ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಜಿಲ್ಲೆಯ ಸೋಗಾನೆ ಗ್ರಾಮದಲ್ಲಿ ರೈತರೊಬ್ಬರು ಬೆಳೆದಿದ್ದ ಬೆಳೆಗಳಿಗೆ (Crops) ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ರಾತ್ರಿ ಯಾರೋ ಕಿಡಿಗೇಡಿಗಳು ಈ ಬಣವೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಸುಮಾರು ₹50,000 ಮೌಲ್ಯದ ಬೆಳೆಗಳು ಸಂಪೂರ್ಣ ಭಸ್ಮವಾಗಿವೆ. ಈ ಹಿಂದೆ ಇದೇ ಜಮೀನಿನಲ್ಲಿ ರೈತರು ಬೆಳೆಸಿದ್ದ ತೆಂಗಿನ ಗಿಡಗಳನ್ನು ಸಹ ಕಿಡಿಗೇಡಿಗಳು ಕಿತ್ತು ಹಾಕಿ ತೊಂದರೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Sogane-Board-in-Shivamogga-Taluk

ಸಂತೆಕಡೂರು ನಿವಾಸಿ ಹಾಲೇಶ್ ನಾಯ್ಕ್ ಎಂಬುವರು ಸೋಗಾನೆ ಗ್ರಾಮದಲ್ಲಿ ಎರಡು ಎಕರೆ ಬಗರ್ ಹುಕುಂ ಜಮೀನಿನಲ್ಲಿ ತಮ್ಮ ಪತ್ನಿ ಲೋಕಿ ಬಾಯಿ ಅವರೊಂದಿಗೆ ದಶಕಗಳಿಂದ ಕೃಷಿ ಮಾಡಿಕೊಂಡಿದ್ದಾರೆ. ಅವರು ಹುರುಳಿ ಮತ್ತು ತೊಗರಿ ಬೆಳೆಗಳನ್ನು ಬೆಳೆದಿದ್ದು, ಕಟಾವು ಮಾಡಿ, ಜಮೀನಿನಲ್ಲಿರುವ ಶೆಡ್ ಪಕ್ಕದಲ್ಲಿ ಬಣವೆ ಹಾಕಿದ್ದರು.

ಇದನ್ನೂ ಓದಿ – ಕಾರು, ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ನೆರವಾದ ಶಿವಮೊಗ್ಗ ಜಿಲ್ಲಾಧಿಕಾರಿ, ಆಗಿದ್ದೇನು?

JNNCE-COLLEGE-ADVT.

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment