ಶಿವಮೊಗ್ಗ: ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ತಾಂತ್ರಿಕ ಕಾರಣಗಳಿಂದ ಅಥವಾ ಮರೆತು ಅರ್ಜಿಗಳನ್ನು ಅಪೂರ್ಣವಾಗಿ ಬಿಟ್ಟಿರುವ ಅಭ್ಯರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮತ್ತೊಮ್ಮೆ ಅವಕಾಶ ನೀಡಿದೆ. ಅಂತಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು (application online) ಪೂರ್ಣಗೊಳಿಸಲು ಫೆಬ್ರವರಿ 3 ರಿಂದ 12 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಮುಖಾಂಶ
- ಅವಕಾಶ ಯಾರಿಗೆ?: ಈಗಾಗಲೇ ಅರ್ಜಿ ಸಲ್ಲಿಸಿ, ಅವುಗಳು ಅಪೂರ್ಣವಾಗಿದ್ದರೆ ಮಾತ್ರ ಈ ಸಮಯದಲ್ಲಿ ಸರಿಪಡಿಸಬಹುದು. ಹೊಸದಾಗಿ ಅರ್ಜಿ ಸಲ್ಲಿಸಲು ಇದರಲ್ಲಿ ಅವಕಾಶವಿರುವುದಿಲ್ಲ.
- ದಿನಾಂಕ: ಫೆಬ್ರವರಿ 03 ರಿಂದ ಫೆಬ್ರವರಿ 12 ರವರೆಗೆ
- ವಿಧಾನ: ಅಭ್ಯರ್ಥಿಗಳು ನಿಗದಿತ ವೆಬ್‌ಸೈಟ್‌ನಲ್ಲಿರುವ 4 ಹಂತಗಳನ್ನು ಪೂರೈಸುವ ಮೂಲಕ ಅರ್ಜಿಯನ್ನು ಪೂರ್ಣಗೊಳಿಸಬೇಕು
ಅರ್ಜಿ ಪೂರ್ಣಗೊಳಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ಇಲ್ಲಿರುವ ಲಿಂಕ್ ಮೂಲಕ ಲಾಗಿನ್ ಆಗಿ ತಮ್ಮ ವಿವರಗಳನ್ನು ಅಪ್‌ಡೇಟ್ ಮಾಡಬಹುದು. https://karnemakaone.kar.nic.in/abcd/ ವೆಬ್‌ಸೈಟ್ ಲಿಂಕ್‌ನಲ್ಲಿ ಅಪ್‌ಡೇಟ್ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಅಥವಾ ಗೊಂದಲಗಳಿದ್ದಲ್ಲಿ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಯನ್ನು ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಬಣಕಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ – ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?
