯಾವುದೇ ಜಿಲ್ಲೆಗೆ ಭೇಟಿ ನೀಡಿದರೂ ಅಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದರು. ಆಯಾ ಜಿಲ್ಲೆಗಳ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿ, ಸಾಧ್ಯವಾದಲ್ಲಿ ಅಲ್ಲಿಯೇ ಪರಿಹಾರ ಒದಗಿಸುತ್ತಿದ್ದರು ಎಂದರು.
ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂತಹ ಯಾವುದೇ ಕೆಲಸವನ್ನೂ ಮಾಡಲಿಲ್ಲ. ಕೇವಲ ಚುನಾವಣಾ ಸಿದ್ಧತೆಗಾಗಿ ಅವರು ಬಂದಂತಾಗಿತ್ತು. ಸಾರ್ವಜನಿಕರ ಕೋಟ್ಯಂತರ ರೂ. ತೆರಿಗೆ ಹಣವನ್ನು ವ್ಯರ್ಥಗೊಳಿಸಿದ್ದಾರೆ. ಅವರಿಗೆ ಜನರ ಸಮಸ್ಯೆ ಬಗ್ಗೆ ಚಿಂತೆಯೇ ಇಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳಿಗೂ ಜನರ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ. ಮಲೆನಾಡ ಸಮಸ್ಯೆಗಳ ಕುರಿತು ಮೇ ಮೊದಲ ವಾರದಲ್ಲಿ ಸಭೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಆದರೆ ಈ ಹಿಂದೆಯೇ ಇದರ ಬಗ್ಗೆ ಸಭೆ ನಡೆದಿತ್ತು. ಸಭೆ ನಡೆದು ಹಲವು ತಿಂಗಳಾದರೂ ಸಭಾ ನಡವಳಿಕೆಯನ್ನೇ ಈವರೆಗೂ ಬರೆದಿಲ್ಲ ಎಂದರು.
ಅದೇ ರೀತಿ ಅರಣ್ಯ ಭೂಮಿ ಕುರಿತು ಸಂಸದರು 4 ತಿಂಗಳ ಹಿಂದೆಯೇ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತೀರ್ಮಾನಿಸಲಾಗಿತ್ತು. ಈವರೆಗೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಅಜೀಜ್, ಅಶೋಕ್, ರವಿ ಮತ್ತಿತರರು ಇದ್ದರು.
ಇದನ್ನೂ ಓದಿ | ‘ಬಿಜೆಪಿ ನಾಯಕರ ಆಸ್ತಿ ಎಷ್ಟಿತ್ತು? ಎಷ್ಟಾಗಿದೆ? ಶಿವಮೊಗ್ಗ ನಗರದಲ್ಲಿ ಯಾರೆಲ್ಲರ ಆಸ್ತಿ ಎಷ್ಟಿದೆ?’
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422