ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಜೂನ್ 2020
ಬೆಂಗಳೂರಿನಲ್ಲಿ ಬಂದೋಬಸ್ತ್‌ಗೆ ತೆರಳಿದ್ದ ಮತ್ತೆ ಮೂವರು ಪೊಲೀಸರಿಗೆ ಕರೋನ ಸೋಂಕು ತಗುಲಿದೆ. ಇದರಿಂದ KSRP ಬಟಾಲಿಯನ್‍ನಲ್ಲಿ ಮತ್ತಷ್ಟು ಆತಂಕ ಮೂಡಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮತ್ತೆ ಮೂವರಿಗೆ ಕರೋನ ಸೋಂಕು
ಶಿವಮೊಗ್ಗದಲ್ಲಿರುವ KSRP ಬಟಾಲಿಯನ್‍ನ ಮತ್ತೆ ಮೂವರು ಪೊಲೀಸರಿಗೆ ಸೋಂಕು ತಗುಲಿದೆ. 21 ವರ್ಷದ ಇಬ್ಬರು ಮತ್ತು 23 ವರ್ಷದ ಒಬ್ಬ ಸಿಬ್ಬಂದಿಗೆ ಸೋಂಕು ತಗುಲಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ.
ಪಿ2830 ಸಂಪರ್ಕದಿಂದ ಸೋಂಕು
ಮೂವರು ಸೋಂಕಿತರಿಗೂ ಪಿ2830 ಸಂಪರ್ಕಿವಿದೆ ಎಂದು ತಿಳಿಸಲಾಗಿದೆ. 23 ವರ್ಷದ ಪಿ2830 ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣಕ್ಕೆ ಇವರಿಗೆ ಸೋಂಕು ತಗುಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪಾದರಾಯನಪುರ ನಂಟು
ಬೆಂಗಳೂರಿನ ಪಾದರಾಯನಪುರದಲ್ಲಿ ಬಂದೋಬಸ್ತ್ ಡ್ಯೂಟಿಗಾಗಿ ಶಿವಮೊಗ್ಗದಲ್ಲಿರುವ KSRP ಬೆಟಾಲಿಯನ್ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲಿಗೆ ತೆರಳಿದ್ದ 54 ಪೊಲೀಸರು ಮೇ 27ರಂದು ಶಿವಮೊಗ್ಗಕ್ಕೆ ಹಿಂತಿರುಗಿದ್ದರು. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೆಲವರಿಗೆ ಸೋಂಕು ತಗುಲಿರುವುದು ದೃಢವಾಗಿತ್ತು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]