ಗ್ಯಾರಂಟಿ ಸಮಾವೇಶ, ಮಹಿಳೆಯರ ಭರ್ಜರಿ ಡಾನ್ಸ್, ಪುನೀತ್‌ಗೆ ಟಾರ್ಚ್ ಲೈಟ್ ಸಲ್ಯೂಟ್, ಸ್ಥಳದಲ್ಲೇ ಯೋಜನೆಗೆ ನೋಂದಣಿ

SHIVAMOGGA LIVE NEWS | 24 FEBRUARY 2024

SHIMOGA : ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾಮಟ್ಟದ ಸಮಾವೇಶದಲ್ಲಿ ಇವತ್ತು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು‌‌. ಹಾಡುಗಳಿಗೆ ಹೆಜ್ಜೆ ಹಾಕಿದರು. ಘೋಷಣೆಗಳನ್ನು ಕೂಗಿದರು‌.

ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು

ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಜಿಲ್ಲೆಯ ವಿವಿಧೆಡೆಯ ದೊಡ್ಡ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಪೆಂಡಾಲ್‌ನಲ್ಲಿ ಹಾಕಲಾಗಿದ್ದ ಚೇರುಗಳು ಭರ್ತಿಯಾಗಿ, ಕ್ರೀಡಾಂಗಣದ ಆವರಣದಲ್ಲಿ ಮಹಿಳೆಯರು ನಿಂತು ಕಾರ್ಯಕ್ರಮ ವೀಕ್ಷಿಸಿದರು‌.

Kalleshwara-Enterprises.webp

Samavesha

ಡಾ.ರಾಜ್, ಅಪ್ಪು ಹಾಡಿಗೆ ಮಹಿಳೆಯರ ಡಾನ್ಸ್

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಆರಂಭಕ್ಕು ಮುನ್ನ ಗಾಯಕರು ವಿವಿಧ ಚಿತ್ರಗೀತೆ ಹಾಡಿದರು‌. ಈ ವೇಳೆ ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಹಾಡುಗಳಿಗೆ ಮಹಿಳೆಯರು, ಯುವತಿಯರು ನರ್ತಿಸಿದರು‌. ಪುನೀತ್ ಅವರನ್ನು ಸ್ಮರಿಸಲು ಮೊಬೈಲ್ ಟಾರ್ಚ್ ಆನ್ ಮಾಡಿ ಪ್ರದರ್ಶಿಸಿದರು.

Samavesha

ಗ್ಯಾರಂಟಿ ಯೋಜನೆಗೆ ಸ್ಥಳದಲ್ಲೆ ನೋಂದಣಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳ ನೋಂದಣಿಗೆ ಸಮಾವೇಶದ ಸ್ಥಳದಲ್ಲಿ ಕೌಂಟರ್ ಸ್ಥಾಪಿಸಲಾಗಿತ್ತು. ಫಲಾನುಭವಿಗಳು ಆಯಾ ಯೋಜನೆಯ ಕೌಂಟರ್‌ಗೆ ತೆರಳಿ ಮಾಹಿತಿ ಪಡೆದರು‌. ಕೆಲವರು ತಮ್ಮ ಹೆಸರು ನೋಂದಣಿ ಮಾಡಿಸಿದರು. ಶನಿವಾರ ಸಂಜೆವರೆಗು ನೋಂದಣಿ ಪ್ರಕ್ರಿಯೆ ನಡೆಯಿತು‌.

Samavesha

Samavesha

Samavesha

ಇದನ್ನೂ ಓದಿ – ಶಿವಮೊಗ್ಗಕ್ಕೆ ಹತ್ತು ಅಶ್ವಮೇಧ ಬಸ್, ಟೇಪ್ ಕತ್ತರಿಸಿದರು ಡಿಸಿಎಂ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment