ಶಿವಮೊಗ್ಗ ನಗರದಲ್ಲಿ ಇವತ್ತು ಮೂರು ಕಡೆ ಕಂಟೈನ್ಮೆಂಟ್ ಜೋನ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 JUNE 2021 ➤ ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ನಗರದಲ್ಲಿ ಕರೋನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇವತ್ತು ಮೂರು ಕಡೆ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ.

ನಗರದ ಮಂಜುನಾಥ ಬಡಾವಣೆಯ ಮೊದಲ ಅಡ್ಡರಸ್ತೆ, ಶರಾವತಿನಗರದ ಬಿ ಬ್ಲಾಕ್‍, ಟಿಪ್ಪುನಗರದ ಮೂರನೆ ಅಡ್ಡರಸ್ತೆಯಲ್ಲಿ ಕಂಟೈನ್ಮೆಂಟ್ ಜೋನ್ ರಚಿಸಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕಂಟೈನ್ಮೆಂಟ್‍ ಜೋನ್ ರಚಿಸಿ, ಪರಿಶೀಲನೆ ನಡೆಸಿದರು.

ಎರಡನೆ ಅಲೆ ಕರೋನದ ಸಂದರ್ಭ ಶಿವಮೊಗ್ಗ ನಗರದಲ್ಲಿ ಈತನಕ 79 ಕಡೆ ಕಂಟೈನ್ಮೆಂಟ್ ರಚಿಸಲಾಗಿದೆ. ಈ ಪೈಕಿ ಎರಡು ಕಡೆ ಕಂಟೈನ್ಮೆಂಟ್ ತೆರವು ಮಾಡಲಾಗಿದೆ. ಇನ್ನು 77 ಕಡೆ ಕಂಟೈನ್ಮೆಂಟ್ ಜೊನ್‍ಗಳಿದ್ದು, ಪಾಲಿಕೆ ಅಧಿಕಾರಿಗಳು ನಿತ್ಯ ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ಮುಂದೆ ಕರೋನ ಪರೀಕ್ಷೆಗೆ ಆಸ್ಪತ್ರೆಗೆ ಹೋಗೋದೆ ಬೇಡ. ನಿಮ್ಮ ಮನೆಗೆ ಬಂದು ಸ್ವ್ಯಾಬ್ ಪಡೆಯಲಾಗುತ್ತದೆ. ಇಲ್ಲಿರುವ ನಂಬರ್‍ಗೆ ಕರೆ ಮಾಡಿ, ಮಾಹಿತಿ ಪಡೆಯಿರಿ.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಕೊಡಚಾದ್ರಿ ಟ್ರೆಕ್ಕಿಂಗ್‌: ಹೃದಯಾಘಾತದಿಂದ ಸಿನಿಮಾ ನಿರ್ಮಾಪಕನ ಪುತ್ರ ಸಾವು