ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021
ಶಿವಮೊಗ್ಗ: ನಮ್ಮ ಹಳ್ಳಿ ಥಿಯೇಟರ್, ವಿಶ್ವಪಥ ಕಲಾ ಸಂಗಮ (ವಿಕಸಂ) ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಫೆ.5 ರಿಂದ 7 ರ ವರೆಗೆ ಪ್ರತಿ ದಿನ ಸಂಜೆ 6.30ಕ್ಕೆ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ವಿಕಸಂ ಸಂಸ್ಥೆಯ ಮುಖ್ಯಸ್ಥ ಚೇತನ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೇತನ್ ಫೆ.5 ರಂದು ಭಾಸ್ಕರ್ ನೀನಾಸಂ ನಿರ್ದೇಶನದ ಊರು ಸುಟ್ಟರು ಹನುಮಪ್ಪ ಹೊರಗ, ಫೆ.6 ರಂದು ದುಂಡಿರಾಜ್ ರಚನೆಯ ಅಶೋಕ್ ಬಿ. ನಿರ್ದೇಶನದ ಪುಕ್ಕಟೆ ಸಲಹೆ, ಫೆ.7 ರಂದು ಕಂಬಾರರ ಜಿ.ಕೆ.ಮಾಸ್ತರರ ಪ್ರಣಯ ಪ್ರಸಂಗ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಪ್ರತಿ ನಾಟಕಕ್ಕೂ 50 ರೂ. ಶುಲ್ಕ ನಿಗದಿ ಮಾಡಲಾಗಿದೆ. ಮೂರು ನಾಟಕಗಳ ಟಿಕೇಟನ್ನು ಒಟ್ಟಿಗೆ ಖರೀದಿಸಿದರೆ 120 ರೂ ನೀಡಬಹುದು. ಬುಕ್ ಮೈ ಶೋ ಮೂಲಕ ಆನ್‍ಲೈನ್‍ನಲ್ಲೂ ಟಿಕೆಟ್ ಲಭ್ಯವಿರುತ್ತದೆ. ಇದಲ್ಲದೇ ದುರ್ಗಿಗುಡಿಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ನೆಹರೂ ರಸ್ತೆಯ ರಾಯಲ್ ಕಾಫಿ, ಪೊಲೀಸ್ ಚೌಕಿಯ ಲಕ್ಷ್ಮೀನಾರಾಯಣ ಸ್ವೀಟ್ಸ್, ದ್ರೌಪದಮ್ಮ ಸರ್ಕಲ್ಲಿನ ಡಿ.ಜೆ. ಫ್ಯಾನ್ಸಿ ವರ್ಡ್‍ನಲ್ಲಿ ಟಿಕೇಟುಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗೆ 98450 14229, 95380 20367 ನ್ನು ಸಂಪರ್ಕಿಸಬಹುದು ಎಂದರು.
ನಾಟಕೋತ್ಸವದ ಉದ್ಘಾಟನೆ
ಫೆ.5 ರ ಸಂಜೆ 6.30ಕ್ಕೆ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ನಾಟಕೋತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ. ಕಲಾವಿದರ ಒಕ್ಕೂಟದ ಅಧ್ಯಕ್ಷ ಕೊಟ್ರಪ್ಪ ಜಿ ಹಿರೇಮಾಗಡಿ, ವಿಕಸಂ ಅಧ್ಯಕ್ಷ ಬಿ.ಅಶೋಕ್, ನಮ್ಮಹಳ್ಳಿ ಥಿಯೇಟರ್‍ನ ಅಧ್ಯಕ್ಷ ಪ್ರವೀಣ್ ಹಾಲ್ಮತ್ತೂರು ಇರಲಿದ್ದಾರೆ.
ಫೆ.7 ರ ಸಂಜೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಸಮಾರೋಪ ಭಾಷಣ ಮಾಡಲಿದ್ದಾರೆ. ರಂಗಕರ್ಮಿ ಬಿ.ವಿ.ತಿಪ್ಪಣ್ಣ ಮತ್ತಿತರರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಮಧುಸೂದನ್ ಇದ್ದರು.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200