ಶಿವಮೊಗ್ಗದಲ್ಲಿ ಬೆಳಗ್ಗೆ ಅಂಗಡಿ ಬಾಗಿಲು ತೆಗೆದು ಒಳ ಹೋದ ಕೆಲಸಾಗರರಿಗೆ ಕಾದಿತ್ತು ಶಾಕ್

ಶಿವಮೊಗ್ಗ
LIVE

SHIVAMOGGA LIVE NEWS | 22 APRIL 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ರೂಫಿಂಗ್‌ ಶೀಟ್‌ ತೆರೆದು ಅಂಗಡಿಯೊಂದರ ಒಳಗೆ ನುಗ್ಗಿರುವ ಕಳ್ಳರು ಕ್ಯಾಶ್‌ ಬಾಕ್ಸ್‌ನಲ್ಲಿ ಇಟ್ಟಿದ್ದ 2.40 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಾರೆ. ಶಿವಮೊಗ್ಗದ ಗಾರ್ಡನ್‌ ಏರಿಯಾದಲ್ಲಿರುವ ಸೋಲಂಕಿ ಟ್ರೇಡರ್ಸ್‌ನಲ್ಲಿ ಘಟನೆ ಸಂಭವಿಸಿದೆ.

ವ್ಯಾಪಾರದ ಹಣ 2.40 ಲಕ್ಷ ರೂ. ಅನ್ನು ಬ್ಯಾಂಕ್‌ಗೆ ಕಟ್ಟಬೇಕಿತ್ತು. ಅದನ್ನು ಎಣಿಸಿ ಏ.19ರ ರಾತ್ರಿ ಕ್ಯಾಶ್‌ ಬಾಕ್ಸ್‌ನಲ್ಲಿ ಇರಿಸಲಾಗಿತ್ತು. ಏ.20ರಂದು ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವವರು ಬಾಗಿಲು ತೆಗದಾಗ ಕ್ಯಾಶ್‌ ಬಾಕ್ಸ್‌ ತೆರೆದ ಸ್ಥಿತಿಯಲ್ಲಿತ್ತು. ಕಡತಗಳು ಚೆಲ್ಲಾಪಿಲ್ಲಿಯಾಗಿದ್ದವು. ಪರಿಶೀಲಿಸಿದಾಗ ಹಣ ಇರಲಿಲ್ಲ. ಕಳ್ಳರು ರೂಫಿಂಗ್‌ ಶೀಟ್‌ ತೆಗೆದು, ಗೋಡೋನ್‌ ಮೂಲಕ ಅಂಗಡಿಯೊಳಗೆ ನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ದಿಢೀರ್‌ ಸ್ಥಗಿತಗೊಂಡ ಸಿಗಂದೂರು ಲಾಂಚ್‌ಗಳು, ಸ್ಥಳೀಯರು, ಪ್ರವಾಸಿಗರಿಗೆ ಸಂಕಷ್ಟ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment