ಕಾಲೇಜು ಲೆಕ್ಚರರ್‌ಗೆ ರಸ್ತೆಯಲ್ಲಿ ಚಾಕು ತೋರಿಸಿ ಬೆದರಿಕೆ, ದರೋಡೆ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 28 FEBRUARY 2023

SHIMOGA : ನಡುರಾತ್ರಿ ಉಪನ್ಯಾಸಕರೊಬ್ಬರಿಗೆ (lecturer) ಚಾಕು ತೋರಿಸಿ ದರೋಡೆ ಮಾಡಲಾಗಿದೆ. ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ. ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

crime name image

JNNCE ಕಾಲೇಜು ಉಪನ್ಯಾಸಕ (lecturer) ರಾಜಪ್ರಕಾಶ್ ಅವರಿಗೆ ಚಾಕು ತೋರಿಸಿ ಬೆದರಿಸಲಾಗಿದೆ.

ಹೇಗಾಯ್ತು ಘಟನೆ?

ರಾಜಪ್ರಕಾಶ್ ಅವರು ಸ್ನೇಹಿತರೊಂದಿಗೆ ಸಿದ್ಧಾಪುರ ಮತ್ತು ಕಾರವಾರದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವಮೊಗ್ಗಕ್ಕೆ ಮರಳಿದ್ದರು. ರಾತ್ರಿ 12.30ರ ಹೊತ್ತಿಗೆ ಸ್ನೇಹಿತ ನಿರಂಜನ್ ಎಂಬುವವರೊಂದಿಗೆ ಸವಳಂಗ ರಸ್ತೆಗೆ ಆಗಮಿಸಿದ್ದರು. ನಿರಂಜನ್ ಅವರು ಬೈಕ್ ತರಲು ಹೋಗಿದ್ದಾಗ, ರಾಜಪ್ರಕಾಶ್ ಅವರು ಸವಳಂಗ ರಸ್ತೆಯಲ್ಲಿ ನಿಂತಿದ್ದರು.

ಈ ವೇಳೆ ಎರಡು ಬೈಕಿನಲ್ಲಿ ಬಂದ ನಾಲ್ವರು, ರಾಜಪ್ರಕಾಶ್ ಅವರ ಬಳಿ ಸಮಯ ಕೇಳಿದ್ದಾರೆ. ಸಮಯ ಹೇಳುತ್ತಿದ್ದಂತೆ ಚಾಕು ತೋರಿಸಿ ಬೆದರಿಕೆ ಒಡ್ಡಿದ್ದಾರೆ. ಸ್ಮಾರ್ಟ್ ವಾಚ್, ಸ್ಯಾಮ್ ಸಂಗ್ ಮೊಬೈಲ್, ಜೇಬಿನಲ್ಲಿದ್ದ 1 ಸಾವಿರ ರೂ. ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ – ಸವಳಂಗ ರಸ್ತೆಯಲ್ಲಿ ಬೈಕುಗಳು ಮುಖಾಮುಖಿ ಡಿಕ್ಕಿ, ಗಂಭೀರ ಗಾಯ, ಎಸ್ಕಾರ್ಟ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ

ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

JNNCE College Shimoga VTU Rank

Leave a Comment