ಮಧ್ಯರಾತ್ರಿ ಕಣ್ಣು ಬಿಟ್ಟಾಗ ಬೆಡ್‌ ರೂಮ್‌ನಲ್ಲಿದ್ದರು ಕಳ್ಳರು, ಮನೆಯೊಳಗೆ ನುಗ್ಗಿದ್ದು ಹೇಗೆ? ಏನೇನು ಕದ್ದೊಯ್ದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

Shivamogga-Live-9-years-Number-1.avif

SHIVAMOGGA LIVE NEWS | 15 JANUARY 2024

SHIMOGA : ಮನೆ ಬಾಗಿಲಿನ ಚಿಲಕ ಹಾಕದೆ ಬೆಡ್‌ರೂಮ್‌ನಲ್ಲಿ ಮಲಗಿದ್ದಾಗ ಒಳ ನುಗ್ಗಿದ ಕಳ್ಳರು ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಸರ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ನಗರದ ಪಂಚವಟಿ ಕಾಲೋನಿಯಲ್ಲಿರುವ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ.

ತಿರುಣವುಕರಸು (77) ಎಂಬುವವರು ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದ್ದು ಮಧ್ಯರಾತ್ರಿವರೆಗು ಟಿವಿ ನೋಡಿ ಮಲಗಿದ್ದರು. ರಾತ್ರಿ 1 ಗಂಟೆ ಹೊತ್ತಿಗೆ ಮನೆಯೊಳಗೆ ನುಗ್ಗಿರುವ ಕಳ್ಳರು, ಬೆಡ್‌ ರೂಮ್‌ನಲ್ಲಿ ಮಲಗಿದ್ದ ತಿರುಣವುಕರಸು ಅವರ ಕೊರಳಲಿದ್ದ 32 ಗ್ರಾಂನ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಎಚ್ಚರಗೊಂಡ ತಿರುಣವುಕರು ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಅಷ್ಟರಲ್ಲಿ ಬೆಡ್‌ ರೂಂ ಬಾಗಿಲಿನ ಚಿಲಕ ಹಾಕಿ ಕಳ್ಳರು ಪರಾರಿಯಾಗಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ, ಜೀವ ಬೆದರಿಕೆ

ನೆರೆಹೊರೆಯವರು ಬಂದು ಬೆಡ್‌ ರೂಂ ಚಿಲಕ ತೆಗೆದಾಗ ಘಟನೆ ಬೆಳಕಿಗೆ ಬಂದಿದೆ. ರಾತ್ರಿ ಮಲಗುವಾಗ ಮನೆ ಬಾಗಿಲಿನ ಚಿಲಕ ಹಾಕದೆ ಇದ್ದಿದ್ದರಿಂದ ಕಳ್ಳರು ಸುಲಭವಾಗಿ ಒಳ ನುಗ್ಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಂದಾಜು 1.52 ಲಕ್ಷ ರು. ಮೌಲ್ಯದ ಚಿನ್ನದ ಸರ ಕಳ್ಳತನವಾಗಿದೆ ಆರೋಪಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : January 15, 2024

Leave a Comment